ಐಜಿಪಿ ಮನೆಯಲ್ಲೇ ಕಳ್ಳರ ಕೈಚಳಕ: ಬೀಗ ಮುರಿದು ಅಮೂಲ್ಯ ವಸ್ತುಗಳನ್ನು ಕದ್ದೊಯ್ದರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 03, 2021 | 5:49 PM

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೀಗ ಮುರಿದು ನುಗ್ಗಿರುವ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ದಿದ್ದಾರೆ

ಐಜಿಪಿ ಮನೆಯಲ್ಲೇ ಕಳ್ಳರ ಕೈಚಳಕ: ಬೀಗ ಮುರಿದು ಅಮೂಲ್ಯ ವಸ್ತುಗಳನ್ನು ಕದ್ದೊಯ್ದರು
ಅನೆಕಲ್​ನ ಸೂರ್ಯನಗರದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿ ವಿಪುಲ್ ಕುಮಾರ್ ಅವರ ಮನೆ
Follow us on

ಬೆಂಗಳೂರು: ಮೈಸೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ಐಜಿಪಿ ಆಗಿರುವ ವಿಪುಲ್ ಕುಮಾರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಆನೆಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ವಿಪುಲ್ ಕುಮಾರ್ ಅವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೀಗ ಮುರಿದು ನುಗ್ಗಿರುವ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ದಿದ್ದಾರೆ. ಕೆಲಸದ ನಿಮಿತ್ತ ಅವರು ಮೈಸೂರಿನಲ್ಲಿಯೇ ನೆಲೆಸಿದ್ದಾರೆ. ವಾರಕ್ಕೊಮ್ಮೆ ಆನೆಕಲ್​ನ ಮನೆಗೆ ಬಂದು ಹೋಗುತ್ತಿದ್ದರು.

ವಿಪುಲ್ ಕುಮಾರ್ ಅವರ ಮನೆಗೆ ಐಜಿ ಚಂದ್ರಶೇಖರ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು. ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಮನೆಯಲ್ಲಿ ಸಿಸಿಟಿವಿ ಕ್ಯಾಮೆರ ಇದ್ದರೂ ಕೆಲಸ ಮಾಡುತ್ತಿರಲಿಲ್ಲ. ಸೂರ್ಯಸಿಟಿಯಲ್ಲಿ ಈಚಿನ ದಿನಗಳಲ್ಲಿ ದರೋಡೆ ಮತ್ತು ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಹಲವು ಬಾರಿ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಸುಲಿಗೆ ಆರೋಪಿ ಬಂಧನ
ಬೆಂಗಳೂರಿನ ರಿಚ್​ಮಂಡ್​ ಟೌನ್​ನಲ್ಲಿ ಗುರುವಾರ ಸುಲಿಗೆಗೆ ಯತ್ನಿಸಿದ್ದ ಆರೋಪಿಯನ್ನು ಅಶೋಕನಗರ ಪೊಲೀಸರು ಶುಕ್ರವಾರ ಬಂಧಿಸಿದರು. ಆರೋಪಿಯನ್ನು ಹೃತಿಕ್ ಜಯರಾಜ್ (19) ಎಂದು ಗುರುತಿಸಲಾಗಿದೆ. ಸೆ 1ರಂದು ರಿಚ್ಮಂಡ್ ಟೌನ್​ನಲ್ಲಿ ಸುಲಿಗೆಗೆ ಯತ್ನಿಸಲಾಗಿದೆ.

ಆರೋಪಿಯು ಕ್ಯಾಬ್ ಚಾಲಕನಿಗೆ ಚಾಕು ತೋರಿಸಿ ಸುಲಿಗೆ ಮಾಡಲು ಯತ್ನಿಸಿದ್ದ. ಈ ವೇಳೆ ಚಾಲಕನ ಕಿರುಚಾಟ ಕೇಳಿ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿದ್ದರು. ಬಳಿಕ ಈತ ಸಾರ್ವಜನಿಕರಿಗೆ ಚಾಕು ತೋರಿಸಿ ಎಸ್ಕೇಪ್ ಆಗಿದ್ದ. ಆರೋಪಿಯ ಚಲನವಲನ ಮೊಬೈಲ್​​ನಲ್ಲಿ ಸೆರೆಯಾಗಿತ್ತು. ಅಶೋಕನಗರ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಬೋರ್​ವೆಲ್ ಲಾರಿ ಹರಿದು ಪೊಲೀಸ್ ಕಾನ್​ಸ್ಟೆಬಲ್ ಸಾವು
ಧಾರವಾಡದ ಯಾಲಕ್ಕಿ ಶೆಟ್ಟರ್ ಬಡಾವಣೆಯಲ್ಲಿ ಬೋರ್​ವೆಲ್​ ಲಾರಿ ಹರಿದು ಪೊಲೀಸ್ ಕಾನ್ಸ್​ಟೇಬಲ್ ಸಾವನ್ನಪ್ಪಿದ್ದಾರೆ. ಮೃತರನ್ನು ವಿದ್ಯಾಗಿರಿ ಠಾಣೆಯ ಕಾನ್​ಸ್ಟೆಬಲ್ ನಿಂಗಪ್ಪ ಬೂಸಣ್ಣವರ್ (28) ಎಂದು ಗುರುತಿಸಲಾಗಿದೆ. ಪಾಲಿಕೆ ಚುನಾವಣೆ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಊಟ, ನೀರು ಪೂರೈಸುತ್ತಿದ್ದರು. ಸ್ಥಳಕ್ಕೆ
ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂ ರಾಮ್​ ಭೇಟಿ ನೀಡಿದರು.

(Theft in IGP Vipul Kumar Home Thief Stole Precious Materials)

ಇದನ್ನು ಓದಿ: ರಿಚ್​ಮಂಡ್ ಟೌನ್​ನಲ್ಲಿ ಹಾಡಹಗಲೇ ಚಾಕು ತೋರಿಸಿ ದರೋಡೆಗೆ ಯತ್ನ: ದುಷ್ಕರ್ಮಿ ಸ್ಥಳೀಯರ ಕಣ್ಣೆದುರೇ ಪರಾರಿ

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ 13 ಜನರ ಕಿಸೆಗೆ ಬಿತ್ತು ಕತ್ತರಿ! 1.50 ಲಕ್ಷ ಕಳ್ಳತನದ ಆರೋಪ

Published On - 5:40 pm, Fri, 3 September 21