AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಉತ್ತರ ಕರ್ನಾಟಕ ಭಾಗದ ಓಲಾ, ಊಬರ್ ಚಾಲಕರೇ ಟಾರ್ಗೆಟ್; ಪ್ರಯಾಣಿಕನ ಸೋಗಿನಲ್ಲಿ ಬುಕ್ ಮಾಡಿ ಚಾಕು ತೋರಿಸಿ ಸುಲಿಗೆ

ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ಓಲಾ, ಉಬರ್​ ಚಾಲಕರನ್ನೇ ಟಾರ್ಗೆಟ್ ಮಾಡಿ, ಪ್ರಯಾಣಿಕನ ಸೋಗಿನಲ್ಲಿ ಬುಕ್ ಮಾಡುವ ಮೂಲಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನ ಅರೆಸ್ಟ್ ಮಾಡಲಾಗಿದೆ.​

Bengaluru: ಉತ್ತರ ಕರ್ನಾಟಕ ಭಾಗದ ಓಲಾ, ಊಬರ್ ಚಾಲಕರೇ ಟಾರ್ಗೆಟ್; ಪ್ರಯಾಣಿಕನ ಸೋಗಿನಲ್ಲಿ ಬುಕ್ ಮಾಡಿ ಚಾಕು ತೋರಿಸಿ ಸುಲಿಗೆ
ಆರೋಪಿ ಅರೆಸ್ಟ್​
ಕಿರಣ್ ಹನುಮಂತ್​ ಮಾದಾರ್
|

Updated on: Jun 17, 2023 | 11:11 AM

Share

ಬೆಂಗಳೂರು: ಮಹಾನಗರಕ್ಕೆ ಬದುಕು ಕಟ್ಟಿಕೊಳ್ಳಲು ಬರುವವರಲ್ಲಿ ಉತ್ತರ ಕರ್ನಾಟಕ(North Karnataka) ಭಾಗದ ಜನರೇ ಹೆಚ್ಚು. ಅದೆಷ್ಟೋ ಕನಸುಗಳನ್ನ ಹೊತ್ತು ಬಂದ ಇವರು ಹೊಟ್ಟೆಪಾಡಿಗಾಗಿ, ಜೀವನದ ಬಂಡಿ ನೂಕಲು ಮಾಡದ ಕೆಲಸಗಳಿಲ್ಲ. ಅದರಂತೆ ಕೆಲವರು ಓಲಾ(Ola), ಉಬರ್(Uber) ಚಾಲಕರಾಗಿ ಕೆಲಸ ಮಾಡುತ್ತಾರೆ. ಇಂತಹವರನ್ನೇ ಟಾರ್ಗೆಟ್ ಮಾಡಿದ ಕೆಲವರು ಇದೀಗ ಸುಲಿಗೆಗೆ ನಿಂತಿದ್ದಾರೆ. ಹೌದು ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ಓಲಾ, ಉಬರ್​ ಚಾಲಕರನ್ನೇ ಟಾರ್ಗೆಟ್ ಮಾಡಿ, ಪ್ರಯಾಣಿಕನ ಸೋಗಿನಲ್ಲಿ ಬುಕ್ ಮಾಡುವ ಮೂಲಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಸುಲಿಗೆಗೆ ಇಳಿದಿದ್ದ ಓರ್ವ ಆರೋಪಿ ವಿನಯ್ ಎಂಬಾತನನ್ನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಸುಲಿಗೆ

ಹೌದು ಪೊಲೀಸರಿಗೆ ದೂರು ಕೊಡದಂತೆ ಹೆದರಿಸಿ, ಹೆಚ್​ಎಎಲ್, ಬಾಣಸವಾಡಿ, ಹೈ ಗ್ರೌಂಡ್ಸ್, ಎಂ.ಜಿ ರೋಡ್ ಈ ಭಾಗಗಳಿಂದ ಕ್ಯಾಬ್ ಬುಕ್ ಮಾಡಿ, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ. ಅಷ್ಟೇ ಅಲ್ಲ ಚಾಲಕನ ಕಡೆಯಿಂದ ಅವರ ಕುಟುಂಬಸ್ಥರಿಗೆ ಕರೆ ಮಾಡಿ, ಬೆದರಿಕೆ ಹಾಕಿ ಪೋನ್ ಫೇ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದ. ‘ನಾನು ಆಸ್ಪತ್ರೆಗೆ ಸೇರಿದ್ದೀನಿ, ನನಗೆ ಹಣದ ಅವಶ್ಯಕತೆಯಿದೆ ಎಂದು ಚಾಲಕರ ಕುಟುಂಬಸ್ಥರಿಗೆ ಕರೆ ಮಾಡಿಸುತ್ತಿದ್ದ. ಇದೀಗ ಆರೋಪಿಯನ್ನ ಬಂಧಿಸಿ, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ವಿಚಾರಣೆ ವೇಳೆ ಮತ್ತೆ ನಾಲ್ಕು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ