ಬೆಂಗಳೂರು: ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ

ನಿಮ್ಮ ಏರಿಯಾ ಯಾವುದು? ಯಾಕೆ ನಮ್ಮ ಏರಿಯಾದಲ್ಲಿ ಪ್ಯಾಸೆಂಜರ್​ನ ಪಿಕ್ ಮಾಡಿದೆ ಎಂದು ನಾಲ್ಕೈದು ಆಟೋ ಡ್ರೈವರ್​ಗಳು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರಂತೆ. ಹಲ್ಲೆ ಮಾಡಿ ಬೆದರಿಕೆ ಹಾಕುವ ದೃಶ್ಯ ಹಿಂದೆ ಬರ್ತಿದ್ದ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರು: ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ
ಆಟೋ ಚಾಲಕನಿಗೆ ಆಟೋ ಚಾಲಕರಿಂದಲೇ ಬೆದರಿಕೆ
Follow us
Shivaprasad
| Updated By: ಆಯೇಷಾ ಬಾನು

Updated on:Aug 20, 2023 | 7:13 AM

ಬೆಂಗಳೂರು, ಆ.20: ನಗರದಲ್ಲಿ ಪ್ಯಾಸೆಂಜರ್ ವಿಚಾರವಾಗಿ ಆಟೋ ಚಾಲಕರ ನಡುವೆ ಕಿರಿಕ್ ಆಗಿದ್ದು ಆಟೋ ಚಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ನಡೆದಿದೆ. ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆಟೋ ಚಾಲಕ ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ ಎಂಬ ಕಾರಣಕ್ಕೆ ಇತರೆ ನಾಲ್ಕೈದು ಆಟೋ ಚಾಲಕರು ಫಾಲೋ ಮಾಡಿಕೊಂಡು ಬಂದು ನಾಗಸಂದ್ರ ಮೆಟ್ರೋ ಸ್ಟೇಷನ್‌ ಬಳಿ ಆಟೋ ತಡೆದು ಚಾಲಕನನ್ನ ಹಿಗ್ಗಾಮುಗ್ಗ ಥಳಿಸಿದ್ದಾರೆ.

ನಿಮ್ಮ ಏರಿಯಾ ಯಾವುದು? ಯಾಕೆ ನಮ್ಮ ಏರಿಯಾದಲ್ಲಿ ಪ್ಯಾಸೆಂಜರ್​ನ ಪಿಕ್ ಮಾಡಿದೆ ಎಂದು ನಾಲ್ಕೈದು ಆಟೋ ಡ್ರೈವರ್​ಗಳು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರಂತೆ. ಹಲ್ಲೆ ಮಾಡಿ ಬೆದರಿಕೆ ಹಾಕುವ ದೃಶ್ಯ ಹಿಂದೆ ಬರ್ತಿದ್ದ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಲಾಟೆ ಆಗುತ್ತಿರುವುದನ್ನು ನೋಡಿ ಪ್ರಯಾಣಿಕ ಆಟೋ ಇಳಿದಿದ್ದಾನೆ.

ಸದ್ಯ ಶುಭಮ್ ಗುಪ್ತ ಎಂಬ ವ್ಯಕ್ತಿ ಈ ಘಟನೆ ಸಂಬಂಧ ವಿಡಿಯೋ ಸಮೇತ ಬೆಂಗಳೂರು ಪೊಲೀಸ್ ಪೇಜ್​ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಆಟೋ ಡ್ರೈವರ್​ಗಳು ಪ್ರಯಾಣಿಕರನ್ನ ಬೇರೆ ಏರಿಯಾದಲ್ಲಿ ಪಿಕ್ ಮಾಡಬಾರದ? ಆ ರೀತಿಯ ರೂಲ್ಸ್ ಏನಾದ್ರೂ ಇದೀಯಾ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ವಿಡಿಯೋ ಆಧರಿಸಿ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ; ಹೆಚ್​ಕೆ ಪಾಟೀಲ್ ಹೇಳಿದ್ದಿಷ್ಟು

ಯುವಕನ ಬರ್ಬರ ಹತ್ಯೆ

ಮೈಸೂರಿನ ವಿದ್ಯಾನಗರದ 4ನೇ ಕ್ರಾಸ್​ನಲ್ಲಿ ಯುವಕನ ಬರ್ಬರ ಹತ್ಯೆ ನಡೆದಿದೆ. ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬಾಲರಾಜ್(28) ಎಂಬ ಯುವಕನ  ಹತ್ಯೆಗೈದಿದ್ದಾರೆ. ಘಟನೆ ಸಂಬಂಧ ತೇಜಸ್, ಸಂಜಯ್, ಕಿರಣ್, ಸಾಮ್ರಾಟ್ ವಿರುದ್ಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪೊಲೀಸರು ಕೊಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:07 am, Sun, 20 August 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ