BWSSB: ಬೆಂಗಳೂರಿಗೆ ಕಾವೇರಿ ನೀರು ಪಂಪ್ ಮಾಡುವ ತೊರೆಕಾಡನಹಳ್ಳಿ ಸ್ಟೇಷನ್ ಮುಳುಗಡೆ: ಈ ಬಡಾವಣೆಗಳಿಗೆ ಇನ್ನೆರೆಡು ದಿನ ನೀರು ಬರಲ್ಲ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 05, 2022 | 1:43 PM

ಮಂಡ್ಯ ಜಿಲ್ಲೆಯಲ್ಲಿ ಭಾರೀ ಮಳೆಯಾಗಿರುವ ಕಾರಣ ಪಂಪಿಂಗ್ ಸ್ಟೇಷನ್​ಗೆ ನೀರು ನುಗ್ಗಿದ್ದು, ಸದ್ಯಕ್ಕೆ ಪೂರೈಕೆ ಸ್ಥಗಿತಗೊಂಡಿದೆ.

BWSSB: ಬೆಂಗಳೂರಿಗೆ ಕಾವೇರಿ ನೀರು ಪಂಪ್ ಮಾಡುವ ತೊರೆಕಾಡನಹಳ್ಳಿ ಸ್ಟೇಷನ್ ಮುಳುಗಡೆ: ಈ ಬಡಾವಣೆಗಳಿಗೆ ಇನ್ನೆರೆಡು ದಿನ ನೀರು ಬರಲ್ಲ
ಟಿಕೆ ಹಳ್ಳಿಯಲ್ಲಿರುವ ಬೆಂಗಳೂರು ಜಲಮಂಡಳಿ ಯಂತ್ರಾಗಾರ
Follow us on

ಬೆಂಗಳೂರು / ಮಂಡ್ಯ: ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಸುವ ಜಲಮಂಡಳಿಯ ಟಿಕೆ ಹಳ್ಳಿ ಪಂಪಿಂಗ್​ ಸ್ಟೇಷನ್ (ತೊರೆಕಾಡನಹಳ್ಳಿ) ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿದೆ. ಮಂಡ್ಯ ಜಿಲ್ಲೆಯಲ್ಲಿ ಭಾರೀ ಮಳೆಯಾಗಿರುವ ಕಾರಣ ಪಂಪಿಂಗ್ ಸ್ಟೇಷನ್​ಗೆ ನೀರು ನುಗ್ಗಿದ್ದು, ಸದ್ಯಕ್ಕೆ ಪೂರೈಕೆ ಸ್ಥಗಿತಗೊಂಡಿದೆ. ಜಲಮಂಡಳಿಯ ಎಂಜಿನಿಯರ್​ಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಆದರೆ ಸ್ಟೇಷನ್ ಕಾರ್ಯಾರಂಭ ಮಾಡಲು ಒಂದು ಇನ ಸಮಯ ಬೇಕಾಗಬಹುದು. ನಾಳೆ ರಾತ್ರಿಯವರೆಗೂ ರಿಪೇರಿ ಕೆಲಸ ಮುಂದುವರಿಯಬಹುದು ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ಸುರೇಶ್ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಇದೀಗ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಸೆ 7ರಿಂದ ಮತ್ತೆ ನೀರು ಪೂರೈಕೆ ಆರಂಭವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟಿಕೆ ಹಳ್ಳಿ ಪಂಪಿಂಗ್ ಸ್ಟೇಷನ್​ಗೆ ಬಂದಿರುವ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ತೆರವು ಗೊಳಿಸಲು ಕ್ರೇನ್ ಹಾಗೂ ಪಂಪಿಂಗ್ ಯಂತ್ರಗಳನ್ನು ಬಳಸುತ್ತಿದ್ದಾರೆ. ಜಿಲ್ಲಾಧಿಕಾರಿ ಅಶ್ವಥಿ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಂಗಳೂರು ನೀರು ಪಂಪ್ ಮಾಡುವ ಬೃಹತ್ ಯಂತ್ರಗಳನ್ನು ಸ್ಟೇಷನ್​ನಿಂದ ಹೊರಗೆ ತರಲಾಗಿದೆ. ನೀರು ಮತ್ತು ಕೆಸರಿನಿಂದ ಇವು ಹಾನಿಗೀಡಾಗಿರಬಹುದು. ಪರಿಶೀಲನೆ, ರಿಪೇರಿ ಮತ್ತು ನಿರ್ವಹಣೆ ಪೂರ್ಣಗೊಳಿಸಿದ ನಂತರ ಮತ್ತೆ ಕಾರ್ಯಾರಂಭಗೊಳಿಸಲಾಗುವುದು.

ಬೆಂಗಳೂರು ಜಲಮಂಡಳಿಯ ಯಂತ್ರಾಗಾರ ಜಲಾವೃತಗೊಂಡ ವಿಚಾರ ತಿಳಿದ ಸಿಎಂ ಇಂದು ತುರ್ತಾಗಿ ತೊರೆಕಾಡನಹಳ್ಳಿಗೆ ದೌಡಾಯಿಸುತ್ತಿದ್ದಾರೆ. ಮಧ್ಯಾಹ್ನ 1.30ಕ್ಕೆ ಹೆಲಿಕಾಪ್ಟರ್ ಮೂಲಕ ಮಳವಳ್ಳಿಗೆ, ಅಲ್ಲಿಂದ ರಸ್ತೆ ಮಾರ್ಗವಾಗಿ ಟಿ.ಕೆ.ಹಳ್ಳಿಗೆ ತೆರಳಲಿದ್ದಾರೆ.

ಬೆಂಗಳೂರು ಜಲಮಂಡಳಿಯ ಸೂಚನೆ

ಎಲ್ಲೆಲ್ಲಿ ವ್ಯತ್ಯಯ?

ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರ, ಶೇಷಾದ್ರಿಪುರ, ಓಕಳಿಪುರ, ಶ್ರೀರಾಂಪುರ, ಮತ್ತಿಕೆರೆ, ಸದಾಶಿವನಗರ, ಪ್ಯಾಲೇಸ್ ಗುಟ್ಟಳ್ಳಿ, ಆರ್​ಟಿ ನಗರ, ಜಿಕೆವಿಕೆ, ಸಂಜಯನಗರ, ಹೆಬ್ಬಾಳ, ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ, ಲಿಂಗರಾಜಪುರ, ಟ್ಯಾನರಿ ರಸ್ತೆ, ವಸಂತನಗರ, ಜಗಜೀವನ್​ರಾಂ ನಗರ, ಐಟಿಐ ಕಾಲೊನಿ, ಇಂದಿರಾನಗರ 4ನೇ ಹಂತ, ಆಂಧ್ರ ಕಾಲೊನಿ, ಎಚ್​ಎಎಲ್, ಚಾಮರಾಜಪೇಟೆ, ಶ್ರೀನಗರ, ಯಲಹಂಕ, ವಿದ್ಯಾರಣ್ಯಪುರ, ಪಾಪರೆಡ್ಡಿಪಾಳ್ಯ, ರಾಜರಾಜೇಶ್ವರಿನಗರ, ಯಲಹಂಕ, ಮಲ್ಲತ್ತಹಳ್ಳಿ, ಉಲ್ಲಾಳ, ಕೆಂಗೇರಿ, ಜೆ.ಪಿ.ನಗರ, ಅರಕೆರೆ, ನಾಗವಾರ, ರಾಮಯ್ಯ ಲೇಔಟ್, ಮಾರೇನಹಳ್ಳಿ ಸೇರಿದಂತೆ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಸೆ 5 ಮತ್ತು 6ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಟಿ.ಕೆ.ಹಳ್ಳಿ ಯಂತ್ರಾಗಾರ ಜಲಾವೃತ: ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜಿಗೆ ತೊಂದರೆ

ಇದನ್ನೂ ಓದಿ:

 

Published On - 1:43 pm, Mon, 5 September 22