ಬೆಂಗಳೂರು, ಜೂ.27: ಚುನಾವಣಾ(Election) ಹಿನ್ನೆಲೆ ವರ್ಗಾವಣೆಗೊಂಡಿದ್ದ ಅಧಿಕಾರಿಗಳನ್ನು ಮರು ವರ್ಗಾವಣೆ (Transfer) ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣೆಯ ವೇಳೆ “ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ” ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಇದೀಗ ಆ ಅಧಿಕಾರಿಗಳ ಮರು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
* ಪಿ.ನಾಗೇಶ್ ಕುಮಾರ್ -ಹೆಸ್ಕಾಂ ಜಾಗೃತ ದಳ ಹೆಚ್ಚುವರಿ ಅಧೀಕ್ಷಕರು- ಬೆಂ.ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆ.
* ಲಕ್ಷ್ಮಣ ನಾಯ್ಕ್ ವೈ – ಹೆಸ್ಕಾಂ ಜಾಗೃತ ದಳದ ಹೆಚ್ಚುವರಿ ಅಧೀಕ್ಷಕರು- ಹುಬ್ಬಳ್ಳಿಗೆ ವರ್ಗಾವಣೆ
* ಅಬ್ದುಲ್ ಖಾದರ್ – ಹೆಚ್ಚುವರಿ ಎಸ್ಪಿ ಚಿತ್ರದುರ್ಗಕ್ಕೆ ವರ್ಗಾವಣೆ
* ರಾಮಚಂದ್ರಯ್ಯ ಎನ್ ಹೆಚ್. ಹೆಚ್ಚುವರಿ ಎಸ್ಪಿ ತುಮಕೂರಿಗೆ ವರ್ಗಾವಣೆ
* ಲಕ್ಷ್ಮೀನಾರಯಣ ಎವಿ ಹೆಚ್ಚುವರಿ ಎಸ್ಪಿ ರಾಮನಗರಕ್ಕೆ ವರ್ಗಾವಣೆ
* ಜಗದೀಶ್‌ಎಂ- ಉ.ಕ ಹೆಚ್ಚುವರಿ ಎಸ್ಪಿಯಾಗಿ ವರ್ಗಾವಣೆ
* ಉಮೇಶ್ ಪಿ, ಡಿಸಿಪಿ ಸಿಎಆರ್ ಮಂಗಳೂರು ನಗರಕ್ಕೆ ವರ್ಗಾವಣೆ
*ಸಿದ್ಧನಗೌಡ ಯಂಕನಗೌಡ ಪಾಟೀಲ್ – ಡಿಸಿಪಿ ಸಿಎಆರ್ ಬೆಳಗಾವಿ ನಗರಕ್ಕೆ ವರ್ಗಾವಣೆ
ಇದನ್ನೂ ಓದಿ:ಬಾಲಭವನಕ್ಕೆ ಬರುವ ಪ್ರವಾಸಿಗರಿಂದ ಸ್ವಂತ ಖಾತೆಗೆ ಹಣ ವರ್ಗಾವಣೆ; ಇಬ್ಬರು ಸಿಬ್ಬಂದಿ ವಜಾ, ಮತ್ತಿಬ್ಬರು ಅಮಾನತು
ಚುನಾವಣೆ ವೇಳೆ ಹಲವು ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿತ್ತು. ಇದೀಗ ಪುನಃ ವರ್ಗಾವಣೆ ಆಗಿದ್ದ ಅಧಿಕಾರಿಗಳ ಮರು ವರ್ಗಾವಣೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Thu, 27 June 24