ವೈದ್ಯರ ಕೊರತೆ; ಕೊಟ್ಯಾಂತರ ಹಣ ಖರ್ಚು ಮಾಡಿ ನಿರ್ಮಾಣವಾದ ಶಿವಾಜಿನಗರದ ಸೂಪರ್ ಸ್ಪೆಷಲಿಟಿ ಚರಕ ಆಸ್ಪತ್ರೆಗೆ ಬೀಗ

| Updated By: ಆಯೇಷಾ ಬಾನು

Updated on: Aug 20, 2023 | 8:29 AM

Shivaji Nagar Charaka Super Speciality Hospital: ಶಿವಾಜಿನಗರದಲ್ಲಿ ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ಸೂಪರ್ ಸ್ಪೇಷಲಿಟಿ ಆಸ್ಪತ್ರೆ ನಿರ್ಮಿಸಲಾಗಿತ್ತು.‌ ಆದ್ರೆ ಆಸ್ಪತ್ರೆ ನಿರ್ಮಿಸಿದ ಬಳಿಕ ಜನರ ಬಳಕೆಗೆ ಕೊಡದೇ ಬೀಗ ಜಡಿಯಲಾಗಿದೆ. ಎರಡು ವರ್ಷದಿಂದ ಶಿವಾಜಿನಗರದ ಸೂಪರ್ ಸ್ಪೆಷಲಿಟಿ ಚರಕ ಆಸ್ಪತ್ರೆ ಕ್ಲೋಸ್ ಆಗಿದ್ದು ಅಲ್ಲಿನ ಎಕ್ಯೂಪ್ಮೆಂಟ್ಸ್ ತುಕ್ಕು ಹಿಡಿಯುತ್ತಿವೆ. ಅಧಿಕಾರಿಗಳ ನಡೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ವೈದ್ಯರ ಕೊರತೆ; ಕೊಟ್ಯಾಂತರ ಹಣ ಖರ್ಚು ಮಾಡಿ ನಿರ್ಮಾಣವಾದ ಶಿವಾಜಿನಗರದ ಸೂಪರ್ ಸ್ಪೆಷಲಿಟಿ ಚರಕ ಆಸ್ಪತ್ರೆಗೆ ಬೀಗ
ಶಿವಾಜಿನಗರದ ಸೂಪರ್ ಸ್ಪೆಷಲಿಟಿ ಚರಕ ಆಸ್ಪತ್ರೆ
Follow us on

ಬೆಂಗಳೂರು, ಆ.20: ವೈದ್ಯರ ಕೊರತೆ ಎಂದು ಎರಡು ವರ್ಷದಿಂದ ಶಿವಾಜಿನಗರದ ಸೂಪರ್ ಸ್ಪೆಷಲಿಟಿ ಚರಕ ಆಸ್ಪತ್ರೆ(Shivaji Nagar Charaka Super Speciality Hospital) ಕ್ಲೋಸ್  ಆಗಿದ್ದು ಅಲ್ಲಿನ ಎಕ್ಯೂಪ್ಮೆಂಟ್ಸ್ ತುಕ್ಕು ಹಿಡಿಯುತ್ತಿವೆ. ಅಧಿಕಾರಿಗಳ ನಡೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿ ಆಸ್ಪತ್ರೆಯಲ್ಲಿ ಸೇವೆ ಸಿಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಠಾತ್ ಹೃದಯಾಘಾತದ ಸಾವು ತಡೆಯುವ ಉದ್ದೇಶದಿಂದ ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ಇರುವ ಸೂಪರ್ ಸ್ಪೆಷಲಿಟಿ ಚರಕ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸಾ ವಿಭಾಗವನ್ನ ನಿರ್ಮಿಸಲಾಗಿದ್ದು, ಈ ಆಸ್ಪತ್ರೆ ನಿರ್ಮಾಣದ ಬಳಿಕ ಜಯದೇವ ಆಸ್ಪತ್ರೆಗೆ ಹೋಗುವವರ ಸಂಖ್ಯೆಯು ಕಡಿಮೆಯಾಗುವ ನಿರೀಕ್ಷೆ ಇತ್ತು. ಜೊತೆಗೆ ಶಿವಾಜಿನಗರದ ಸುತ್ತ – ಮುತ್ತಲಿನ ಜನರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ನಿರೀಕ್ಷೆಯನ್ನ ಇಟ್ಟುಕೊಂಡಿದ್ರು.‌ ನಿರೀಕ್ಷೆಗೆ ತಕ್ಕಂತೆ ಆಸ್ಪತ್ರೆ ನಿರ್ಮಾಣವಾದ ಆರಂಭದಲ್ಲಿ ಕೋವಿಡ್ ಗೆ ಕೇರ್ ಕನ್ವರ್ಟ್ ಮಾಡಲಾಗಿತ್ತು. ಆದಾದ ಬಳಿಕ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಿದ್ದು, ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಹಾಕಿದ್ದ ಎಕ್ಯೂಪ್ಮೆಂಟ್ಸ್ ಗಳು ತುಕ್ಕು ಹಿಡಿಯುತ್ತಿವೆ.

ಹೌದು, ಈ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಿಂದ 74 ಕೋಟಿ, ಇನ್ಫೋಸಿಸ್ ಸಂಸ್ಥೆಯಿಂದ 10.50 ಕೋಟಿ ಖರ್ಚು ಮಾಡಲಾಗಿದೆ. ಇದರಲ್ಲಿ ಒಟ್ಟು 140 ಹಾಸಿಗೆಗಳುಳ್ಳ ಹೃದಯ ಚಿಕಿತ್ಸಾ ಕೇಂದ್ರವನ್ನ ನಿರ್ಮಾಣ ಮಾಡಲಾಗಿದೆ. 2 ಆಪರೇಷನ್ ಥಿಯೇಟರ್​ಗಳು, ಒಂದು ಕ್ಯಾಥ್‌ಲ್ಯಾಬ್, ಹಾಸಿಗೆಗಳು ಮತ್ತು ಇತರ ಉಪಕರಣಗಳನ್ನು ಒದಗಿಸಲಾಗಿದೆ. ಆದ್ರೆ ಎರಡು ವರ್ಷದಿಂದ ಒಂದು ಬಾರಿಯೂ ಎಕ್ಯೂಪ್ಮೆಂಟ್ಸ್ ಗಳನ್ನ ಬಳಸದೇ ಅಸಡ್ಡೆ ತೋರಿದ್ದು, ಕೊಟ್ಯಾಂತರ ರೂಪಾಯಿಯ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಇನ್ನು, ಇವು
ಕೋವಿಡ್ ಸಂದರ್ಭದಲ್ಲಿ ‌ನೀಡಲಾಗಿದ್ದ ಉಪಕರಣಗಳಾಗಿದ್ದು, ಸಾರ್ವಜನಿಕರ ಒಳಿತಿಗೆ ಬಳಸುವಂತೆ ಇನ್ಫೋಸಿಸ್ ನೀಡಿತ್ತು. ಆದ್ರೆ ಡಾಕ್ಟರ್ ಗಳ ಕೊರತೆ ಎನ್ನುವ ಕಾರಣಕ್ಕೆ ಆಸ್ಪತ್ರೆಯನ್ನು ತೆರೆಯದೇ ರೋಗಿಗಳಿಗೂ ಬಳಸಲು ಕೊಡದೇ ಕೋಣೆಯಲ್ಲೇ ಲಾಕ್ ಮಾಡಿ ಇಡಲಾಗಿದೆ. ಸರಕಾರದಿಂದ‌ ಬಂದ 78‌ ಕೋಟಿ ಮೌಲ್ಯದ ಎಕ್ಯೂಪ್ಮೆಂಟ್ಸ್ ಗಳು ಧೂಳು ಹಿಡಿಯುತ್ತಿವೆ.

ಇದನ್ನೂ ಓದಿ: ಆ.21 ರಿಂದ ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಒನ್ ನೇಷನ್‌ ಒನ್ ಕಾರ್ಡ್‌ ಲಭ್ಯ; ಎನ್​​ಸಿಎಮ್​ಸಿ ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ

ವೈದ್ಯರ ಕೊರತೆ, ಆಸ್ಪತ್ರೆಗೆ ಬೀಗ

ಇನ್ನು, ಎರಡು ವರ್ಷಗಳಿಂದ ಆಸ್ಪತ್ರೆಯನ್ನ ಓಪನ್ ಮಾಡದೇ ಇರುವ ಬಗ್ಗೆ ಹಾಗೂ ಎಕ್ಯೂಪ್ಮೆಂಟ್ಸ್ ಗಳನ್ನ ದುರುಪಯೋಗ ಪಡಿಸಿಕೊಂಡಿರುವ ಆರೋಪದ ಅಡಿಯಲ್ಲಿ ಈಗಾಗಲೇ ಚರಕ ಆಸ್ಪತ್ರೆಯ ಡೀನ್ ಮನೋಜ್ ಕುಮಾರ್ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಇದರ‌ ತನಿಖೆಗಾಗಿ ಸರ್ಕಾರ ಸಮಿತಿ ರಚನೆ ಮಾಡಿದ್ದು, ವರದಿ ತಯಾರು ಮಾಡಲು ಸೂಚನೆ ಸಹ ನೀಡಲಾಗಿದೆ. ಈ ಕುರಿತಾಗಿ ಚರಕ ಆಸ್ಪತ್ರೆಯ ನೋಡೆಲ್ ಅಧಿಕಾರಿಗಳು ಹರಿಚರಣ್ ಅವರನ್ನ ಪ್ರಶ್ನಿಸಿದ್ದಕ್ಕೆ, ಚರಕ ಆಸ್ಪತ್ರೆಯಲ್ಲಿ ಕಾರ್ಡಿಯಾಲಾಜಿ, ನ್ಯೂರಾಲಜಿಸ್ಟ್, ಗ್ಯಾಸ್ಟ್ರೋ ಲಜಿ, ಯುರಾಲಜಿ, ನಾಲ್ಕು ಸ್ಪೆಷಲ್ ಚಿಕಿತ್ಸೆಗಳಿಗೆ ಆಸ್ಪತ್ರೆಯನ್ನ ನಿರ್ಮಾಣ ಮಾಡಲಾಗಿದೆ. ಆದ್ರೆ ಈ ನಾಲ್ಕು ಚಿಕಿತ್ಸೆ ನೀಡಲು ಡಾಕ್ಟರ್ ಗಳು ಇಲ್ಲ. ಈ ಹಿಂದೆ ಬೆಂಗಳೂರು ಒನ್ ಆಸ್ಪತ್ರೆಯಿಂದ ಒಂದಷ್ಟು ಜನ ಡಾಕ್ಟರ್ ಗಳನ್ನ ನೇಮಕ ಮಾಡಿಕೊಂಡಿದ್ವಿ. ಆದ್ರೆ ಮತ್ತೆ ಅವರು ವಾಪಾಸ್ ಹಾಸ್ಪಿಟಲ್​ಗಳಿಗೆ ಹೋಗಿದ್ದು, ಸಧ್ಯ ಡಾಕ್ಟರ್ ಗಳ ಕೊರತೆ ಇದೆ. ಈ ಕುರಿತಾಗು ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದೀವಿ.‌ ಈಗಾ ಸರ್ಕಾರದಿಂದ ರೆಸ್ಪಾನ್ಸ್ ಬಂದಿದೆ. ಸಧ್ಯದಲ್ಲೆ ಆರಂಭವಾಗಲಿದೆ. ಎಕ್ಯೂಪ್ಮೆಂಟ್ಸ್ ಗಳ ಕಂಡಿಷನ್ ಚೆನ್ನಾಗಿದೆ. ನಾವು ಡಾಕ್ಟರ್ ಗಳ ಸಂಬಳಕ್ಕೆ ಬೇಕಾದ ಹಣಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ.‌ ಹಗರಣದ ವಿಚಾರಕ್ಕೂ ನಮ್ಮ ಆಸ್ಪತ್ರೆಗೂ ಸಂಬಂಧ ಇಲ್ಲ ಎಂದರು.

ಇನ್ನು, ಶಿವಾಜಿನಗರದಲ್ಲಿ ಈ ಆಸ್ಪತ್ರೆ ರನ್ ಆದ್ರೆ ತುಂಬ ಅನುಕೂಲವಾಗುತ್ತೆ. ನಾವು ಹೃದಯ ಚಿಕಿತ್ಸೆ ಪಡೆಯಬೇಕು ಅಂದ್ರೆ ಜಯದೇವಗೆ ಹೋಗಬೇಕು. ಆದ್ರೆ ಕೋಟ್ಯಾಂತರ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿ ಎರಡು ವರ್ಷದಿಂದ ಕ್ಲೋಸ್ ಮಾಡಿದ್ದಾರೆ.‌ ಡಾಕ್ಟರ್​ಗಳ‌ ಕೊರತೆ ಇದೆ ಎಂದು ಹೇಳ್ತಾರೆ. ಆದ್ರೆ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೂ ಮೊದಲು ಈ ಕುರಿತಾಗಿ ಮಾಹಿತಿ ಇರ್ಲಿಲ್ವಾ? .‌ ಈಗಾ ಕೋಟ್ಯಾಂತರ ರೂಪಾಯಿ ಮೌಲ್ಯದ ಎಕ್ಯೂಪ್ಮೆಂಟ್ಸ್ ಗಳು ಹಾಳಾಗುತ್ತಿರುವುದನ್ನ ಯಾರು ಪ್ರಶ್ನಿಸುತ್ತಾರೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು.

ಒಟ್ನಲ್ಲಿ, ಈಗಿರುವ ಜಯದೇವ, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಈ ಆಸ್ಪತ್ರೆ ಆರಂಭವಾಗಿದ್ರೆ ಶಿವಾಜಿನಗರದ ಸುತ್ತ – ಮುತ್ತಲಿನ ಜನರಿಗೆ ತುಂಬ ಅನುಕೂಲವಾಗುತ್ತಿತ್ತು. ಸರ್ಕಾರ ಡಾಕ್ಟರ್​ಗಳನ್ನ ನೇಮಕ ಮಾಡಿ ಆದಷ್ಟು ಬೇಗ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

 ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ