AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಗ್ಯಾಂಗ್​​​ನಿಂದ ಎಷ್ಟು ಹಣ ಜಪ್ತಿ ಮಾಡಲಾಗಿದೆ? ಪ್ರಕರಣದಲ್ಲಿ ಎಷ್ಟು ಜನರ ಬಂಧನವಾಗಿದೆ? ಇಲ್ಲಿದೆ ಅಧಿಕೃತ ಮಾಹಿತಿ

ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡದ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಆರೋಪಿಗಳಿಂದ ಹಣ, ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗಾದ್ರೆ, ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಂಧಿತ ಆರೋಪಿಗಳು ಎಷ್ಟು? ಬಂಧಿತರಿಂದ ಎಷ್ಟು ಜಪ್ತಿ ಮಾಡಲಾಗಿದೆ ಎನ್ನುವ ಅಧಿಕೃತ ಮಾಹಿತಿ ಇಲ್ಲಿದೆ.

ಚೈತ್ರಾ ಕುಂದಾಪುರ ಗ್ಯಾಂಗ್​​​ನಿಂದ ಎಷ್ಟು ಹಣ ಜಪ್ತಿ ಮಾಡಲಾಗಿದೆ? ಪ್ರಕರಣದಲ್ಲಿ ಎಷ್ಟು ಜನರ ಬಂಧನವಾಗಿದೆ? ಇಲ್ಲಿದೆ ಅಧಿಕೃತ ಮಾಹಿತಿ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Sep 21, 2023 | 2:02 PM

Share

ಬೆಂಗಳೂರು, (ಸೆಪ್ಟೆಂಬರ್ 21): ಬಿಜೆಪಿ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಮೋಸದ ಜಾಲ ಬಯಲಿಗೆ ಬರುತ್ತಿದೆ. ಹಿಂದೂ ಧರ್ಮದ ಕಾರ್ಯಕ್ರಮಗಲ್ಲಿ ಭಾಷಣ ಬಿಗಿಯುತ್ತಿದ್ದ ಚೈತ್ರಾ ಕುಂದಾಪುರ (Chaitra Kundapura) ಮತ್ತು ಆಕೆಯ ಗ್ಯಾಂಗ್​ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದು, ತನಿಖೆಯಲ್ಲಿ ಕ್ಷಣ ಕ್ಷಣಕ್ಕೂ ಸ್ಫೋಟಕ ಅಂಶಗಳು ಬಯಲಿಗೆ ಬರುತ್ತಿವೆ. ಅಲ್ಲದೇ ಆರೋಪಿಗಳಿಂದ ಕೋಟಿ-ಕೋಟಿ ಹಣ ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗಾದ್ರೆ, ಈ ವಂಚನೆ ಪ್ರಕರಣದಲ್ಲಿ ಬಂಧನವಾದ ಆರೋಪಿಗಳು ಎಷ್ಟು? ಇದುವರೆಗೂ ಆರೋಪಿಗಳಿಂದ ಎಷ್ಟು ಹಣ ವಸೂಲಿ ಮಾಡಲಾಗಿದೆ ಎನ್ನುವ ಬಗ್ಗೆ ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ(Bengaluru police commissioner )ಬಿ.ದಯಾನಂದ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅದು ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ಇಂದು (ಸೆ.21) ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ , ವಂಚನೆ ಪ್ರಕರಣದಲ್ಲಿ ಇದುವರೆಗೆ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ ಚಿನ್ನ, ನಗದು, ಠೇವಣಿ ಹಣ ಸೇರಿದಂತೆ ಒಟ್ಟು 2 ಕೋಟಿಗೂ ಹೆಚ್ಚು ಜಪ್ತಿ ಮಾಡಲಾಗಿದೆ. ಇನ್ನು ಈ ವಂಚನೆ ಪ್ರಕರಣದಲ್ಲಿ ಇನ್ನೂ ಹಲವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ವಂಚನೆ ಪ್ರಕರಣ: ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿದ ಕೋರ್ಟ್, ತನಿಖೆಯ ಅಸಲಿ ಆಟ ಈಗ ಶುರು

ಚೈತ್ರಾ ಕುಂದಾಪುರ ಬಳಿ ಸಿಕ್ತು ಹಣ, ಚಿನ್ನಾಭರಣ

ಇನ್ನು ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಕಿಂಗ್​ ಪಿನ್​ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡದ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಚೈತ್ರಾ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ 1 ಕೋಟಿ 8 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಚೈತ್ರಾಳ ಬಾವ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಅವರ ಸಹಾಯದಿಂದ ಹಣ ಠೇವಣಿ ಇಟ್ಟಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲದೆ, ಚೈತ್ರಾಳ ಮನೆಯಲ್ಲಿದ್ದ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇನ್ನು ವಂಚನೆ ಪ್ರಕರಣದ ಏಳನೇ ಆರೋಪಿಯಾಗಿರುವ ಶ್ರೀಕಾಂತ್ ಮನೆಯಲ್ಲೂ 45 ಲಕ್ಷ ರೂಪಾಯಿ ಹಣ ಪತ್ತೆಯಾಗಿತ್ತು. ಚೈತ್ರಾಳ ಸ್ನೇಹಿತನಾಗಿರುವ ಶ್ರೀಕಾಂತ್ ಮನೆಯಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದಾಗ 45 ಲಕ್ಷ ರೂಪಾಯಿ ಹಣ ಸಿಕ್ಕಿತ್ತು.

ಹಾಲಶ್ರೀಯಿಂದಲೂ ಹಣ ಜಪ್ತಿ

ಇನ್ನು ಪ್ರಕರಣದ ಎರಡನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಒಡಿಶಾದ ಕಟಕ್​ನಲ್ಲಿ ಸಿಕ್ಕಿಬಿದ್ದಿದ್ದು, ಇದೀಗ ಸ್ವಾಮೀಜಿಯ ವಿಚಾರಣೆ ತೀವ್ರಗೊಳಿಸಿದ್ದಾರೆ. ಸ್ವಾಮೀಜಿ ಅಕೌಂಟ್ ನಲ್ಲಿ ಇರುವ ಹಣ ಹಾಗೂ ಇತರೆ ಮಾಹಿತಿಗಳ ಬಗ್ಗೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಾಲಶ್ರೀ ಗೆ ಒಂದು ಕೋಟಿ ಐವತ್ತು ಲಕ್ಷ ಹಣ ನೀಡಲಾಗಿತ್ತು ಎನ್ನುವ ಆರೋಪವಿದೆ. ಈ ಪೈಕಿ ಐವತ್ತು ಲಕ್ಷ ಹಣ ವಾಪಸ್ಸು ನೀಡಿದ್ದರು. ಈಗ ಐವತ್ತಾರು ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಉಳಿದ 44 ಲಕ್ಷ ರೂಪಾಯಿ ಬಗ್ಗೆ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Thu, 21 September 23