AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ವೃದ್ಧ ವ್ಯಕ್ತಿಯನ್ನು ಬಸ್ಸಿನಿಂದ ಕೆಳಕ್ಕೆ ತಳ್ಳಿದ ಡ್ರೈವರ್​​ ಮತ್ತು ಕಂಡಕ್ಟರ್ ಅಮಾನತು

ಸರ್ಕಾರಿ ಬಸ್ಸಿನಿಂದ ವೃದ್ಧ ವ್ಯಕ್ತಿಯೊಬ್ಬರನ್ನು ಬಸ್​​ ಕಂಡಕ್ಟರ್ ತಳ್ಳಿ ಹೊರ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ, ಇದೀಗ ಸರ್ಕಾರಿ ಬಸ್ ಚಾಲಕ ಹಾಗೂ ಕಂಡಕ್ಟರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

Viral News: ವೃದ್ಧ ವ್ಯಕ್ತಿಯನ್ನು ಬಸ್ಸಿನಿಂದ ಕೆಳಕ್ಕೆ ತಳ್ಳಿದ ಡ್ರೈವರ್​​ ಮತ್ತು  ಕಂಡಕ್ಟರ್ ಅಮಾನತು
ಅಕ್ಷತಾ ವರ್ಕಾಡಿ
|

Updated on: Jun 18, 2024 | 6:05 PM

Share

ತಮಿಳುನಾಡು: ತಿರುಪುರದಿಂದ ಕೊಪಿಸೆಟಿಪಾಳ್ಯಕ್ಕೆ ಹೋಗುವ ಬಸ್ಸಿನಲ್ಲಿ ವೃದ್ಧರೊಬ್ಬರು ಮಹಿಳೆಯರು ಇದ್ದ ಬಸ್ಸಿನ ಮುಂಭಾಗದಲ್ಲಿ ಕುಳಿತಿದ್ದರು. ಇದಕ್ಕೆ ಕಂಡಕ್ಟರ್ ಹಾಗೂ ಡ್ರೈವರ್ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿ ವೃದ್ಧ ವ್ಯಕ್ತಿಗೆ ಕಬ್ಬಿಣದ ರಾಡ್ ನಿಂದ ಬೆದರಿಸಿ, ವೃದ್ಧನನ್ನು ಹೊರಗೆ ತಳ್ಳಿ, ಆತನ ಬ್ಯಾಗನ್ನು ಎಸೆದು ದ್ದರು. ಇದರಿಂದ ಮುದುಕ ಮುಗ್ಗರಿಸಿ ಕೆಳಗೆ ಬಿದ್ದಿದ್ದ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು.

ತಿರುಪುರ್ ಹಳೆಯ ಬಸ್ ನಿಲ್ದಾಣದಿಂದ ಈರೋಡ್ ಜಿಲ್ಲೆಯ ಕೊಪಿಸೆಟಿಪಾಳ್ಯಂಗೆ ಅನೇಕ ಬಸ್ಸುಗಳು ಓಡುತ್ತಿರುತ್ತವೆ. ಇದರಂತೆ ಇತ್ತೀಚಿಗಷ್ಟೇ ತಿರುಪುರ ಬಸ್ ನಿಲ್ದಾಣದಿಂದ ಕೊಪಿಸೆಟ್ಟಿಪಾಳ್ಯಂಗೆ ತೆರಳಲು ಬಸ್ ಸಿದ್ಧವಾಗಿತ್ತು. ಆಗ ಒಬ್ಬ ಮುದುಕ ಬಸ್ಸಿನ ಮುಂಭಾಗದಲ್ಲಿ ಕುಳಿತಿದ್ದಿದ್ದನ್ನು ಕಂಡು ಬಸ್​​ ಕಂಡಕ್ಟರ್ ತಂಗರಸು ಮತ್ತು ಡ್ರೈವರ್ ಮುರುಗನ್ ಇಬ್ಬರೂ ವೃದ್ದನನ್ನು ಕೆಳಗೆ ಇಳಿಯಲು ಕಬ್ಬಿಣದ ರಾಡ್ ನಿಂದ ಬೆದರಿಸಿದ್ದಾರೆ. ಇದರಿಂದ ಮುದುಕ ಎಡವಿ ಕೆಳಗೆ ಬಿದ್ದಿದ್ದಾನೆ.

ಬಸ್​​ ನಿಲ್ದಾಣದಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದೇ ರೀತಿ ಸೂಕ್ತ ಕ್ರಮಕೈಗೊಳ್ಳಬೇಕು ಎಂಬ ಸಲಹೆಗಳು ಬಂದಿದ್ದವು. ಅದರಂತೆ ಸಾರಿಗೆ ಇಲಾಖೆ ಈ ಇಬ್ಬರನ್ನೂ ವಜಾಗೊಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಮನೆಯಿಂದಲೇ ವಧುವನ್ನು ಹೊತ್ಯೊಯ್ದ ನಾಲ್ವರು ಯುವಕರು

ಕುಡುಕ ವೃದ್ಧನಿಂದ ಮಹಿಳಾ ಪ್ರಯಾಣಿಕರನ್ನು ರಕ್ಷಿಸಲು ಕಂಡಕ್ಟರ್ ಮತ್ತು ಚಾಲಕ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ವಯಸ್ಸಾದ ವ್ಯಕ್ತಿಯನ್ನು ಕೆಳಗೆ ತಳ್ಳುವುದು ಅಪರಾಧ. ಅದರ ಆಧಾರದ ಮೇಲೆ ಕಂಡಕ್ಟರ್ ಮುರುಗನ್ ಮತ್ತು ಚಾಲಕ ತಂಗರಾಜ್ ಅವರನ್ನು ತಾತ್ಕಾಲಿಕವಾಗಿ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: