ಕುಡಿದ ಮತ್ತಿನಲ್ಲಿ ಕೆಪಿಟಿಸಿಎಲ್ ಎಂಜಿನಿಯರ್ಗಳ ಹೊಡೆದಾಟ ಕೇಸ್; ಇಬ್ಬರು ಅಮಾನತು, ಮತ್ತಿಬ್ಬರಿಗೆ ನೋಟಿಸ್
ಇದೇ ಮೇ 23ರಂದು ಕೆಪಿಟಿಸಿಎಲ್ನ ನಾಲ್ವರು ನೌಕರರು ಕಚೇರಿಗೆ ಹೋಗದೇ ತುಮಕೂರು ಜಿಲ್ಲೆಯ ಪಾವಗಡದ ಹೊರವಲಯದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ತೀವ್ರವಾಗಿ ಬಡಿದಾಡಿಕೊಂಡಿದ್ದರು. ಬಿಯರ್ ಬಾಟಲ್ ಹಿಡಿದು ಬೀದಿ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಇಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ.
ತುಮಕೂರು, ಮೇ.31: ಪಾರ್ಟಿ ವೇಳೆ ಕೆಪಿಟಿಸಿಎಲ್ ಅಧಿಕಾರಿಗಳು(Kptcl Employees) ಬಿಯರ್ ಬಾಟಲಿನಿಂದ ಬಡಿದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅಮಾನತು ಮಾಡಿ, ಮತ್ತಿಬ್ಬರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಕೆಪಿಟಿಸಿಎಲ್ನ ಕಿರಿಯ ಇಂಜಿನಿಯರ್ (ವಿ) ವರದರಾಜು ಹಾಗೂ ಮೆಕಾನಿಕ್ ಗ್ರೇಡ್-1ನ ನರಸಿಂಹಮೂರ್ತಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದ್ದು, ಕಿರಿಯ ಇಂಜಿನಿಯರ್ (ವಿ) ಶ್ರೀನಿವಾಸ್ ಮತ್ತು ಎಸ್.ಎ ಗ್ರೇಡ್-2 ಸಂತೋಷ್ಗೆ ನೋಟಿಸ್ ಜಾರಿ ಮಾಡಿ ಆದೇಶಿಸಲಾಗಿದೆ. ಈ ಬಗ್ಗೆ ಕೆಪಿಟಿಸಿಎಲ್ ತುಮಕೂರಿನ ಪ್ರಸರಣ ವೃತ್ತದ ಅಧೀಕ್ಷಕ ಇಂಜಿನಿಯರ್ ಮಾಹಿತಿ ತಿಳಿಸಿದ್ದಾರೆ.
ಘಟನೆ ವಿವರ
ಇದೇ ಮೇ 23ರಂದು ಕೆಪಿಟಿಸಿಎಲ್ನ ನಾಲ್ವರು ನೌಕರರು ಕಚೇರಿಗೆ ಹೋಗದೇ ತುಮಕೂರು ಜಿಲ್ಲೆಯ ಪಾವಗಡದ ಹೊರವಲಯದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ತೀವ್ರವಾಗಿ ಬಡಿದಾಡಿಕೊಂಡಿದ್ದರು. ಬಿಯರ್ ಬಾಟಲ್ ಹಿಡಿದು ಬೀದಿ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಬಟ್ಟೆ ಬಿಚ್ಚಿಕೊಂಡು ಬೀದಿರೌಡಿಗಳಂತೆ ಕಾಳಗ ನಡೆಸಿದ್ದರ ಬಗ್ಗೆ ಈವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಕೆಲಸಕ್ಕೆ ಕುತ್ತು ಬರಬಹುದು ಎಂಬ ಭೀತಿಯಿಂದ ಗಾಯದ ನೋವಿನಲ್ಲೇ ನಾಲ್ವರೂ ಕೆಲಸ ಮಾಡುತ್ತಿದ್ದರು. ಇದೀಗ ಇಬ್ಬರನ್ನು ಅಮಾನತ್ತುಗೊಳಿಸಿದರೆ, ಇಬ್ಬರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಕೆಪಿಟಿಸಿಎಲ್ ಎಂಜಿನಿಯರ್ಗಳ ರಣರೋಚಕ ಕಾಳಗ: ವಿಡಿಯೋ ವೈರಲ್
ಇನ್ನು ತಲೆಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಸರ್ಕಾರಿ ನೌಕರರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ಬಡಿದಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಎಲ್ಲೆಡೆ ನೌಕರರ ಹೊಡೆದಾಟಕ್ಕೆ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಇದೀಗ ಅಮಾನತ್ತು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Fri, 31 May 24