
ಬೆಂಗಳೂರು, ಆಗಸ್ಟ್ 7: ಯಾವುದೇ ಅಡುಗೆಗಾಗಿರಲಿ ಸಾಮಾನ್ಯವಾಗಿ ಕುಕ್ಕಿಂಗ್ ಆಯಿಲ್ (Cooking Oil) ಬಳಕೆ ಮಾಡುತ್ತಾರೆ. ಅದರಲ್ಲೂ, ಕರಿದ ತಿಂಡಿಗಳಿಗಂತೂ ಅಡುಗೆ ಎಣ್ಣೆ ಬೇಕೇ ಬೇಕು. ಈಗ ವಾತಾವರಣವೂ ತಂಪಾಗಿರವುದರಿಂದ ಸಾಮಾನ್ಯವಾಗಿ ಜನರು ಬಜ್ಜಿ , ಬೋಂಡಾ, ಕಬಾಬ್ನಂತಹ ತಿನಿಸುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ಇವುಗಳನ್ನು ತಿನ್ನುವಾಗ ಇದು ಎಷ್ಟು ಸುರಕ್ಷಿತ ಎಂಬುದನ್ನು ಯಾರು ಕೂಡಾ ಯೋಚನೆ ಮಾಡಿರುವುದಿಲ್ಲ. ಆದರೆ, ಇನ್ಮುಂದೆ ನೀವು ಇದನ್ನು ಯೋಚಿಸಲೇ ಬೇಕು.
ಬೆಂಗಳೂರಿನ ಅನೇಕ ಕಡೆಗಳಲ್ಲಿ ತಿನಿಸುಗಳಿಗೆ ಬಳಸುವ ಅಡುಗೆ ಎಣ್ಣೆ ಸುರಕ್ಷಿತ ಅಲ್ಲ ಎಂಬುದು ಕಂಡು ಬಂದಿದೆ. ರಸ್ತೆ ಬದಿಯಲ್ಲಿ, ಹೋಟೆಲ್ಗಳಲ್ಲಿ ಕರಿಯುವ ಎಣ್ಣೆಯನ್ನು ಎರಡಕ್ಕಿಂತ ಹೆಚ್ಚು ಬಾರಿ ಬಳಕೆ ಮಾಡಿರುವುದು ಕಂಡು ಬಂದಿದೆ. ಹಲವು ಬಾರಿ ಮರುಬಳಕೆ ಮಾಡಿರುವ ಅಡುಗೆ ಎಣ್ಣೆಯಲ್ಲಿ ಟ್ರಾನ್ಸ್ಫ್ಯಾಟ್ ಅಂಶ ಕಂಡು ಬಂದಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.
ಯಾವುದೇ ಅಡುಗೆ ಎಣ್ಣೆಯಲ್ಲಿ ಶೇ 2 ಕ್ಕಿಂತ ಕಡಿಮೆ ಟ್ರಾನ್ಸ್ಫ್ಯಾಟ್ ಇದ್ದರೆ ಮಾತ್ರ ಅದು ಬಳಕೆಗೆ ಯೋಗ್ಯ. ಇಲ್ಲವಾದರೆ ಇದರಲ್ಲಿ ವಿಷಕಾರಿ, ಅಂದರೆ ಕಾರ್ಸಿನೋಜನಿಕ್ನಂತಹ ಅಂಶಗಳು ಉತ್ಪತ್ತಿಯಾಗುತ್ತವೆ. ಅಂತಹ ಅಡುಗೆ ಎಣ್ಣೆಯನ್ನು ಬಳಸಿ ಮಾಡಿದ ತಿನಿಸು ಸೇವಿಸಿದರೆ ಮನುಷ್ಯನ ದೇಹದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತದೆ. ಇದಕ್ಕಾಗಿ ಇಂತಹ ಮರು ಬಳಕೆಯೆ ಅಡುಗೆ ಎಣ್ಣೆಯನ್ನು ಬಳಸಬಾರದು ಎಂದು ಆಹಾರ ಇಲಾಖೆ ಹೇಳಿದೆ.
ಇದನ್ನೂ ಓದಿ: ಇರುವ ಕ್ಯಾಂಟೀನ್ ನಿರ್ವಹಣೆ ಬಿಟ್ಟು 20 ಕೋಟಿ ರೂ. ವೆಚ್ಚದಲ್ಲಿ ಹೊಸ ಇಂದಿರಾ ಕ್ಯಾಂಟೀನ್ಗಳ ಆರಂಭಿಸಲು ಮುಂದಾದ ಬಿಬಿಎಂಪಿ
ಒಟ್ಟಿನಲ್ಲಿ ಬೆಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಕಡೆಗಳಲ್ಲಿ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಒಂದು ಅಥವಾ ಎರಡು ಬಾರಿ ಅಡುಗೆ ಎಣ್ಣೆ ಬಳಸಿದರೆ ಅದನ್ನ ಬಯೋ ಡೀಸೆಲ್ ತಯಾರಿಕಾ ಘಟಕಕ್ಕೆ ನೀಡಬೇಕೆಂದು ಆರ್ಯುಸಿಓ ಏಜೆನ್ಸಿಗಳಿಗೆ ಹಾಗೂ ಹೋಟೆಲ್ ಉದ್ದಿಮೆದಾರರಿಗೆ ಸೂಚನೆ ನೀಡಲಾಗಿದೆ.
Published On - 6:57 am, Thu, 7 August 25