ಬೆಂಗಳೂರು: ಮೈಸೂರು ರಸ್ತೆ-ಕೆಂಗೇರಿ ಮಾರ್ಗದಲ್ಲಿ (Bengaluru Metro) ಉಂಟಾಗಿದ್ದ ತಾಂತ್ರಿಕ ಅಡಚಣೆ ನಿವಾರಣೆಯಾಗಿದ್ದು ನಮ್ಮ ಮೆಟ್ರೋ ರೈಲುಗಳ ಸಂಚಾರ ಯಥಾಸ್ಥಿತಿಗೆ ಮರಳಿದೆ. ಬೆಳಿಗ್ಗೆ 8.30ರಿಂದ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಮಧ್ಯಾಹ್ನ 12 ಗಂಟೆ ಬಳಿಕ ಮತ್ತೆ ರೈಲುಗಳ ಸಂಚಾರ ಆರಂಭವಾಯಿತು. ಬೆಳಿಗ್ಗೆ ಸಂಚಾರ ದಟ್ಟಣೆ ಹೆಚ್ಚಾಗಿರುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಒಂದೇ ಟ್ರ್ಯಾಕ್ನಲ್ಲಿ 25ರಿಂದ 30 ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿತ್ತು. ರೈಲುಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ತೆರಳಲು ಸಾಧ್ಯವಾಗದೆ ಪರದಾಡಿದರು.
ತಾಂತ್ರಿಕ ಸಮಸ್ಯೆಯಿಂದ ಮೆಟ್ರೋ ರೈಲುಗಳ ಸಂಚಾರದಲ್ಲಿ ಸಮಸ್ಯೆಯಾಗಬಹುದು ಎಂದು ‘ನಮ್ಮ ಮೆಟ್ರೋ’ ಗುರುವಾರ ಮುಂಜಾನೆಯೇ ಟ್ವೀಟ್ ಮಾಡಿತ್ತು. ಕೆಂಗೇರಿ ನಿಲ್ದಾಣದಿಂದ ಮೈಸೂರು ಮಾರ್ಗದ ನಿಲ್ದಾಣದವರೆಗೆ ರೈಲುಗಳು ಏಕಮಾರ್ಗದಲ್ಲಿ, ಪ್ರತಿ 25ರಿಂದ 30 ನಿಮಿಷಕ್ಕೆ ಒಂದು ರೈಲಿನಂತೆ ಆಗಮಿಸುತ್ತವೆ’ ಎಂದು ಟ್ವೀಟ್ ಹೇಳಿತ್ತು.
ಒಂದು ರೈಲ್ವೆ ಹಳಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರೂ ಮತ್ತೊಂದು ಟ್ರಾಕ್ನಲ್ಲಿ ಸಂಚಾರ ಯಥಾಸ್ಥಿತಿಯಲ್ಲಿತ್ತು. ಪ್ರತಿ 25 ಅಥವಾ 30 ನಿಮಿಷಗಳಿಗೊಂದರಂತೆ ಕೆಂಗೇರಿಯಿಂದ ಮೈಸೂರು ರಸ್ತೆ ನಿಲ್ದಾಣ ಹಾಗೂ ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿಯವರೆಗೆ ರೈಲು ಓಡಿಸಲಾಗುತ್ತಿತ್ತು.
For kind information to all the Namma metro commuters.
Due to a technical fault, the trains will operate on a single track at 25 to 30 min intervals between Kengeri and Mysore stations .
Maintenance team are at the site for early rectification of the fault .— ನಮ್ಮ ಮೆಟ್ರೋ (@cpronammametro) September 15, 2022
5 ದಿನದ ಮೆಟ್ರೋ ಪಾಸ್
ಈ ಹಿಂದೆ 1 ಹಾಗೂ 3 ದಿನದ ಮೆಟ್ರೋ ಪಾಸ್ಗಳನ್ನು ನಿಗಮವು ಜಾರಿಗೆ ತರಲಾಗಿತ್ತು. ಇದರ ಜೊತೆ ನಿಗಮವು ದಿನಾಂಕ ಮೇ 23, 2022 ರಿಂದ ಜಾರಿಗೆ ಬರುವಂತೆ 5 ದಿನದ ಪಾಸ್ ನೀಡುತ್ತಿದೆ. 5 ದಿನದ ಪಾಸ್ ಬೆಲೆ ₹ 550. ಮರುಪಾವತಿಸಬಹುದಾದ ಸ್ಮಾರ್ಟ್ ಕಾರ್ಡ್ ಭದ್ರತಾ ಠೇವಣಿ 50 ಇರುತ್ತದೆ ಎಂದು ನಿಗಮವು ಹೇಳಿದೆ.
Namma metro Train services between Kengeri and Mysore Road are running as scheduled from 12.00 noon onwards . For kind information of all metro train users .
— ನಮ್ಮ ಮೆಟ್ರೋ (@cpronammametro) September 15, 2022
Published On - 1:05 pm, Thu, 15 September 22