ಬಗೆದಷ್ಟು ಬಯಲಾಗುತ್ತಿದೆ ಶಿಕ್ಷಕರ ನೇಮಕಾತಿ ಅಕ್ರಮ: ಮತ್ತೆ 25 ಜನರ ಬಂಧನ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಕರ ನೇಮಕಾತಿ ನಡೆದ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಮತ್ತೆ 25 ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಬಗೆದಷ್ಟು ಬಯಲಾಗುತ್ತಿದೆ ಶಿಕ್ಷಕರ ನೇಮಕಾತಿ ಅಕ್ರಮ: ಮತ್ತೆ 25 ಜನರ ಬಂಧನ
ಸಾಂಧರ್ಬಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Oct 19, 2022 | 6:34 PM

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಕರ ನೇಮಕಾತಿ ನಡೆದ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ (Teachers recruitment scam) ಅಕ್ರಮವಾಗಿ ನೇಮಕವಾಗಿದ್ದ 25 ಜನರನ್ನು ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಇಂದು (ಅ. 19) ಮುಂಜಾನೆ 4 ಗಂಟೆಗೆ 30 ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಎಸ್​ಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ಕೆಜಿಎಫ್, ತುಮಕೂರು, ಚಿತ್ರದುರ್ಗ, ಚಳ್ಳಕೆರೆಯಲ್ಲಿ 100ಕ್ಕೂ ಹೆಚ್ಚು ಸಿಐಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ,  25 ಜನರನ್ನು  ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ

2014-15 ರಲ್ಲಿ ನಡೆದ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಸೌಧ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 465, 768, 471ರ ಅಡಿ ಎಫ್​ಐಆರ್​ ದಾಖಲಾಗಿತ್ತು. ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾಯಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್​ 6 ರಂದು ಸಿಐಡಿ  ಅಧಿಕಾರಿಗಳು 12ಜನ ಆರೋಪಿಗಳನ್ನು ಬಂಧಿಸಿದ್ದರು. ತುಮಕೂರಿನ 10 ಜನ, ವಿಜಯಪುರದ 2  ಶಿಕ್ಷಕರನ್ನು ಸೆರೆ‌ ಹಿಡಿಯಲಾಗಿತ್ತು.

ದಾವಣಗೆರೆಯಲ್ಲಿ ಮೂವರು ಆರೋಪಿಗಳ ಬಂಧನ

ಸಿಐಡಿ ಪೊಲೀಸರು ದಾವಣಗೆರೆಯಲ್ಲಿ ಮೂವರು ಆರೋಪಿಗಳ ಬಂಧಸಿದ್ದರು.  ಯಾಸ್ಮೀನ್ ಅಫ್ಜಾ, ಚೈತ್ರಾ ಬಿಸಿ, ಅಶೋಕ್ ನಾಯಕ್ ಬಂಧಿತ ಆರೋಪಿಗಳು. ಆರೋಪಿಗಳು ದಾವಣಗೆರೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂವರು ಅಕ್ರಮವಾಗಿ ನೇಮಕವಾಗಿದ್ದರು.

ಈ ಹಿಂದೆ ಬಂಧಿತರಾದ ಆರೋಪಿಗಳು 

1. ಶಮೀನಾಜ್, ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬೋರನ ಕಣಿವೆ, ಚಿಕ್ಕನಾಯಕನಹಳ್ಳಿ.

2. ರಾಜೇಶ್ವರಿ ಜಗ್ಲಿ, ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಕೊಡವತ್ತಿ, ಕುಣಿಗಲ್

3. ಕಮಲಾ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಅಲ್ದೂರ್, ತಿಪಟೂರು

4. ನಾಗರತ್ನ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ನಾಗಸಂದ್ರ ಕುಣಿಗಲ್.

5. ದಿನೇಶ್, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹುಲಿಕಲ್, ತುರುವೇಕೆರೆ.

6. ನವೀನ್ ಹನುಮಗೌಡ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಮ್ಲಾಪುರ, ಚಿಕ್ಕನಾಯಕನಹಳ್ಳಿ.

7. ನವೀನ್ ಕುಮಾರ್, ಶಿಕ್ಷಕರು, ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಅಮೃತೂರು ಕುಣಿಗಲ್.

8. ದೇವೇಂದ್ರ ನಾಯ್ಕ್, ಶಿಕ್ಷಕರು, ಸರ್ಕಾರಿ ಕಂಪೋಸಿಟ್ ಪ್ರೌಢಶಾಲೆ ಕೆ.ಮತ್ತಿಘಟ್ಟ ಗುಬ್ಬಿ.

9. ಹರೀಶ್ ಆರ್, ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹೊಳಗೇರಿಪುರ, ಕುಣಿಗಲ್.

10 ಪ್ರಸನ್ನ ಬಿಎಂ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಹುಲಿಕೆರೆ, ತುರುವೇಕೆರೆ.

11. ಮಹೇಶ ಶ್ರೀಮಂತ ಸೂಸಲಾಡಿ,  ಸರ್ಕಾರಿ ಪ್ರೌಢಶಾಲೆ ಹತ್ತಳ್ಳಿ ಬಂಧಿತ ಆರೋಪಿ. ಸದ್ಯ ಸಿಐಡಿ ಅಧಿಕಾರಿಗೆ ಮತ್ತೆ 25 ಜನರನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:30 pm, Wed, 19 October 22