ತಿರುಮಲಕ್ಕೆ ಹೋಗುವ ಭಕ್ತರೇ ಗಮನಿಸಿ: ಕರ್ನಾಟಕ ಭವನದಲ್ಲಿ ರೂಮ್ ಬುಕ್ಕಿಂಗ್ ಬಂದ್; ಸಚಿವ ಬಸವಂತಪ್ಪ ಮಹತ್ವದ ಸೂಚನೆ

ತಿರುಮಲದಲ್ಲಿ ತೀವ್ರ ಕುಡಿಯುವ ನೀರಿನ ಅಭಾವದಿಂದ ಯಾತ್ರಿಕರಿಗೆ ಸಂಕಷ್ಟ ಎದುರಾಗಿದೆ. ಮಳೆಯ ಕೊರತೆಯಿಂದ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು, TTD ದಿನಕ್ಕೆ 4 ಗಂಟೆ ಮಾತ್ರ ನೀರು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಭವನದಲ್ಲಿ ಕೊಠಡಿ ಬುಕಿಂಗ್ ರದ್ದುಪಡಿಸಲಾಗಿದೆ. ಆನ್‌ಲೈನ್ ಬುಕಿಂಗ್‌ಗೆ ಮಾತ್ರ ಅವಕಾಶವಿದ್ದು, ಶಿಫಾರಸು ಪತ್ರಗಳ ಬುಕಿಂಗ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮುಜರಾಯಿ ಇಲಾಖೆ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲು ಹರಸಾಹಸ ಪಡುತ್ತಿದೆ.

ತಿರುಮಲಕ್ಕೆ ಹೋಗುವ ಭಕ್ತರೇ ಗಮನಿಸಿ: ಕರ್ನಾಟಕ ಭವನದಲ್ಲಿ ರೂಮ್ ಬುಕ್ಕಿಂಗ್ ಬಂದ್; ಸಚಿವ ಬಸವಂತಪ್ಪ ಮಹತ್ವದ ಸೂಚನೆ
ತಿರುಪತಿ
Edited By:

Updated on: Oct 29, 2026 | 10:37 AM

ಆಂಧ್ರಪ್ರದೇಶ, ಅ.29: ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ  ತೀವ್ರ ಸ್ವರೂಪದ ಕುಡಿಯುವ ನೀರಿನ ಅಭಾವ ಎದುರಾಗಿದೆ. ಮಳೆಯ ಕೊರತೆಯಿಂದಾಗಿ ತಿರುಮಲದ ಮುಖ್ಯ ನೀರಿನ ಮೂಲಗಳಾದ ಪಾಪವಿನಾಶನ ಹಾಗೂ ರತ್ನಗಿರಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ತಿರುಮಲದಲ್ಲಿರುವ ಕರ್ನಾಟಕ ಭವನದ ಕೊಠಡಿ ಹಾಗೂ ಡಾರ್ಮಿಟರಿ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲಾಗಿದ್ದು, ರಾಜ್ಯ ಸರ್ಕಾರ ನೀಡುತ್ತಿದ್ದ ಶಿಫಾರಸು ಪತ್ರಗಳನ್ನುತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.

ತಿರುಮಲ ಕ್ಷೇತ್ರಕ್ಕೆ ಪ್ರತಿದಿನ ಸುಮಾರು 20 ರಿಂದ 25 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಪ್ರಸ್ತುತ ಅಭಾವದ ಹಿನ್ನೆಲೆಯಲ್ಲಿ ದಿನಕ್ಕೆ ಕೇವಲ 4 ಗಂಟೆಗಳ ಕಾಲ ಮಾತ್ರ ನೀರು ಪೂರೈಸುವಂತೆ ತಿರುಪತಿ ತಿರುಮಲ ದೇವಸ್ಥಾನದ (TTD) ಆಡಳಿತ ಮಂಡಳಿ ಸೂಚನೆ ನೀಡಿದೆ.

ತಿರುಮಲದಲ್ಲಿರುವ ಕರ್ನಾಟಕ ಭವನವು 5 ಬ್ಲಾಕ್‌ಗಳಲ್ಲಿ ಬರೋಬ್ಬರಿ 350 ಕೊಠಡಿಗಳು ಹಾಗೂ 12 ಬೃಹತ್ ಡಾರ್ಮಿಟರಿಗಳನ್ನು ಹೊಂದಿದೆ. ಪ್ರಸ್ತುತ ಆನ್‌ಲೈನ್ ಮೂಲಕ ಮುಂಚಿತವಾಗಿ ಬುಕ್ಕಿಂಗ್ ಮಾಡಿದ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಆಫ್‌ಲೈನ್ ಹಾಗೂ ಶಿಫಾರಸು ಪತ್ರಗಳ ಬುಕ್ಕಿಂಗ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ಮುಜರಾಯಿ ಇಲಾಖೆಯು ಭವನಕ್ಕೆ ಭೇಟಿ ನೀಡುವ ಯಾತ್ರಿಕರ ಅನುಕೂಲಕ್ಕಾಗಿ ಖಾಸಗಿ ಟ್ಯಾಂಕರ್‌ಗಳ ಮೂಲಕವೇ ನೀರು ಪೂರೈಸಲು ಹರಸಾಹಸ ಪಡುತ್ತಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಇನ್ಮುಂದೆ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ: ಸಿಎಂ ಮಹತ್ವದ ಘೋಷಣೆ!

ಕರ್ನಾಟಕ ಭವನದಲ್ಲಿ ಹೇಗಿದೆ ಸ್ಥಿತಿ?

ತಿರುಮಲದಲ್ಲಿರುವ ಕರ್ನಾಟಕ ಭವನವು 5 ಬ್ಲಾಕ್‌ಗಳಲ್ಲಿ 350 ಕೊಠಡಿಗಳು, 12 ಬೃಹತ್ ಡಾರ್ಮಿಟರಿಗಳು ಹಾಗೂ ಸುಸಜ್ಜಿತ ಕಲ್ಯಾಣ ಮಂಟಪವನ್ನು ಹೊಂದಿದ್ದು, ತಿರುಮಲದ ಬೃಹತ್ ವಸತಿ ಸಂಕೀರ್ಣಗಳಲ್ಲಿ ಒಂದಾಗಿದೆ. “ತಿರುಮಲದಲ್ಲಿ ಕಳೆದ ಕೆಲವು ವಾರಗಳಿಂದ ಭಾರಿ ಜಲಕ್ಷಾಮ ಎದುರಾಗಿದೆ. ಇಡೀ ಪರ್ಯಾಯ ದ್ವೀಪ ಭಾಗದಲ್ಲೇ ಬರದ ಛಾಯೆ ಆವರಿಸಿದೆ. ಪ್ರಸ್ತುತ ನಾವು ಖಾಸಗಿ ವಾಟರ್ ಟ್ಯಾಂಕರ್‌ಗಳನ್ನು ನೆಚ್ಚಿಕೊಂಡು ಕರ್ನಾಟಕ ಭವನಕ್ಕೆ ನೀರು ಪೂರೈಸುತ್ತಿದ್ದೇವೆ.” ಎಂದು ರಾಜ್ಯ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.

ಉತ್ಸವಗಳ (ಬ್ರಹ್ಮೋತ್ಸವ) ಬಳಿಕ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಟಿಟಿಡಿ (TTD) ಆಡಳಿತ ಮಂಡಳಿಯು ಬೆಳಿಗ್ಗೆ 2 ಗಂಟೆ ಹಾಗೂ ಸಂಜೆ 2 ಗಂಟೆ ಸೇರಿದಂತೆ ದಿನಕ್ಕೆ ಕೇವಲ 4 ಗಂಟೆಗಳ ಕಾಲ ಮಾತ್ರ ಕುಡಿಯುವ ನೀರು ಬಳಕೆ ಮಾಡಲು ಪೂರೈಕೆ ಮಾಡುತ್ತಿದೆ. ಮುಜರಾಯಿ ಇಲಾಖೆ ಅಧಿಕಾರಿಗಳ ಪ್ರಕಾರ, ಕಷ್ಟಪಟ್ಟು ಪ್ರತಿದಿನ 4 ವಾಟರ್ ಟ್ಯಾಂಕರ್‌ಗಳನ್ನು ತರಿಸಲಾಗುತ್ತಿದೆ. 3 ತಿಂಗಳ ಮುಂಚಿತವಾಗಿಯೇ ಬುಕ್ ಮಾಡಿರುವ ಆನ್‌ಲೈನ್ ಭಕ್ತರಿಗೆ ಮಾತ್ರ ಸದ್ಯ ಪ್ರವೇಶ ನೀಡಲಾಗುತ್ತಿದ್ದು, ಅವರಿಗೂ ಸಹ ಕೇವಲ ಸ್ನಾನ/ಫ್ರೆಶ್ ಅಪ್ ಆಗಲು ಮಾತ್ರ ನೀರು ಸಿಗುತ್ತಿದೆ. ಆಫ್‌ಲೈನ್ ಬುಕ್ಕಿಂಗ್ ಹಾಗೂ ವಿಐಪಿ ಶಿಫಾರಸು ಪತ್ರಗಳ ಬುಕ್ಕಿಂಗ್ ಅನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 10:28 am, Thu, 29 October 26

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us