Bengaluru News: ಆಟೋ ಡ್ರೈವರ್ ಮೇಲೆ ಸಂಚಾರಿ ಪೊಲೀಸ್ ಸಿಬ್ಬಂದಿ ದರ್ಪ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ಒಂದು, ಅಲ್ಲಾಗಿದ್ದೇ ಮತ್ತೊಂದು!

ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಆಟೋ ಚಾಲಕನ ಕೆನ್ನೆಗೆ ಪೊಲೀಸ್​ ಸಿಬ್ಬಂದಿ ಹೊಡೆದಿದ್ದರು. ಈ ಕುರಿತು ತನಿಖೆ ಆರಂಭಿಸಿದ ಅಧಿಕಾರಿಗಳು, ಸಿಸಿಟಿವಿ ಪರಿಶೀಲಿಸಿದಾಗ ಆಟೋ ಚಾಲಕ ಮಾಡಿದ್ದ ಎಡವಟ್ಟು ಬೆಳಕಿಗೆ ಬಂದಿದೆ.

Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 17, 2023 | 8:09 AM

ಬೆಂಗಳೂರು: ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣ(Social Media)ದಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಸಂಚಾರಿ ಪೊಲೀಸ್​(Traffic Police) ಸಿಬ್ಬಂದಿಯೊಬ್ಬರು ಬೆಂಗಳೂರಿನ ಸುಧಾಮನಗರದಲ್ಲಿ ಆಟೋ ಡ್ರೈವರ್​ನ ಕೆನ್ನೆಗೆ ಹೊಡೆದಿದ್ದರು. ಇದನ್ನು ವಿಡಿಯೋ ಮಾಡಿಕೊಂಡಿದ್ದ ಯುವತಿಯೊಬ್ಬಳು ಆಟೋ ಡ್ರೈವರ್ ಮೇಲೆ ಸಂಚಾರಿ ಪೊಲೀಸ್ ಸಿಬ್ಬಂದಿ ದರ್ಪ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಳು. ಇದನ್ನು ನೋಡಿದ ಸಾರ್ವಜನಿಕರು ಕಾಮೆಂಟ್​ ಮಾಡುವ ಮೂಲಕ ಪೊಲೀಸ್​ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಡಿಯೋ ನೋಡಿದ ಹಿರಿಯ ಅಧಿಕಾರಿಗಳು ಸಿಬ್ಬಂದಿ ವಿರುದ್ಧ ಗರಂ ಆಗಿದ್ದು, ತನಿಖೆಗೆ ಸೂಚನೆ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ಒಂದು, ಅಲ್ಲಾಗಿದ್ದೇ ಮತ್ತೊಂದು!

ಆಟೋ ಚಾಲಕ ಮಾಡಿದ ಎಡವಟ್ಟಿಗೆ ಪೊಲೀಸ್​ ಸಿಬ್ಬಂದಿಯವರು ಕೆನ್ನೆಗೆ ಹೊಡೆದಿದ್ದರು. ಹೌದು ತನಿಖೆ ಆರಂಭಿಸಿದ ಅಧಿಕಾರಿಗಳು ಸಿಸಿಟಿವಿ ಪರಿಶೀಲಿಸಿದಾಗ ಆಟೋ ಚಾಲಕ ಮಾಡಿದ್ದ ಎಡವಟ್ಟು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಪೊಲೀಸ್​ ದರ್ಪ: ಕಳ್ಳ ಎಂದು ಯುವಕನಿಗೆ ಹಿಗ್ಗಾಮಗ್ಗಾ ಥಳಿತ; ಪೊಲೀಸರ ವಿರುದ್ಧ ಯುವಕ ಆರೋಪ

ಹಾಗಾದ್ರೆ ಸಿಸಿಟಿವಿಲಿ ಇರೋದೇನು?

ಟ್ರಾಫಿಕ್ ಎಎಸ್​ಐಯೊಬ್ಬರು ಬೈಕ್​ನ ಮೇಲೆ‌ ಬಂದು ಗಾಡಿ ಸೈಡಿಗೆ ಪಾರ್ಕಿಂಗ್ ಮಾಡುತ್ತಿದ್ದರು. ಈ ವೇಳೆ ಗೊತ್ತಿದ್ದೂ ಎಎಸ್​ಐ ಗಾಡಿಗೆ ಆಟೋ ಚಾಲಕ ಡಿಕ್ಕಿ ಹೊಡೆದಿದ್ದ. ಆಟೋ ಗುದ್ದಿದ್ದೇ ತಡ ದಂಗಾಗಿದ್ದ ಎಎಸ್ಐ, ಸ್ವಲ್ಪ ಮಿಸ್ ಆದ್ರೂ ಕೆಳಗೆ ಬೀಳುತ್ತಿದ್ದರು. ಇನ್ನು ಗುದ್ದಿದ ಮೇಲೆ ಆಟೋ ಡ್ರೈವರ್​ನ ಕರೆದು ಈ ಕುರಿತು ಕೇಳಿದ್ದಾರೆ. ಈ ವೇಳೆ ಆತ ವಾದಕ್ಕೆ ನಿಂತು, ನೀವು ಸೈಡಲ್ಲಿರಬೇಕಿತ್ತು ಎಂದು ಪ್ರಶ್ನೆ ಮಾಡಿದ್ದ. ವಾದದ ವೇಳೆ ಕೋಪಗೊಂಡ ಪೊಲೀಸ್​ ಸಿಬ್ಬಂದಿ ಬೈಕ್​ನಿಂದ ಗುದ್ದಿದ್ದಲ್ಲದೆ ವಾಗ್ವಾದಕ್ಕೆ ಇಳಿದು ವಾದ ಮಾಡಿದ್ದಕ್ಕೆ ಕಪಾಳಕ್ಕೆ ಹೊಡೆದಿದ್ದರು.

ಕೇವಲ ಕೆನ್ನೆಗೆ ಹೊಡೆಯೋ ದೃಶ್ಯ ಮಾತ್ರ ಸೆರೆಹಿಡಿದು ವೈರಲ್ ಮಾಡಿದ್ದ ಯುವತಿ

ಇನ್ನು ಈ ವೇಳೆ ವಿಡಿಯೋ ಮಾಡಿದ್ದ ಯುವತಿ, ಕೇವಲ ಕೆನ್ನೆಗೆ ಹೊಡೆಯೋ ದೃಶ್ಯ ಮಾತ್ರ ಸೆರೆಹಿಡಿದು ವೈರಲ್ ಮಾಡಿದ್ದರು. ಅಪಘಾತ ಗಲಾಟೆ ಹಲ್ಲೆ ಎಲ್ಲವನ್ನೂ ನೋಡಿದ್ದರೂ, ಹಲ್ಲೆ ಮಾಡಿದ ವಿಡಿಯೋ ಮಾತ್ರ ರೆಕಾರ್ಡ್ ಮಾಡಿ ಎಸ್ಕೇಪ್ ಆಗಿದ್ದರು. ಸದ್ಯ ತಪ್ಪು ಮಾಹಿತಿ ನೀಡಿದ್ದ ಯುವತಿ ಬಳಿ ಪೊಲೀಸರು ಹೇಳಿಕೆ ಪಡೆಯಲಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ