ಬೆಂಗಳೂರು, ಸೆಪ್ಟೆಂಬರ್ 21: ಬೆದರಿಕೆ ಹಾಕಿ, ಹಣಕ್ಕೆ ಡಿಮಾಂಡ್ ಇಟ್ಟ ಹಳೆ ರೌಡಿ ಶೀಟರ್ ನನ್ನು ಸಿಸಿಬಿ ರೌಡಿ ನಿಗ್ರಹ ದಳ (Bengaluru CCB anti-rowdy squad) ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಳೆ ರೌಡಿ ಶೀಟರ್ (rowdy sheeter) ಆನಂದ್ ಬಿಲ್ಡರ್ ಗೆ ಜೀವಬೆದರಿಕೆ (Life threat) ಹಾಕಿ 15 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಎಂಬ ದೂರು ಕೇಳಿಬಂದಿತ್ತು. ಮನೆ ನಿರ್ಮಾಣ ಕಾರ್ಯ ಸಾಗುತ್ತಿದ್ದಾಗ ಸ್ಥಳಕ್ಕೆ ತೆರಳಿ ಹಣಕ್ಕೆ ಬೆಡಿಕೆಯಿಟ್ಟಿದ್ದ, ಇಲ್ಲವಾದಲ್ಲಿ ಕಟ್ಟಡ ನಿರ್ಮಾಣ ಮಾಡಲು ಬಿಡೋದಿಲ್ಲ ಎಂದು ಬೆದರಿಸಿದ್ದ. ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದೀಯಾ ಅಂತಾನೂ ಬೆದರಿಕೆಯೊಡ್ಡಿದ್ದನಂತೆ. ಆನಂದ್ ಎಸ್ ಆರ್ ನಗರ ಪೊಲೀಸ್ ಠಾಣೆಯ ಮಾಜಿ ರೌಡಿ ಶೀಟರ್.
ಆನಂದ್ ಮತ್ತು ಮಯೂರ್ ಎಂಬಿಬ್ಬರು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆನಂದ್ ಮತ್ತು ಸಹಚರ, ಗೋಮ್ ರಾಮ್ ಎಂಬುವವರಿಗೆ ಬೆದರಿಸುತ್ತಿದ್ದನಂತೆ. ಗೋಮ್ ರಾಮ್ ಎಂಬುವವರು ಸಂಪಂಗಿರಾಮನಗರದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಖತರ್ನಾಕ್ ಗಳಿಬ್ಬರೂ ಕಟ್ಟಡದ ಬಳಿ ಹೋಗಿ ಹಫ್ತಾ ವಸೂಲಿಗೆ ಇಳಿದಿದ್ದಾರೆ. 15 ಲಕ್ಷ ರೂಪಾಯಿ ನೀಡಬೇಕೆಂದು ಬೆದರಿಸಿದ್ದಾರೆ. ಆಗ ಮನೆ ಮಾಲೀಕ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಅಬ್ಬಾ! ಹೀಗೂ ಉಂಟೆ ಎಂದು ಉದ್ಘಾರ ತೆಗೆಯುವಷ್ಟರಮಟ್ಟಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಕಳ್ಳತನ
ಹಣ ಕೊಟ್ಟಿಲ್ಲಾ ಎಂದ್ರೆ ಕಟ್ಟಡ ನಿರ್ಮಾಣ ಮಾಡಲು ಬಿಡಲ್ಲಾ, ಮನೆ ಹತ್ತಿರ ಹುಡುಗರನ್ನು ನುಗ್ಗಿಸಿ ಡೆಮಾಲಿಶನ್ ಮಾಡಿಸ್ತೇವೆ ಎಂದು ಬೆದರಿಕೆ ಹಣವನ್ನು ಇಂತಹ ತಾರೀಖು ತಂದುಕೊಡುವಂತೆ ಅವಾಜ್ ಹಾಕಿದ್ದನಂತೆ. ಕಟ್ಟಡ ನಿರ್ಮಾಣ ಮಾಡ್ತಿದ್ದ ಕಾಂಟ್ರಾಕ್ಟರ್ ಗೆ ಮಯೂರ ವರ್ಮಾ ಎಂಬಾತ ಅವಾಜ್ ಹಾಕಿದ್ದನಂತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Thu, 21 September 23