ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳ ವೇಗಕ್ಕೆ ಬ್ರೇಕ್: ವೇಗ ಮೀತಿ ಮೀರಿದ 44 ವಾಹನಗಳ ಮೇಲೆ ಕೇಸ್ ಬುಕ್
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಚ್ಚುತ್ತಿರುವ ಅಪಘಾತ ಹಿನ್ನೆಲೆ ವೇಗಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ(Bengaluru-Mysore Expressway)ನಲ್ಲಿ ಹೆಚ್ಚುತ್ತಿರುವ ಅಪಘಾತ ಹಿನ್ನೆಲೆ ವೇಗಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್(Alok Kumar) ಟ್ವೀಟ್ ಮಾಡಿದ್ದು, ‘120 ಕಿ.ಮೀ. ವೇಗದಲ್ಲಿ ವಾಹನ ಸಂಚಾರದಿಂದ ಅಪಘಾತ ಹೆಚ್ಚಳವಾಗಿದೆ. ಹೀಗಾಗಿ ಅಪಘಾತ ತಡೆಯಲು ಗಂಟೆಗೆ 100 ಕಿ.ಮೀ. ವೇಗದ ಮಿತಿ ನಿಗದಿ ಮಾಡಲಾಗಿದೆ. ಅದರಂತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸ್ಪೀಡ್ ರಡಾರ್ ಗನ್, ವಾಹನಗಳ ನಂಬರ್ ಪ್ಲೇಟ್ ರೆಕಗ್ನಿಷನ್(ANPR) ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ನಿಗದಿತ ವೇಗದಲ್ಲಿ ವಾಹನಗಳು ಸಂಚರಿಸಬೇಕು. 100 ಕಿ.ಮೀ. ವೇಗದ ಮಿತಿ ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲು ಮಾಡಲಾಗುತ್ತದೆ ಎಂದು ರಸ್ತೆ ಸುರಕ್ಷಿತ ಮತ್ತು ಸಂಚಾರ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ಹೇಳಿದ್ದಾರೆ.
Booking cases using Speed Radar Guns for over speeding on Bangalore- Mysore Expressway
Appreciate action by SP Ramanagara & his team?
“Follow traffic rules to save lives, not to save fine amount “ pic.twitter.com/ijDi9fMeag
— alok kumar (@alokkumar6994) July 4, 2023
ಇನ್ನು ಈಗಾಗಲೇ ರಾಮನಗರ ಪೊಲೀಸರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಿಗದಿತ ವೇಗದಲ್ಲಿ ಚಲಿಸದ ವಾಹನಗಳ ಪತ್ತೆಗಾಗಿ ಸ್ಪೀಡ್ ರಡಾರ್ ಗನ್ನ್ನು ಬಳಸಲು ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಮೈಸೂರು ಪೊಲೀಸರು ಬಳಸಲು ಶುರು ಮಾಡುತ್ತಾರೆ. ಅದರಂತೆ ನಿನ್ನೆ(ಜು.4) ರಾಮನಗರ ಪೊಲೀಸರು 44 ವೇಗ ಮೀತಿ ಮೀರಿದ ವಾಹನಗಳ ಮೇಲೆ ಕೇಸ್ ಬುಕ್ ಮಾಡಿದ್ದಾರೆ. ಈ ಕುರಿತು ರಾಮನಗರ ಎಸ್ಪಿ ಪ್ರಶಂಸಿದ್ದಾರೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಇದನ್ನೂ ಓದಿ:Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಐದೇ ತಿಂಗಳಲ್ಲಿ 570 ಅಪಘಾತ, 55 ಸಾವು
ಇನ್ನು ಇತ್ತೀಚೆಗಷ್ಟೇ ಅಲೋಕ್ ಮೋಹನ್ ಅವರು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸಿ ಅತಿ ಹೆಚ್ಚು ಅಪಘಾತವಾಗುವ ಸ್ಪಾಟ್ಗಳನ್ನು ಪರಿಶೀಲನೆ ಮಾಡಿದ್ದರು. ಬಳಿಕ ಮಾತನಾಡಿದ್ದ ಅವರು ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದಾಗಿನಿಂದಲೂ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯಲು ಹೆದ್ದಾರಿಯಲ್ಲಿ ಸ್ಪೀಡ್ ರಾಡಾರ್ ಗನ್ ಮತ್ತು ವಾಹನಗಳ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ವಾಹನ ಮಿತಿಗಿಂತ ವೇಗವಾಗಿ ಚಲಿಸುತ್ತಿದ್ದರೆ, ಅಂತಹ ವಾಹನ ಸಂಖ್ಯೆಯ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಈ ಹಿಂದೆ ಹೇಳಿದ್ದರು.
ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಹೆಚ್ಚಳ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿ ‘ವಾಹನಗಳು ಗಂಟೆಗೆ 120 ಕಿಮೀ ಗರಿಷ್ಠ ವೇಗದ ಮಿತಿಯೊಂದಿಗೆ ಚಲಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ, 80 ಕಿಮೀ ನಿಂದ 100 ಕಿಮೀ ವೇಗದಲ್ಲಿ ಪ್ರಯಾಣಿಸುವಾಗ ಅಪಘಾತಗಳು ಸಂಭವಿಸುವುದಿಲ್ಲ. ಈ ವೇಗದಲ್ಲಿ ಪ್ರಯಾಣಿಸಿದಾಗಲೂ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಸೇರಬಹುದು. 10-15 ನಿಮಿಷ ಉಳಿಸುವುದಕ್ಕಾಗಿ ಜನರು ವೇಗದ ಮಿತಿಯನ್ನು ದಾಟಬಾರದು. ಐಷಾರಾಮಿ ಕಾರಿನಲ್ಲಿ, ಕೆಲವರು 140-150 ಕಿಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರೆ, ಅದನ್ನು ಹೇಗೆ ನಿಯಂತ್ರಿಸಬಹುದು? ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:07 am, Wed, 5 July 23