ಕನಕಪುರದಲ್ಲೂ ಗ್ಯಾಂಗ್ ವಾರ್ ಆತಂಕ: ವ್ಯಕ್ತಿಯ ಕೊಲ್ಲಲು ಹೋಗಿ ಆತನ‌ ತಂದೆ‌ಯನ್ನೇ ಕೊಲೆ ಮಾಡಿದ ಗ್ಯಾಂಗ್

ಇತ್ತೀಚೆಗಷ್ಟೇ ಉಡುಪಿಯಲ್ಲಿ ನಡೆದಿದ್ದ ಗ್ಯಾಂಗ್ ವಾರ್​​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಜನರಲ್ಲಿ ಭೀತಿ ಸೃಷ್ಟಿಸಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಕನಕಪುರದಲ್ಲಿಯೂ ಗ್ಯಾಂಗ್​ ವಾರ್ ಆತಂಕ ಸೃಷ್ಟಿಯಾಗಿದೆ. ಗ್ಯಾಂಗ್​ ಒಂದು ವ್ಯಕ್ತಿಯೊಬ್ಬನ ಹತ್ಯೆಗೆಂದು ತೆರಳಿ ಆತನ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಕನಕಪುರ ಪಟ್ಟಣದ ‌ಕುರುಪೇಟೆಯ ಮಾಧವನಗರದಲ್ಲಿ ನಡೆದಿದೆ.

ಕನಕಪುರದಲ್ಲೂ ಗ್ಯಾಂಗ್ ವಾರ್ ಆತಂಕ: ವ್ಯಕ್ತಿಯ ಕೊಲ್ಲಲು ಹೋಗಿ ಆತನ‌ ತಂದೆ‌ಯನ್ನೇ ಕೊಲೆ ಮಾಡಿದ ಗ್ಯಾಂಗ್
ಕನಕಪುರದಲ್ಲೂ ಗ್ಯಾಂಗ್ ವಾರ್ ಆತಂಕ: ವ್ಯಕ್ತಿಯ ಕೊಲ್ಲಲು ಹೋಗಿ ಆತನ‌ ತಂದೆ‌ಯನ್ನೇ ಕೊಲೆ ಮಾಡಿದ ಗ್ಯಾಂಗ್
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: Ganapathi Sharma

Updated on: May 29, 2024 | 9:05 AM

ರಾಮನಗರ, ಮೇ 29: ಅವರೆಲ್ಲಾ ಮೊದಲು ಸ್ನೇಹಿತರಾಗಿದ್ದವರು. ‌ಬರ್ತ್​​​ಡೇ ಪಾರ್ಟಿ ವಿಚಾರಕ್ಕೆ ಜಗಳವಾಡಿ ಒಬ್ಬ ಜೈಲಿಗೂ ಹೋಗಿದ್ದ. ಜೈಲಿನಿಂದ ಬಿಡುಗಡೆ ಆಗಿದ್ದೇ ತಡ ಆತನನ್ನು ಮುಗಿಸಿಯೇ ಬಿಡೋಣ ಅಂತ ಹೋಗಿದ್ದ ಗ್ಯಾಂಗ್, ಆತನ ಬಿಟ್ಟು ಅವನ‌ ತಂದೆಯನ್ನೇ ಮುಗಿಸಿರುವ ವಿಲಕ್ಷಣ ವಿದ್ಯಮಾನ ರಾಮನಗರ (Ramanagara) ಜಿಲ್ಲೆ ಕನಕಪುರ (Kanakapura) ಪಟ್ಟಣದ ‌ಕುರುಪೇಟೆಯ ಮಾಧವನಗರದಲ್ಲಿ ನಡೆದಿದೆ. ಘಟನೆಯಿಂದ ಇದೀಗ ಇಡೀ ಕನಕಪುರ ಬೆಚ್ಚಿ ಬಿದ್ದಿದೆ.‌ ಈ ನಡುವೆ ಕನಕಪುರದಲ್ಲಿ ಪುಡಿ ರೌಡಿಗಳ ಅಟ್ಟಹಾಸ‌‌ ಹೆಚ್ಚಾಗಿದ್ದು ಸಾರ್ವಜನಿಕರು ಭಯಭೀತರಾಗುವಂತಾಗಿದೆ. ಹಳೇ ದ್ವೇಷಕ್ಕೆ ಮಗನನ್ನು ಕೊಲ್ಲಲು ತೆರಳಿದ್ದ ಗ್ಯಾಂಗ್, ಮಗ ಇರದ ಕಾರಣ ತಂದೆಯನ್ನೇ ಹೊಡೆದು ಕೊಂದ ಘಟನೆ ಇಡೀ ಕನಕಪುರ ಪಟ್ಟಣವನ್ನು ಆತಂಕಕ್ಕೀಡು ಮಾಡಿದೆ.

ಕನಕಪುರ ಪಟ್ಟಣದ‌ ನಲವತ್ತೈದು ವರ್ಷದ ಗುಂಡ್ಯಯ್ಯ ಕೊಲೆಯಾದ ವ್ಯಕ್ತಿ. ತನ್ನ ಮಗನನ್ನು ಕೊಲ್ಲಲ್ಲು ಬಂದ ಗ್ಯಾಂಗ್ ಬಳಿ ಮಗನ ಪರ ವಹಿಸಿಕೊಂಡು ಮಾತನಾಡಿದಕ್ಕೆ ಅರುಣ್ ಎಂಬ ವ್ಯಕ್ತಿ ರಾಡಿನಿಂದ ಹಲ್ಲೆ ಮಾಡಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಗುಂಡ್ಯಯ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ಮಗನ ದ್ವೇಷವನ್ನು ಅಪ್ಪನ‌ಮೇಲೆ ತೀರಿಸಿಕೊಂಡ ಗ್ಯಾಂಗ್ ಅಲ್ಲಿಂದ ಪರಾರಿ ಆಗಿತ್ತು. ಈ ಬಗ್ಗೆ ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ನಡೆದಿದ್ದೇನು?

ಏಪ್ರಿಲ್ ತಿಂಗಳಲ್ಲಿ ಅರುಣ್ ಬರ್ತ್ ಡೇ ಇತ್ತು. ಇದೇ ವಿಚಾರವಾಗಿ ಅರುಣ್ ಹಾಗೂ ಗುಂಡಯ್ಯನ ಹಿರಿಯ ಮಗ ರುದ್ರೇಶ್ ನಡುವೆ ಕಿರಿಕ್ ಆಗಿತ್ತು. ನಂತರ ಅರುಣ್​​ಗೆ ಹಲ್ಲೆ ಮಾಡಿ, ಚಾಕು ಇರಿದು ರುದ್ರೇಶ ಜೈಲುಪಾಲಾಗಿದ್ದ. ಕಳೆದ ಶನಿವಾರವಷ್ಟೇ ಜಾಮೀನು ಪಡೆದು ಆಚೆ ಬಂದಿದ್ದ ರುದ್ರೇಶ್ ಮೇಲೆ ಸೇಡು ತೀರಿಸಿಕೊಳ್ಳಲು ಅರುಣ್ ಅಂಡ್ ಟೀಂ ಮಹೂರ್ತ ಇಟ್ಟಿತ್ತು.‌ ಅದರಂತೆ ಸೋಮವಾರ ರಾತ್ರಿ ಮನೆಗೆ ತೆರಳಿದ್ದ ಅರುಣ್ ಮತ್ತು ಇಬ್ಬರು, ರುದ್ರೇಶ ಇಲ್ಲದ‌ ಕಾರಣ ತಂದೆಯನ್ನೇ ಹೊಡೆದು ಸಾಯಿಸಿದೆ.

ಮೃತ ವ್ಯಕ್ತಿ ಗುಂಡ್ಯಯ್ಯ ನಿವಾಸದ ಹೊರಗೆ ಕುಟುಂಬಸ್ಥರ ಆಕ್ರಂದನ

ಇದನ್ನೂ ಓದಿ: ಉಡುಪಿಯಲ್ಲಿ ಮೇ 18ರಂದು ನಡೆದ ಭಯಾನಕ ಗ್ಯಾಂಗ್​ವಾರ್ ದೃಶ್ಯಗಳು ಲಭ್ಯ, ಸೆರೆ ಸಿಕ್ಕಿರುವ ಇಬ್ಬರು

ಸದ್ಯ ಪ್ರಮುಖ ಆರೋಪಿ ಅರುಣ್ ಹಾಗೂ ಇಬ್ಬರನ್ನು ವಶಕ್ಕೆ ಪಡೆದಿರುವ ಕನಕಪುರ ಪೊಲೀಸರು ಗ್ಯಾಂಗ್ ವಾರ್ ಆಗದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.‌ ಸದ್ಯ ರುದ್ರೇಶ ಕೂಡ ತನಗೆ ಜೀವ ಭಯ ಇದ್ದು ರಕ್ಷಣೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾನೆ.‌ ಪ್ರಕರಣ ದಾಖಲಿಸಿಕೊಂಡಿರುವ ಕನಕಪುರ ಟೌನ್ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್