ಶಿಕ್ಷಕರ ವರ್ಗಾವಣೆ ಬಿಲ್​ ವಿಧೇಯಕ ಅಂಗೀಕಾರ: ಪತಿ-ಪತ್ನಿ ಹಾಗೂ ಪರಸ್ಪರ ಶಿಕ್ಷಕರ ವರ್ಗಾವಣೆಗೆ ಅವಕಾಶ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2022 | 5:45 PM

ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಸಹ ಅಂಗೀಕಾರ ಮಾಡಿದ್ದು, SSLC, ಪಿಯುಸಿ ಪರೀಕ್ಷಾ ಮಂಡಳಿ ವಿಲೀನಕ್ಕೆ ಅವಕಾಶ ನೀಡಲಾಗಿದೆ.

ಶಿಕ್ಷಕರ ವರ್ಗಾವಣೆ ಬಿಲ್​ ವಿಧೇಯಕ ಅಂಗೀಕಾರ: ಪತಿ-ಪತ್ನಿ ಹಾಗೂ ಪರಸ್ಪರ ಶಿಕ್ಷಕರ ವರ್ಗಾವಣೆಗೆ ಅವಕಾಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಶಿಕ್ಷಕರ ವರ್ಗಾವಣೆ ಬಿಲ್ (Teacher Transfer Bill Passed)​ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದು, ಪರಸ್ಪರ ವರ್ಗಾವಣೆ ಹಾಗೂ ಪತಿ-ಪತ್ನಿ ವರ್ಗಾವಣೆಗೆ ಅವಕಾಶವಿದ್ದು, ಇತರೆ ಶಿಕ್ಷಕರು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಸಹ ಅಂಗೀಕಾರ ಮಾಡಿದ್ದು, SSLC, ಪಿಯುಸಿ ಪರೀಕ್ಷಾ ಮಂಡಳಿ ವಿಲೀನಕ್ಕೆ ಅವಕಾಶ ನೀಡಲಾಗಿದೆ. ಇನ್ಮುಂದೆ ಒಂದೇ ಮಂಡಳಿಯಿಂದ SSLC, ಪಿಯುಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಭೂ ಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿಯೊಂದಿಗೆ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿದ್ದು, ಭೂ ಕಬಳಿಕೆ ಕೇಸ್ ವಾಪಸ್ ಪಡೆಯುವ ಉದ್ದೇಶವಿರುವ ಬಿಲ್‌ ಆಗಿದೆ. ಸರ್ಕಾರಿ ಭೂಮಿಯಲ್ಲಿ ಕೃಷಿಗಾಗಿ ಬಳಕೆ ಮಾಡಿದ ರೈತರಿಗೆ ಸಮಸ್ಯೆಯಾಗುತ್ತಿದ್ದು,ಈ ಹಿನ್ನೆಲೆ ಭೂ ಕಬಳಿಕೆ ನಿಷೇಧ ಬಿಲ್‌ ಅಂಗೀಕಾರ ಮಾಡಲಾಗಿದೆ.

ಭೂ ಕಬಳಿಕೆ ನಿಷೇಧ ವಿಧೇಯಕ್ಕೆ ನಿನ್ನೆ ವಿಧಾನಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಎ.ಟಿ.ರಾಮಸ್ವಾಮಿ, ಗೂಳಿಹಟ್ಟಿ ಶೇಖರ್ ವಿರೋಧ ವ್ಯಕ್ತಪಡಿಸಿದ್ರು. ಕಾಯ್ದೆ ಭೂಗಳ್ಳರಿಗೆ ಅನುಕೂಲ ಆಗುವ ಸಾಧ್ಯತೆ ಎಂದು ವಿರೋಧ ಮಾಡಿದ್ದು, ಹೀಗಾಗಿ ಕೆಲವೊಂದು ತಿದ್ದುಪಡಿಯೊಂದಿಗೆ ಇಂದು ವಿಧೇಯಕ ಅಂಗೀಕಾರ ಮಾಡಲಾಗಿದೆ.

& ಬದಲು OR ಅಂತ ಬಳಸಲು ನಿರ್ಧಾರ

ಕರ್ನಾಟಕ ಸ್ಟಾಂಪ್ ವಿಧೇಯಕ ತಿದ್ದುಪಡಿ-2022 ಅಂಗೀಕಾರ ಮಾಡಿದ್ದು, & ಬದಲು OR ಅಂತ ಬಳಸಲು ನಿರ್ಧಾರ ಮಾಡಲಾಗಿದೆ. ಚಾರಿಟೆಬಲ್ ಟ್ರಸ್ಟ್ ಮಾಡುವವರಿಗೆ ಅನ್ವಯವಾಗುವಂತೆ ಹೊಸ ತಿದ್ದುಪಡಿಯೊಂದಿಗೆ ಸ್ಟಾಂಪ್ ತಿದ್ದುಪಡಿ ಬಿಲ್​ನ್ನು ಇಂದು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.

ಬೆಳಗ್ಗೆ ಚರ್ಚೆ ಇಲ್ಲದೆಯೇ ಬಿಲ್ ಪಾಸ್

ಬೆಳಗ್ಗೆ ಚರ್ಚೆ ಇಲ್ಲದೆಯೇ ಬಿಲ್ ಪಾಸ್ ಮಾಡಿದಿರಿ. ಅದರಲ್ಲಿ ಇರುವಷ್ಟು ಹಗರಣ ಎಲ್ಲಿಯೂ ಇಲ್ಲ ಎಂದು ಹರಿಪ್ರಸಾದ್ ಪ್ರಶ್ನೀಸಿದರು. ಮಾಧುಸ್ವಾಮಿ ಉತ್ತರ ನೀಡಿದ್ದು, ತನಿಖೆ ಮಾಡುವುದಕ್ಕೆ ಯಾವ ಪಾರ್ಟಿಯವರು ಕೊಟ್ಟರು ಅಂತ ನೋಡಿ ತನಿಖೆ ಮಾಡುವುದಕ್ಕೆ ಆಗುವುದಿಲ್ಲ. ಎಲ್ಲ ಕೇಸ್​ನಲ್ಲೂ ಮನುಷ್ಯರನ್ನು ಅರೆಸ್ಟ್ ಮಾಡಲೇಬೇಕು ಅಂತಿಲ್ಲ. ಈಶ್ವರಪ್ಪರನ್ನು ಅರೆಸ್ಟ್ ಮಾಡುವುದಕ್ಜೆ ಯಾವುದೇ ಕಾರಣಗಳೂ ಇಲ್ಲ. ಈಶ್ವರಪ್ಪ ತನಿಖೆಗೆ ಸಹಕಾರ ಕೊಟ್ಟಿದ್ದಾರೆ, ಈಶ್ವರಪ್ಪ ಪ್ರಭಾವ ಬೀರಬಾರದು ಅಂತ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯೂ ಕೊಟ್ಟಿದ್ದಾರೆ.

ಪೊಲೀಸರಿಗೆ ಸಹಕಾರ ಕೊಟ್ಟರೆ ಅರೆಸ್ಟ್ ಮಾಡುವ ಅಗತ್ಯ ಇಲ್ಲ. ಸೋಷಿಯಲ್ ಮೀಡಿಯಾ ಏನು ಬೇಕಾದರೂ ಮಾಡಲಿ ಅಂತ ಬಿಡೋಕಾಗಲ್ಲ. ನಿಮ್ಮತ್ರ ಅದನ್ನು ಸಹಿಸುವ ಶಕ್ತಿ ಇದೆ, ನಮಗೆ ಅಷ್ಟು ಶಕ್ತಿ ಇಲ್ಲ. ನೀವೂ ದೂರು ಕೊಡಿ, ಶಕ್ತಿ ಮೀರಿ ನಾವೂ ತನಿಖೆ ಮಾಡಿಸ್ತೀವಿ. ಎಲ್ಲರೂ ಹಿಡಿತಕ್ಕೆ ತೆಗೆದುಕೊಂಡು ರಾಜಕಾರಣ ಮಾಡಬೇಕಾಗುತ್ತದೆ. ಕಾನೂನು ಪ್ರಕಾರ ಬೇಲ್ ಕೊಟ್ಟು ಕಳಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.