ಇದು ಭಾರತ್​ ಜೋಡೋ ಯಾತ್ರೆ ಅಲ್ಲ, ರಾಹುಲ್ ಯಾತ್ರೆ: ಕಾಂಗ್ರೆಸ್​ ಯಾತ್ರೆ ಬಗ್ಗೆ ಅರುಣ್ ಸಿಂಗ್ ಲೇವಡಿ!

| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2022 | 7:20 PM

ಯಾತ್ರೆ ವೇಳೆ ಸುಳ್ಳು ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್​ ಎಂದು ಸುಮ್ಮನೇ ಪ್ರಚಾರ ಮಾಡುತ್ತಿದ್ದಾರೆ ಎಂದು ಅರುಣ್ ಸಿಂಗ್ ವಾಗ್ದಾಳಿ ಮಾಡಿದರು. 

ಇದು ಭಾರತ್​ ಜೋಡೋ ಯಾತ್ರೆ ಅಲ್ಲ, ರಾಹುಲ್ ಯಾತ್ರೆ: ಕಾಂಗ್ರೆಸ್​ ಯಾತ್ರೆ ಬಗ್ಗೆ ಅರುಣ್ ಸಿಂಗ್ ಲೇವಡಿ!
ರಾಹುಲ್ ಗಾಂಧಿ, ಅರುಣ್ ಸಿಂಗ್​​
Follow us on

ಬೆಂಗಳೂರು: ಇದು ಭಾರತ್​ ಜೋಡೋ ಯಾತ್ರೆ (Bharat Jodo Yatra) ಅಲ್ಲ, ರಾಹುಲ್ ಯಾತ್ರೆ. ಇದೊಂದು ಚುನಾವಣೆ ಯಾತ್ರೆ ಅಷ್ಟೇ ಎಂದು ಭಾರತ್ ಜೋಡೋ ಯಾತ್ರೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಲೇವಡಿ ಮಾಡಿದರು. ಯಾತ್ರೆ ವೇಳೆ ಸುಳ್ಳು ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್​ ಎಂದು ಸುಮ್ಮನೇ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ಕಾಮನ್ ಸಿಎಂ, ಅವರು ಜನಪರ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಆರೋಪ ಮಾಡಿ, ಸಿಎಂಗೆ ಅಪಮಾನ ಮಾಡೋ ಮೂಲಕ ರಾಜ್ಯದ ಜನರಿಗೆ ಅವಮಾನ ಮಾಡಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನರು ಕಾಂಗ್ರೆಸ್​ಗೆ ಉತ್ತರ ಕೊಡುತ್ತಾರೆ ಎಂದು ಅರುಣ್ ಸಿಂಗ್ ವಾಗ್ದಾಳಿ ಮಾಡಿದರು.

ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಬಗ್ಗೆ ನಾನು ಮಾತಾಡುವುದಿಲ್ಲ. ಅಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನ ಗೊಂದಲಗಳು ನಡೆಯುತ್ತಿವೆ. ದೇಶ ಹಾಗೂ ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಕಾಂಗ್ರೆಸ್ ಗ್ರಾಫ್​ ಕೆಳಗೆ ಹೋಗಿದೆ, ಆ ಗ್ರಾಫ್​ ಮೇಲೆ ಏರುವುದಿಲ್ಲ ಎಂದರು. ನಾಳೆ ಕಾರ್ಯಕಾರಿಣಿ ಇದೆ. ವಿಧಾನಸಭೆ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತಿದೆ. 150 ಸೀಟು ನಮಗೆ ಟಾರ್ಗೆಟ್ ಇದೆ. ಇದಕ್ಕೆ ‌ರೋಡ್ ಮ್ಯಾಪ್ ಹಾಕುತ್ತೇವೆ. ನಾಳೆ ಸಭೆಯಲ್ಲಿ ಇವೆಲ್ಲದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಆ ಬಗ್ಗೆ ನಾನು ಮಾತಾಡೋದಿಲ್ಲ: ಅರುಣ್ ಸಿಂಗ್

ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ನಾನು ಮಾತಾಡೋದಿಲ್ಲ. ಆದರೆ ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಶ್ರಮ ಹಾಕಿದ್ದಾರೆ. ಭಾರತ ವಿಶ್ವದ 5 ನೇ ದೊಡ್ಡ ಅರ್ಥಿಕ ದೇಶವಾಗಿ ಪ್ರಗತಿ ಆಗುತ್ತಿದೆ. ಉದ್ಯೋಗ ಸೃಷ್ಟಿ ಮಾಡೋ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ‌‌ ನಿರುದ್ಯೋಗ ಸಮಸ್ಯೆಗೆ ಪರಿಹಾರ‌‌ ಕಂಡು ಹಿಡಿಯುತ್ತಿದ್ದಾರೆ. ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭ ಮಾಡುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಪಿಎಸ್​ಐ ಹಗರಣದಲ್ಲಿ ಮಾಜಿ ಸಿಎಂ ಪುತ್ರ ಭಾಗಿ ಆರೋಪ, ಶಾಸಕ ಯತ್ನಾಳ್​ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದು, ಯತ್ನಾಳ್​ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಈ ಹಿಂದೆಯೂ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರುಣ್ ಸಿಂಗ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:18 pm, Thu, 6 October 22