ಬೆಂಗಳೂರು: ತಂದೆ ಮಗನ ಸಂಬಂಧ ಅಂದರೆ ಹೇಳಲಸಾಧ್ಯ. ಆತ ಎಷ್ಟೇ ಬೈದರೂ ಮಕ್ಕಳ ಮೇಲಿರುವ ಪ್ರೀತಿಗೆ ಕೊನೆಯಿಲ್ಲ. ಇದಕ್ಕೆ ವಿರುದ್ದವೆಂಬಂತೆ ಇಂದು(ಜೂ.15) ಬೆಳಗಿನ ಜಾವ ಮಗನೇ ಕಲ್ಲು ಎತ್ತಿಹಾಕಿ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಮಾಗಡಿ(Magadi) ರಸ್ತೆಯ ಗೋಪಾಲಪುರದ 2ನೇ ಕ್ರಾಸ್ನಲ್ಲಿ ನಡೆದಿದೆ. ಗಂಗರಾಜು ಆಲಿಯಾಸ್ ರಾಜು(55) ಕೊಲೆಯಾದ ವ್ಯಕ್ತಿ. ಮನೆಯ ಹೊರಗೆ ತಂದೆ ರಾಜು ಮಲಗಿದ್ದರು. ಈ ವೇಳೆ ಪುತ್ರ ಚೇತನ್ ಒರಳು ಕಲ್ಲನ್ನ ತಲೆ ಮೇಲೆ ಎತ್ತಿಹಾಕಿ ಕೊಲೆಗೈದಿದ್ದಾನೆ. ವಿಷಯ ತಿಳಿದು ಮಾಗಡಿರಸ್ತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ‘ರಾತ್ರಿ ಎರಡೂವರೆ ಗಂಟೆಗೆ ತಂದೆ ಮಗನ ನಡುವೆ ಜಗಳ ಆಗಿದೆ. ಬಳಿಕ ಇವರಿಬ್ಬರ ಜಗಳ ಅತಿರೇಕಕ್ಕೆ ಹೋಗಿ, ಮಗ ಚೇತನ್ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದ. ಬಳಿಕ ತಾನೇ ತಂದೆಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದ. ಇದಾದ ಬಳಿಕ ತಂದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:Kerala Crime: ಕೊಡಲಿಯಿಂದ ಕಡಿದು ತಂದೆಯಿಂದ ಮಗಳ ಬರ್ಬರ ಹತ್ಯೆ
ಉತ್ತರ ಕನ್ನಡ: ಜಿಲ್ಲೆಯ ಕಾರವಾರದ ಕಿನ್ನರ ವೈಲ್ವಾಡದಲ್ಲಿ ಕಂಬದಿಂದ ಬಿದ್ದು ಹೆಸ್ಕಾಂ ಲೈನ್ ಮೆನ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆಸ್ಕಾಂ ಉಪವಿಭಾಗ ಕಾರವಾರದಲ್ಲಿ ಕೆಲಸ ನಿರ್ವಸುತ್ತಿದ್ದ ವಿಜಯಕುಮಾರ (32) ಮೃತ ರ್ದುದೈವಿ. ಇತ ಕೆಲಸ ಮಾಡುತ್ತಿರುವಾಗ ಕಂಬದಿಂದ ಆಯತಪ್ಪಿ ಬಿದ್ದಿದ್ದು, ಸ್ಥಳದಲ್ಲೇ ಮೃತನಾಗಿದ್ದಾನೆ. ಈ ಕುರಿತು ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:48 am, Thu, 15 June 23