ಬಾಲಭವನಕ್ಕೆ ಬರುವ ಪ್ರವಾಸಿಗರಿಂದ ಸ್ವಂತ ಖಾತೆಗೆ ಹಣ ವರ್ಗಾವಣೆ; ಇಬ್ಬರು ಸಿಬ್ಬಂದಿ ವಜಾ, ಮತ್ತಿಬ್ಬರು ಅಮಾನತು

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂ. ಹಗರಣದ ಬೆನ್ನಲ್ಲೇ ಇದೀಗ ಮಯೂರ ಬಾಲ ಭವನದಲ್ಲಿ ಹಣಕಾಸು ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲಭವನಕ್ಕೆ ಬರುವ ಪ್ರವಾಸಿಗರಿಂದ ಸ್ವಂತ ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಇಬ್ಬರು ಸಿಬ್ಬಂದಿ ಸೇವೆಯಿಂದ ವಜಾ ಮಾಡಲಾಗಿದ್ದು, , ಮತ್ತಿಬ್ಬರನ್ನು ಅಮಾನತು ಮಾಡಲಾಗಿದೆ.

ಬಾಲಭವನಕ್ಕೆ ಬರುವ ಪ್ರವಾಸಿಗರಿಂದ ಸ್ವಂತ ಖಾತೆಗೆ ಹಣ ವರ್ಗಾವಣೆ; ಇಬ್ಬರು ಸಿಬ್ಬಂದಿ ವಜಾ, ಮತ್ತಿಬ್ಬರು ಅಮಾನತು
ಬಾಲಭವನದಲ್ಲಿ ಅವ್ಯವಹಾರ
Follow us
ಪ್ರಸನ್ನ ಗಾಂವ್ಕರ್​
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 19, 2024 | 5:57 PM

ಬೆಂಗಳೂರು, ಜೂ.19: ಮಯೂರ ಬಾಲಭವನ(Bal Bhavana)ದಲ್ಲಿ ಹಣಕಾಸು ಅವ್ಯವಹಾರ ಆರೋಪ ಹಿನ್ನೆಲೆ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿದರೆ, ಮತ್ತಿಬ್ಬರನ್ನು ಅಮಾನತುಗೊಳಿಸಲಾಗಿದೆ. ಹೌದು, ಮಯೂರ ಬಾಲ ಭವನ ಸಿಬ್ಬಂದಿಗಳು ಇಲ್ಲಿಗೆ ಬರುವ ಪ್ರವಾಸಿಗರಿಂದ ಬಾಲಭವನ ಸಂಸ್ಥೆಯ ಕ್ಯೂ ಆರ್ ಕೋಡ್ ಬಳಸದೇ ವೈಯಕ್ತಿಕ ಖಾತೆಯ ಕ್ಯೂ ಆರ್ ಕೋಡ್ ಬಳಸಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಹಣ ದುರುಪಯೋಗದ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನಾಲ್ವರ ವಿರುದ್ದ ಎಫ್​ಐಆರ್ ದಾಖಲಿಸಲು ಸಚಿವ ಎಚ್​ಕೆ ಪಾಟೀಲ್ ಸೂಚನೆ

ಇನ್ನು ದ್ವಿತೀಯ ದರ್ಜೆ ಸಹಾಯಕ ರಾಮಚಂದ್ರ ಕೆ ಹಾಗೂ ವಾಹನ ಚಾಲಕ ಅಬ್ದುಲ್ ವಾಜಿದ್ ಎಂಬಿಬ್ಬರನ್ನು  ಸೇವೆಯಿಂದ ವಜಾಗೊಳಿಸಿದರೆ, ಸಹಾಯಕ ಉಗ್ರಾಣಿಕ ವೆಂಕಟೇಶ್ ಮತ್ತು ಸಹಾಯಕ ಪರೊಚಾರಿಕ ಕೋದಂಡರಾಮ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಇದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಡಿಯಲ್ಲಿ ನಡೆದಿರುವ ದುರುಪಯೋಗ ಆಗಿದ್ದು, ನಾಲ್ವರ ವಿರುದ್ದ ಎಫ್​ಐಆರ್ ದಾಖಲಿಸಲು ಸಚಿವ ಎಚ್​ಕೆ ಪಾಟೀಲ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಕೆಪಿಟಿಸಿಎಲ್ ಎಂಜಿನಿಯರ್​​ಗಳ ಹೊಡೆದಾಟ ಕೇಸ್​; ಇಬ್ಬರು ಅಮಾನತು, ಮತ್ತಿಬ್ಬರಿಗೆ ನೋಟಿಸ್

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂ. ಹಗರಣ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಎಸ್‌ಐಟಿ ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿತ್ತು. ಈ ಎಲ್ಲ ಘಟನೆಗಳಿಂದ ಕಾಂಗ್ರೆಸ್​ ಸರ್ಕಾರ ಮುಜುಗರಕ್ಕೆ ಒಳಗಾಗಿದ್ದು, ಈ ಹಿನ್ನಲೆ ಬಿಜೆಪಿ ಜೂ.28 ರಂದು ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Wed, 19 June 24