Burglary: ಬಿಜೆಪಿ ಮುಖಂಡನ ಮನೆ ಬೀಗ ಒಡೆದು ಕಳ್ಳತನ, ಕಳ್ಳರ ಖತರ್ನಾಕ್ ಐಡಿಯಾ ಕಂಡು ಪೊಲೀಸರಿಗೇ ಶಾಕ್

| Updated By: ಸಾಧು ಶ್ರೀನಾಥ್​

Updated on: Oct 03, 2023 | 8:16 PM

ಸಿಡಿಹೊಸಕೋಟೆ: ಬಿಜೆಪಿ ಮುಖಂಡ ರವಿಚಂದ್ರನ್​​ ಮನೆಗೆ ನುಗ್ಗಿದ ಇಬ್ಬರು ಖದೀಮರು ಮನೆಯ ಬೀಗ ಒಡೆದು 15 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿದ್ದಾರೆ. ಯಾವುದೇ ಸುಳಿವು ಸಿಗದಿರಲು ಅದೇ ಮನೆಯಲ್ಲಿದ್ದ ಖಾರದ ಪುಡಿಯನ್ನು ಮನೆಯಲ್ಲೆಲ್ಲಾ ಕಳ್ಳರು ಚೆಲ್ಲಿದ್ದಾರೆ. 

Burglary: ಬಿಜೆಪಿ ಮುಖಂಡನ ಮನೆ ಬೀಗ ಒಡೆದು ಕಳ್ಳತನ, ಕಳ್ಳರ ಖತರ್ನಾಕ್ ಐಡಿಯಾ ಕಂಡು ಪೊಲೀಸರಿಗೇ ಶಾಕ್
ಬಿಜೆಪಿ ಮುಖಂಡನ ಮನೆ ಬೀಗ ಒಡೆದು ಕಳ್ಳತನ
Follow us on

ಆನೇಕಲ್ ತಾಲೂಕಿನ ಸಿಡಿಹೊಸಕೋಟೆಯ ಅಭಯ ಲೇ ಔಟ್​ನಲ್ಲಿ ಮನೆ ಬೀಗ ಒಡೆದಿರುವ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ನಗದು ದೋಚಿರುವ (Gold Jewellery) ಘಟನೆ ನಡೆದಿದೆ. ಮನೆಯ ಬೀಗ ಒಡೆದು, ಕಳ್ಳತನ (Burglary) ಮಾಡಲು ಇಬ್ಬರು ಖದೀಮರು ಮಾಡಿರುವ ಖತರ್ನಾಕ್ ಐಡಿಯಾ ಕಂಡು ಪೊಲೀಸರಿಗೇ ಶಾಕ್ ಆಗಿದೆ.

ಬಿಜೆಪಿ ಮುಖಂಡ ರವಿಚಂದ್ರನ್​​ ಮನೆಗೆ ನುಗ್ಗಿದ ಇಬ್ಬರು ಖದೀಮರು ಮನೆಯ ಬೀಗ ಒಡೆದು 15 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿದ್ದಾರೆ. ಯಾವುದೇ ಸುಳಿವು ಸಿಗದಿರಲು ಅದೇ ಮನೆಯಲ್ಲಿದ್ದ ಖಾರದ ಪುಡಿಯನ್ನು ಮನೆಯಲ್ಲೆಲ್ಲಾ ಕಳ್ಳರು ಚೆಲ್ಲಿದ್ದಾರೆ.

ರವಿಚಂದ್ರನ್​​ ಕುಟುಂಬಸ್ಥರು ನಿನ್ನೆ ಸೋಮವಾರ ಕುಟುಂಬ ಸಮೇತ ಮೈಸೂರಿಗೆ ತೆರಳಿದ್ದರು. ಮೈಸೂರಿನಿಂದ ವಾಪಸ್ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಬೀರುವಿನ ಬೀಗ ಮರಿದಿರುವುದನ್ನು ಗಮನಿಸಿದ ರವಿಚಂದ್ರನ್, ತಕ್ಷಣವೇ ಪೊಲೀಸರಿಗೆ​​ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲ್ಲೆ, ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತೆ ಆರೋಪ

ತನ್ನ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತೆಯೊಬ್ಬರು (Woman RTI worker) ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಪಂಚಾಯಿತಿ ಅಧಿಕಾರಿಗಳು ಪ್ರತ್ಯಾರೋಪ ಮಾಡಿದ್ದಾರೆ. ಹಾಗಾಗಿ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿಯಲ್ಲಿ ( Mayasandra Gram Panchayat ) ಈ ಘಟನೆ ನಡೆದಿದೆ. ಮಾಹಿತಿ ಹಕ್ಕು ಕಾಯಿದೆಯಡಿ ನಾಗರಾಜ್ ಹಾಗೂ ನಂದಿನಿ ಎಂಬುವವರು ಅರ್ಜಿ ಹಾಕಿದ್ದರು.

ಮಾಜಿ ಅಧ್ಯಕ್ಷ ನಾಗರಾಜ್ ಹಾಗೂ ಸದಸ್ಯ ಸುಬ್ರಮಣಿ ಎಂಬುವವರ ಬಗ್ಗೆ ಮಾಹಿತಿ ನೀಡುವಂತೆ ಅರ್ಜಿ ಹಾಕಿದ್ದರು. ಚುನಾವಣೆ ಸಂದರ್ಭದಲ್ಲಿ ನೀಡಿರುವ ಅಫಿಡವಿಟ್ ದಾಖಲೆಗಳನ್ನ ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಆರ್ಟಿಐ ಕಾರ್ಯಕರ್ತರು ತಮ್ಮ ಅರ್ಜಿಯಲ್ಲಿ ಮಾಜಿ ಅಧ್ಯಕ್ಷ ನಾಗರಾಜ್ ಅವಧಿಯಲ್ಲಿ ಕಾಮಗಾರಿಗಳ ಬಗ್ಗೆಯೂ ಮಾಹಿತಿ ಕೇಳಿದ್ದರು.

ಆದರೆ ಸರಿಯಾದ ದಾಖಲೆ ಮಾಹಿತಿ ನೀಡಿಲ್ಲ ಎಂದು ನಂದಿನಿ ಗ್ರಾಮ ಪಂಚಾಯಿತಿಗೆ ಬಂದಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಲ್ಲೆ ನಡೆಸಿದ್ದಾರೆಂದು ನಂದಿನಿ ಆರೋಪ ಮಾಡಿದ್ದಾರೆ. ಪಂಚಾಯಿತಿಯಲ್ಲಿದ್ದ ಸದಸ್ಯರು ಹಾಗೂ ಕೆಲ ರೌಡಿಗಳಿಂದ ಹಲ್ಲೆ ನಡೆಸಿದ್ದಾರೆಂದು ಆರೋಪ ಮಾಡಲಾಗಿದೆ. ವಾಸು, ಯಲ್ಲಪ್ಪ ಇತರೆ ಪಂಚಾಯಿತಿ ಸದಸ್ಯರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಮೊಬೈಲ್ ಕಿತ್ತೆಸೆದು, ಹೊಡೆದು ಹಾಕಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕೊಲೆ ಮಾಡುವುದಾಗಿ ಕೆಲ ರೌಡಿಗಳು ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ