ಕುಡಿದ ಮತ್ತಿನಲ್ಲಿ ಕೆಪಿಟಿಸಿಎಲ್ ಎಂಜಿನಿಯರ್ಗಳ ರಣರೋಚಕ ಕಾಳಗ: ವಿಡಿಯೋ ವೈರಲ್
ಕಳೆದ ಗುರುವಾರ ಪಾವಗಡ ಪಟ್ಟಣದ ಹೊರವಲಯದಲ್ಲಿ ನಾಲ್ವರು ನೌಕರರು ಡ್ಯೂಟಿಗೆ ಬಂಕ್ ಮಾಡಿ ಎಣ್ಣೆ ಪಾರ್ಟಿ ಮಾಡಿಕೊಂಡಿದ್ದರು. ಪಾರ್ಟಿ ಮದ್ಯೆ ಮಾತಿಗೆ ಮಾತು ಬೆಳೆದು ತೀವ್ರವಾಗಿ ಬಡಿದಾಡಿಕೊಂಡಿದ್ದಾರೆ. ಕೆಪಿಟಿಸಿಎಲ್ ಜೂನಿಯರ್ ಎಂಜಿನಿಯರ್ಗಳಾದ ಶ್ರೀನಿವಾಸ್, ವಾದಿರಾಜ್, ಬೆಸ್ಕಾಂ ಸಿಬ್ಬಂದಿ ನರಸಿಂಹಮೂರ್ತಿ ಮತ್ತು ಸಂತೋಷ್ ನಡುವೆ ಹಣಾಹಣಿ ನಡೆದಿದೆ.
ತುಮಕೂರು, ಮೇ 29: ತಲೆಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಸರ್ಕಾರಿ ನೌಕರರು (Government Employees) ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ಬಡಿದಾಡಿಕೊಂಡ ಘಟನೆ ಪಾವಗಡ ಪಟ್ಟಣದ ಹೊರವಲಯದಲ್ಲಿ ಇತ್ತೀಚೆಗೆ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪಾವಗಡ (Pavagada) ತಾಲೂಕಿನ ಕೆಪಿಟಿಸಿಎಲ್ (KPTCL) ಎಂಜಿನಿಯರ್ಗಳೇ ಈ ರೋಚಕ ಕಾಳಗ ನಡೆಸಿದವರು. ಕೆಪಿಟಿಸಿಎಲ್ನ ಇಬ್ಬರು ಜೂನಿಯರ್ ಎಂಜಿನಿಯರ್ಗಳು, ಇಬ್ಬರು ಬೆಸ್ಕಾಮ್ ಸಿಬ್ಬಂದಿಯ ನಡುವೆ ಬಡಿದಾಟ ನಡೆದಿದೆ.
ಕಳೆದ ಗುರುವಾರ ಪಾವಗಡ ಪಟ್ಟಣದ ಹೊರವಲಯದಲ್ಲಿ ನಾಲ್ವರು ನೌಕರರು ಡ್ಯೂಟಿಗೆ ಬಂಕ್ ಮಾಡಿ ಎಣ್ಣೆ ಪಾರ್ಟಿ ಮಾಡಿಕೊಂಡಿದ್ದರು. ಪಾರ್ಟಿ ಮದ್ಯೆ ಮಾತಿಗೆ ಮಾತು ಬೆಳೆದು ತೀವ್ರವಾಗಿ ಬಡಿದಾಡಿಕೊಂಡಿದ್ದಾರೆ. ಕೆಪಿಟಿಸಿಎಲ್ ಜೂನಿಯರ್ ಎಂಜಿನಿಯರ್ಗಳಾದ ಶ್ರೀನಿವಾಸ್, ವಾದಿರಾಜ್, ಬೆಸ್ಕಾಂ ಸಿಬ್ಬಂದಿ ನರಸಿಂಹಮೂರ್ತಿ ಮತ್ತು ಸಂತೋಷ್ ನಡುವೆ ಹಣಾಹಣಿ ನಡೆದಿದೆ.
ಇದನ್ನೂ ಓದಿ: ಹೊಸೂರು ಬೆಂಗಳೂರು ಹೆದ್ದಾರಿಯಲ್ಲಿ ಒಂಟಿ ಸಲಗ ವಾಕಿಂಗ್: ವಿಡಿಯೋ ನೋಡಿ
ಬಟ್ಟೆ ಬಿಚ್ಚಿಕೊಂಡು ಬೀದಿರೌಡಿಗಳಂತೆ ಕಾಳಗ ನಡೆಸಿದ್ದಾರೆ. ಘಟನೆ ಬಗ್ಗೆ ಈವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಕೆಲಸಕ್ಕೆ ಕುತ್ತು ಬರಬಹುದು ಎಂಬ ಭೀತಿಯಿಂದ ಗಾಯದ ನೋವಿನಲ್ಲೇ ನಾಲ್ವರೂ ಕೆಲಸ ಮಾಡುತ್ತಿದ್ದಾರೆ. ಸದ್ಯ ನಾಲ್ವರಿಗೂ ಮೇಲಾಧಿಕಾರಿಗಳು ನೋಟಿಸ್ ಕೊಟ್ಟಿದ್ದು, ಕಾರಣ ಕೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ