ಬೆಂಗಳೂರು: ನಾಗವಾರದ ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ನಾಪತ್ತೆಯಾಗಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಮ್ರಾನ್(17), ಮುಭಾರಕ್ (17), ಸಾಹಿಲ್(15) ನಾಪತ್ತೆಯಾದವರು.
ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಯೂ.ಡಿ.ಆರ್ ದಾಖಲಾಗಿದೆ. ಸರಾಯಿಪಾಳ್ಯದ ಫಾತಿಮಾ ಲೇಔಟ್ ನಿವಾಸಿ ಇಮ್ರಾನ್ ಪಾಷ (17) ಎಲಿಮೆಂಟ್ಸ್ ಮಾಲ್ ಪಿವಿಆರ್ ನಲ್ಲಿ ಹೆಲ್ಪರ್ ಕೆಲಸ ಮಾಡುತಿದ್ದ. ಮುಬಾರಕ್ (17) ಫಾತೀಮಾ ಲೇಔಟ್ ನ ಅಬೂಬ್ ಕರ್ ಮಸೀದಿ ರಸ್ತೆ ಬಳಿ ವಾಸವಾಗಿದ್ದು ವೆಲ್ಡಿಂಗ್ ಕೆಲಸ ಮಾಡುತಿದ್ದ. ಸಾಹಿಲ್ (15) ಫಾತೀಮಾ ಲೇಔಟ್ ನ ಅಬೂಬ್ ಕರ್ ಮಸೀದಿ ರಸ್ತೆ, ಫಾತೀಮಾ ಲೇಔಟ್ ನಲ್ಲಿ ವಾಸವಾಗಿದ್ದ. ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.
ತಾಯಿ ಸಾವಿನ ನೋವು ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡ ಮಗ
ವಿಜಯಪುರ: ತಾಯಿಯ ಸಾವಿನಿಂದ ಜಿಗುಪ್ಸೆಗೊಂಡು ಪುತ್ರ ಪರಶುರಾಮ ಮಲ್ಲಪ್ಪ ನಾಯ್ಕೋಡಿ(25) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ 1 ವರ್ಷದ ಹಿಂದೆ ಪರಶುರಾಮ ತಾಯಿ ಮೃತಪಟ್ಟ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪರಶುರಾಮ ಇಂದು ಇಂಗಳಗಿ ಗ್ರಾಮದ ಸೋದರ ಮಾವನ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಮೇ 26ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ
ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿದ ಜೆಸಿಬಿ
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮದ ಕೂಟುಪೊಳೆ ಬಳಿ ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿದ ಜೆಸಿಬಿಗೆ ಕಾರ್ಮಿಕ ಬಲಿಯಾಗಿದ್ದಾನೆ. ಹಾಸನ ಮೂಲದ ಸಂತೋಷ್(28) ಮೃತ ಕಾರ್ಮಿಕ. ಅಪಘಾತದ ರಭಸಕ್ಕೆ ಕಾರ್ಮಿಕನ ದೇಹ 2 ಭಾಗವಾಗಿದೆ. ಕೇರಳದ ವ್ಯಕ್ತಿಯೊಬ್ಬನ ಎಸ್ಟೇಟ್‌ನಲ್ಲಿ ಕೆಲಸ ಮಾಡ್ತಿದ್ದ ಜೆಸಿಬಿ ಗುದ್ದಿ ಘಟನೆ ನಡೆದಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಇಂದು 153 ಕೊರೊನಾ ಪ್ರಕರಣಗಳು ಪತ್ತೆ
ರಾಜ್ಯದಲ್ಲಿ ಮೇ26ರಂದು 153 ಜನರಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.0.72ರಷ್ಟಿದೆ. ರಾಜ್ಯದಲ್ಲಿ ಕೊರೊನಾ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 1,777 ಇದೆ. ಹಾಗೂ ಬೆಂಗಳೂರಿನಲ್ಲಿ ಇಂದು 142 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
Published On - 7:47 pm, Thu, 26 May 22