AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳಂದೂರು ಮಹಿಳಾ ಟೆಕ್ಕಿಯಿಂದ ಲವ್ ಜಿಹಾದ್ ಆರೋಪ: ಯುವಕನ ಬೆನ್ನುಹತ್ತಿ ಕಾಶ್ಮೀರಕ್ಕೆ ತೆರಳಿದ ಹೆಬ್ಬಗೋಡಿ ಪೊಲೀಸರು

ಬೆಳ್ಳಂದೂರು ಮಹಿಳಾ ಟೆಕ್ಕಿಯಿಂದ ಲವ್ ಜಿಹಾದ್ ಆರೋಪ: ಯುವಕನ ಬೆನ್ನುಹತ್ತಿ ಕಾಶ್ಮೀರಕ್ಕೆ ತೆರಳಿದ ಹೆಬ್ಬಗೋಡಿ ಪೊಲೀಸರು

ರಾಮು, ಆನೇಕಲ್​
| Updated By: ಸಾಧು ಶ್ರೀನಾಥ್​

Updated on: Sep 21, 2023 | 11:50 AM

ಸದರಿ ಯುವಕ-ಯುವತಿ ಎಲೆಕ್ಟ್ರಾನಿಕ್ ಸಿಟಿಯ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ವೇಳೆ ಆರೋಪಿ ಕಾಶ್ಮೀರಿ ಯುವಕ ಯುವತಿಗೆ ಪರಿಚಯವಾಗಿದ್ದ. ಆರೋಪಿ ಮೊಜೀಫ್ ಅಶ್ರಫ್ ಬೇಗ್ ಬೆಂಗಳೂರಿನ ಶಿಕಾರಿಪಾಳ್ಯದಲ್ಲಿ ವಾಸವಿದ್ದ. ಮದುವೆಯಾಗುವುದಾಗಿ ಯುವತಿಯನ್ನ ನಂಬಿಸಿದ್ದ ಯುವಕ ಮದುವೆ ಹೆಸರಲ್ಲಿ ಯುವತಿ ಜೊತೆ ದೈಹಿಕ ಸಂಪರ್ಕ ಸಾಧಿಸಿದ್ದಾನೆ ಎಂದು ಎಫ್ಐಆರ್.

ಆನೇಕಲ್, ಸೆಪ್ಟೆಂಬರ್​ 21: ಸಿಲಿಕಾನ್ ಸಿಟಿ ಬೆಂಗಳೂರಿಗೆ ಅಂಟಿಕೊಂಡಿರುವ ಹೆಬ್ಬಗೋಡಿಯಲ್ಲಿ ಯುವತಿಯಿಂದ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಬೆಳ್ಳಂದೂರು ಮಹಿಳಾ ಟೆಕ್ಕಿಯಿಂದ ಲವ್ ಜಿಹಾದ್ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮದುವೆ ಹೆಸರಲ್ಲಿ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ, ಯಾವುದೇ ಧಾರ್ಮಿಕ ಕಟ್ಟುಪಾಡುಗಳು ಇಲ್ಲದೆ ಕೋರ್ಟ್ ನಲ್ಲಿ ಮದುವೆಯಾಗೋಣ ಎಂದು ಆಶ್ವಾಸನೆ ನೀಡಿದ್ದ ಎಂದು ಬಾಧಿತ ಯುವತಿ ಯುವಕನ ಆಶ್ವಾಸನೆ, ಆಮಿಷದ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

ಸದರಿ ಯುವಕ-ಯುವತಿ ಎಲೆಕ್ಟ್ರಾನಿಕ್ ಸಿಟಿಯ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ವೇಳೆ ಆರೋಪಿ ಕಾಶ್ಮೀರಿ ಯುವಕ ಯುವತಿಗೆ ಪರಿಚಯವಾಗಿದ್ದ. ಆರೋಪಿ ಮೊಜೀಫ್ ಅಶ್ರಫ್ ಬೇಗ್ ಬೆಂಗಳೂರಿನ ಶಿಕಾರಿಪಾಳ್ಯದಲ್ಲಿ ವಾಸವಿದ್ದ. ಮದುವೆಯಾಗುವುದಾಗಿ ಯುವತಿಯನ್ನ ನಂಬಿಸಿದ್ದ ಯುವಕ ಮದುವೆ ಹೆಸರಲ್ಲಿ ಯುವತಿ ಜೊತೆ ದೈಹಿಕ ಸಂಪರ್ಕ ಸಾಧಿಸಿದ್ದಾನೆ. ಮೋಸ ಮಾಡಲೆಂದೆ ಮದುವೆ ಆಶ್ವಾಸನೆ ನೀಡಿದ್ದ ಆರೋಪಿ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ಲವ್ ಜಿಹಾದ್, ಅತ್ಯಾಚಾರ; ಪರಿಶೀಲಿಸುತ್ತಿರುವ ಬೆಳ್ಳಂದೂರು ಪೊಲೀಸರು

ಮದುವೆ ಹೆಸರಲ್ಲಿ ಬೇರೆ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನ ನಡೆಸಿದ್ದು ಅಲ್ಲದೇ ಆರೋಪಿ ಬೆದರಿಕೆ ಸಹ ಹಾಕಿದ್ದನಂತೆ. ಈ ಬಗ್ಗೆ ಮೊದಲು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಳಿಕ, ಪೊಲೀಸರ ಸ್ಥಳ ಪರಿಶೀಲನೆ ವೇಳೆ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆದಿದ್ದ ಕೃತ್ಯವಾಗಿದ್ದು, ಪ್ರಕರಣವನ್ನು ಬೆಳ್ಳಂದೂರು ಪೊಲೀಸರು ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಿದ್ದಾರೆ. ಇದೀಗ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಟೆಕ್ಕಿ ಪತ್ತೆಗೆ ಬಲೆ ಬೀಸಿದ್ದಾರೆ. ಹೆಬ್ಬಗೋಡಿ ಪೊಲೀಸರ ತಂಡ ಕಾಶ್ಮೀರಕ್ಕೆ ತೆರಳಿದೆ. ಯುವತಿ ಹೇಳಿಕೆಯನ್ನಾಧರಿಸಿ, ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಐಪಿಸಿ ಸೆಕ್ಷನ್ 506, 34, 376,377, 420, 417 ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ರಕ್ಷಣಾ ಕಾಯ್ದೆ 2022ರ ಅಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ