Vegetable Price Hike: ಇನ್ನಷ್ಟು ದುಪ್ಪಟ್ಟಾದ ತರಕಾರಿ ಬೆಲೆ, ಯಾವ ಜಿಲ್ಲೆಯಲ್ಲಿ ಎಷ್ಟಿದೆ?

| Updated By: ಆಯೇಷಾ ಬಾನು

Updated on: Jul 05, 2023 | 7:54 AM

ಗಗನಕ್ಕೇರಿದ ತರಕಾರಿ ಬೆಲೆ ನೋಡಿ ಜನ ಮಾರುಕಟ್ಟೆಗೆ ಬರುವುದಕ್ಕೆ ಹಿಂದೇಟು ಹಾಕುವಂತಾಗಿದೆ. ಮೊದಲು 100-150 ರೂಪಾಯಿಗೆ ಬ್ಯಾಸ್ಕೆಟ್ ತುಂಬಾ ಬರುತ್ತಿದ್ದ ತರಕಾರಿ ಈಗ ದುಪ್ಪಟ್ಟಾಗಿದೆ.

Vegetable Price Hike: ಇನ್ನಷ್ಟು ದುಪ್ಪಟ್ಟಾದ ತರಕಾರಿ ಬೆಲೆ, ಯಾವ ಜಿಲ್ಲೆಯಲ್ಲಿ ಎಷ್ಟಿದೆ?
ತರಕಾರಿ
Follow us on

ಬೆಂಗಳೂರು: ರಾಜ್ಯದಲ್ಲಿ ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ(Vegetable Price Hike). ಅದರಲ್ಲೂ ಟೊಮೇಟೊ ಬೆಲೆ(Tomato Rate) ಭಾರಿ ಪೆಟ್ಟು ಕೊಟ್ಟಿದೆ. ಗಗನಕ್ಕೇರಿದ ತರಕಾರಿ ಬೆಲೆ ನೋಡಿ ಜನ ಮಾರುಕಟ್ಟೆಗೆ ಬರುವುದಕ್ಕೆ ಹಿಂದೇಟು ಹಾಕುವಂತಾಗಿದೆ. ಮೊದಲು 100-150 ರೂಪಾಯಿಗೆ ಬ್ಯಾಸ್ಕೆಟ್ ತುಂಬಾ ಬರುತ್ತಿದ್ದ ತರಕಾರಿ ಈಗ ದುಪ್ಪಟ್ಟಾಗಿದೆ. ಬ್ಯಾಸ್ಕೆಟ್ ತುಂಬ ಖರೀದಿಗೆ ತಗುಲುತ್ತಿದ್ದ ಖರ್ಚು ಕೇವಲ ಟೊಮೇಟೊ ಖರೀದಿಗೆ ಸಾಲುತ್ತಿದೆ. ಇದರಿಂದ ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೂ ಪೆಟ್ಟು ಬಿದ್ದಿದೆ.

ಇಂದಿನ ಎಪಿಎಂಸಿಯ ತರಕಾರಿಗಳ ಬೆಲೆ

ಟೊಮೇಟೊ ಬೆಲೆ 109ರಿಂದ 121 ರೂ. ಗೆ ಏರಿಕೆಯಾಗಿದೆ. ಈರುಳ್ಳಿ‌ ದರ 59ರೂ ಇಂದ 65ರೂ.ಗೆ ಏರಿಕೆಯಾಗಿದೆ. ಹಸಿರು ಮೆಣಸಿನಕಾಯಿ 62 ರೂಯಿಂದ 69 ರೂ.ಗೆ ಏರಿಕೆಯಾಗಿದೆ. ಬಿಟ್ರೋಟ್ 52 ರೂ ಯಿಂದ 57ರೂ. ಆಗಿದೆ. ಆಲೂಗಡ್ಡೆ 37ರಿಂದ 41ರೂ. ಬೇಬಿ ಕಾರ್ನ್ 64 ರೂ ಇಂದ 71 ರೂ. ದಪ್ಪ‌ಮೆಣಸಿನ‌ಕಾಯಿ 55 ರೂ ರಿಂದ 61 ರೂ. ಹುರುಳಿಕಾಯಿ 55 ರೂ ಯಿಂದ 61 ರೂ. ಕ್ಯಾರೆಟ್ 55 ರೂ ಯಿಂದ 61 ರೂ.ಗೆ ಏರಿಕೆಯಾಗಿದೆ. ಹೂ ಕೂಸು 31 ರಿಂದ 34 ರೂಗೆ ಏರಿಕೆಯಾಗಿದೆ. ನುಗ್ಗೆಕಾಯಿ 115 ರೂ ಇಂದ 127 ರೂಗೆ ಏರಿಕೆಯಾಗಿದೆ. ದಪ್ಪ ಬದನೆಕಾಯಿ‌ 32 ರೂ ಇಂದ 36 ರೂ ಆಗಿದೆ. ಬೆಳ್ಳುಳ್ಳಿ 44ರೂ ಇಂದ 48 ರೂ ಆಗಿದೆ. ಶುಂಠಿ 81 ರೂ ಇಂದ 89 ರೂ. ಆಗಿದೆ. ಬಟಾಣಿ 87 ರಿಂದ 97 ರೂಗೆ ಜಿಗಿದಿದೆ. ಬೆಂಡೆಕಾಯಿ 44 ರೂ ಇಂದ 48 ರೂ ಆಗಿದೆ. ಮೂಲಂಗಿ 36 ರೂ ಇಂದ 39 ರೂ ಆಗಿದೆ.

ಇದನ್ನೂ ಓದಿ: Vegetable cultivation ಸೊಪ್ಪು ತರಕಾರಿ ಬೆಳೆಯಲ್ಲಿಯೇ ಯಶಸ್ಸು ಕಂಡು ಬದುಕು ಹಸನಾಗಿಸಿಕೊಂಡ ಬೀದರ್ ಜಿಲ್ಲೆಯ ರೈತರು

ಚಿತ್ರದುರ್ಗದ ತರಕಾರಿ ಬೆಲೆ ದುಬಾರಿ

90 ರೂ. ಗೆ ಸಿಗುತ್ತಿದ್ದ ಟೊಮೇಟೊ 100 ರೂ ಆಗಿದೆ. ಹಸಿ ಶುಂಠಿ ಕಳೆದ ವಾರ 180 ರೂ ಇತ್ತು. ಈಗ 200 ರೂ ಆಗಿದೆ. ಈರುಳ್ಳಿ 20 ರೂ ಇತ್ತು. ಈಗ ಐದು ರೂಪಾಯಿ ಹೆಚ್ಚಾಗಿದೆ. ಹಸಿ ಮೆಣಸಿನಕಾಯಿ 100 ರೂ ಯಿಂದ 120ಕ್ಕೆ ಜಿಗಿದಿದೆ. ಬೆಳ್ಳುಳ್ಳಿ 120ರಿಂದ 200 ರೂ ಆಗಿದೆ. ಬೆಂಡೆಕಾಯಿ, ಸವತೆ ಕಾಯಿ, ಕ್ಯಾರೆಟ್, ಈರೇಕಾಯಿ 40 ರಿಂದ 80 ರೂಗೆ ಏರಿದೆ. ಬಿನ್ಸ್ 100 ರೂ. ಇಂದು 120 ರೂಗೆ ಏರಿಕೆಯಾಗಿದೆ. ಹಾಗಲಕಾಯಿ, ಜವಳಿಕಾಯಿ 40ರಿಂದ 50ರೂ ಆಗಿದೆ. ಬಿಟ್ ರೂಟ್ 50ರಿಂದ 60 ರೂ ಆಗಿದೆ. ಹಾಗಲಕಾಯಿ 60 ರೂ ಇಂದ 80 ರೂ ಆಗಿದೆ.

ಕಲಬುರಗಿ ಜಿಲ್ಲೆಯ ತರಕಾರಿ ಬೆಲೆ

ಟೊಮೇಟೊ ದರ 100 ರಿಂದ 130 ರೂ. ಆಗಿದೆ. ಹೀರೇಕಾಯಿ, ಬದನೆಕಾಯಿ ದರ 80 ರೂ. ಇದೆ. ಬೆಂಡೆಕಾಯಿ ದರ 70ರಿಂದ 80 ರೂ ಆಘಿದೆ. ಹಾಗಲಕಾಯಿ 90 ರೂ ಇದೆ. ಸವತೆಕಾಯಿ 80 ರೂ. ಮೆಣಸಿನಕಾಯಿ ದರ 100 ರಿಂದ 120ಕ್ಕೆ ಏರಿಕೆಯಾಗಿದೆ. ಕ್ಯಾರೇಟ್ 80 ರೂ ಇದೆ. ಬೀನ್ಸ್ ದರ 140 ರಿಂದ 160 ರೂ ಆಗಿದೆ. ಆಲುಗಡ್ಡೆ ದರ 80 ರಿಂದ 100 ರೂ ಆಗಿದೆ. ಚವಳಿಕಾಯಿ 80 ರೂ ಇದೆ.

ಕೋಲಾರ ಎಪಿಎಂಸಿ ದರಪಟ್ಟಿ

ಟೊಮೇಟೊ ದರ 120 ರೂ. ಮೆಣಸಿನಕಾಯಿ 100ರೂ. ಬೀನ್ಸ್ 80 ರೂ. ಆಲುಗಡ್ಡೆ 40ರೂ. ಈರುಳ್ಳಿ 25ರೂ. ಹೂಕೋಸು 40ರೂ. ಬಿಟ್ ರೂಟ್ 25ರೂ. ಬದನೆಕಾಯಿ 30ರೂ. ಹೀರೇಕಾಯಿ 40ರೂ. ಸೌತೆಕಾಯಿ 30ರೂ. ಕ್ಯಾರೆಟ್ 50ರೂ. ಬೆಂಡೆಕಾಯಿ 20ರೂ. ಹಾಗಲಕಾಯಿ 50ರೂ. ಕ್ಯಾಬೇಜ್ 20ರೂ. ಕೊತ್ತಂಬರಿ ಒಂದು ಕಟ್ 15ರೂ ಇದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ