ಹೊಸೂರು ಬೆಂಗಳೂರು ಹೆದ್ದಾರಿಯಲ್ಲಿ ಒಂಟಿ ಸಲಗ ವಾಕಿಂಗ್: ವಿಡಿಯೋ ನೋಡಿ
ರಾಜ್ಯದ ವಿವಿಧೆಡೆ ವನ್ಯ ಪ್ರಾಣಿ ಹಾಗೂ ಮಾನವ ನಡುವಣ ಸಂಘರ್ಷ ಮುಂದುವರಿದಿರುವ ಬೆನ್ನಲ್ಲೇ ಬುಧವಾರ ಬೆಳ್ಳಂಬೆಳಗ್ಗೆ ತಮಿಳುನಾಡಿನ ಪೆರಂಡಪಲ್ಲಿ ಅರಣ್ಯದಿಂದ ಆಹಾರ ಹರಿಸಿ ಬಂದ ಹೊಸೂರು ಬಳಿ ಹೊಸೂರು ಬೆಂಗಳೂರು ಹೆದ್ದಾರಿಯಲ್ಲಿ ಅಡ್ಡಾಡಿದೆ. ವಿಡಿಯೋ ಇಲ್ಲಿದೆ ನೋಡಿ.
ಹೊಸೂರು, ಮೇ 29: ಒಂಟಿ ಸಲಗವೊಂದು (Wild Elephant) ಹೊಸೂರು ಬೆಂಗಳೂರು ಹೆದ್ದಾರಿಯಲ್ಲಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ ಬುಧವಾರ ಬೆಳ್ಳಂಬೆಳಗ್ಗೆ ಕಂಡುಬಂದಿದೆ. ತಮಿಳುನಾಡಿನ (Tamil Nadu) ಪೆರಂಡಪಲ್ಲಿ ಅರಣ್ಯದಿಂದ ಆಹಾರ ಹರಿಸಿ ಬಂದಿರುವ ಸಲಗ, ಹೊಸೂರು ಸಮೀಪದ ಪೆರಂಡಪಲ್ಲಿ ಬಳಿ ಹೆದ್ದಾರಿಯಲ್ಲಿ ಸಂಚರಿಸಿದೆ. ವಾಹನ ಸವಾರರಿಗೆ ಕೆಲ ಹೊತ್ತು ಪೋಸ್ ನೀಡಿದ ಸಲಗ ಬಳಿಕ ಕಲನಟಿ, ನಲ್ಲಕ್ಕನಕೊತ್ತಪಲ್ಲಿ ಹಳ್ಳಿಗಳ ಕಡೆ ತೆರಳಿದೆ.
ಈ ಮಧ್ಯೆ, ಒಂಟಿ ಸಲಗದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಪೆರಂಡಪಲ್ಲಿ ಸುತ್ತಮುತ್ತಲಿನ ಗ್ರಾಮ ವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಒಂಟಿಯಾಗಿ ಹೊಲಗದ್ದೆಗಳ ಬಳಿ ತೆರಳದಂತೆ ಸಲಹೆ ನೀಡಲಾಗಿದೆ. ಮತ್ತೊಂದೆಡೆ, ಕಾಡಾನೆಗಳ ಹಾವಳಿಗೆ ಬ್ರೇಕ್ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂಟಿ ಸಲಗ ವಾಕಿಂಗ್ ವಿಡಿಯೋ ಇಲ್ಲಿ ನೋಡಿ
ಹೊಸೂರು ಬೆಂಗಳೂರು ಹೆದ್ದಾರಿಯಲ್ಲಿ ಒಂಟಿ ಸಲಗ ವಾಕಿಂಗ್: ವಿಡಿಯೋ ನೋಡಿ#Wildelephant #HosurBangaloreHighway #Hosur #Elephant pic.twitter.com/WHMRgB4Kml
— TV9 Kannada (@tv9kannada) May 29, 2024
ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯ ದೇಗುಲದ ಬಳಿ ಶಿಂಷಾ ನದಿಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆಯೇ ಕಾಡನಾಗೆಳ ಗುಂಪೊಂದು ಕಾಣಿಸಿತ್ತು. ಇದೀಗ ಹೊಸೂರು ಬಳಿ ಹೆದ್ದಾರಿಗೆ ಗಜರಾಜ ಎಂಟ್ರಿಕೊಟ್ಟಿದೆ.
ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಲ್ಲಿ ವನ್ಯ ಪ್ರಾಣಿಗಳು ಹಾಗೂ ಮಾನವನ ನಡುವಣ ಸಂಘರ್ಷ ಇತ್ತೀಚೆಗೆ ಹೆಚ್ಚಾಗಿದೆ. ಕಾಡಾನೆ ದಾಳಿಯಿಂದ ಜನರು ಮೃತಪಡುತ್ತಿರುವ ಘಟನೆಗಳು ಹೆಚ್ಚಾಗಿವೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿಯೂ ಕಾಡಾನೆ ಹಾವಳಿ ಮಿತಿ ಮೀರಿರುವ ಬಗ್ಗೆ ಕಳೆದ ಕೆಲವು ತಿಂಗಳ ಅವಧಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಕನಕಪುರದಲ್ಲೂ ಗ್ಯಾಂಗ್ ವಾರ್ ಆತಂಕ: ವ್ಯಕ್ತಿಯ ಕೊಲ್ಲಲು ಹೋಗಿ ಆತನ ತಂದೆಯನ್ನೇ ಕೊಲೆ ಮಾಡಿದ ಗ್ಯಾಂಗ್
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಳೆದ ಒಂದೆರಡು ತಿಂಗಳಲ್ಲಿ ಹಲವು ಬಾರಿ ವಾಹನ ಸವಾರರಿಗೆ ಕಾಡಾನೆಯ ದರ್ಶನವಾಗಿತ್ತು. ಇತ್ತೀಚೆಗೆ ಒಮ್ಮೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 am, Wed, 29 May 24