ನಾಳೆ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ: ಎಲ್ಲಿಲ್ಲಿ ನೋಡಿ?

ನಾಳೆ (ಅ.16) ರವಿವಾರ ಜನರ ವೀಕೆಂಡ್ ಮಸ್ತಿ​ಗೆ ಕಡಿವಾಣ ಬೀಳಲಿದೆ.

ನಾಳೆ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ: ಎಲ್ಲಿಲ್ಲಿ ನೋಡಿ?
ಸಾಂಧರ್ಬಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Oct 15, 2022 | 8:00 PM

ಬೆಂಗಳೂರು: ನಾಳೆ (ಅ.16) ರವಿವಾರ ಜನರ ವೀಕೆಂಡ್ ಮಸ್ತಿ​ಗೆ ಕಡಿವಾಣ ಬೀಳಲಿದೆ. ಕಾರಣ ರಾಜಧಾನಿಯ ಬಹುತೇಕ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ನಾಳೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ (Bengaluru) 61ನೇ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್ ಮ್ಯಾರಥಾನ್​ ಆಯೋಜಿಸಲಾಗಿದ್ದು, ಇದರಿಂದ ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 4ರಿಂದ 11 ‌ಗಂಟೆಯವರೆಗೂ ಎಲ್ಲಾ ವಿಧದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಯಾವ ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

  1.  ಕಸ್ತೂರಬಾ ರಸ್ತೆಯ ಹಡ್ಸನ್ ಸರ್ಕಲ್ ನಿಂದ ಸಿದ್ಧಲಿಂಗಯ್ಯ ಜಂಕ್ಷನ್​ವರೆಗೆ
  2.  ಅಂಬೇಡ್ಕರ್ ರಸ್ತೆಯ ತಿಮ್ಮಯ್ಯ ಸರ್ಕಲ್ ನಿಂದ ಕೆ.ಆರ್.ಸರ್ಕಲ್​ವರೆಗೆ
  3.  ರಾಜಭವನ ರಸ್ತೆಯ ಸಿಟಿಓ ಸರ್ಕಲ್ ನಿಂದ ತಿಮ್ಮಯ್ಯ ಜಂಕ್ಷನ್​ವರೆಗೆ
  4.  ಕ್ವೀನ್ಸ್ ರಸ್ತೆಯ ಕ್ವೀನ್ಸ್ ಸರ್ಕಲ್ ನಿಂದ ಸಿಟಿಓ ಸರ್ಕಲ್​ವರೆಗೆ
  5.  ಎಂ.ಜಿ.ರಸ್ತೆಯ ಕ್ವೀನ್ಸ್ ಸರ್ಕಲ್ ನಿಂದ ವೆಬ್ಸ್ ಜಂಕ್ಷನ್​ವರೆಗೆ
  6.  ಸಿದ್ಧಲಿಂಗಯ್ಯ ಜಂಕ್ಷನ್ ನಿಂದ ಕ್ವೀನ್ಸ್ ಸರ್ಕಲ್ ವರೆಗೆ
  7. ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ‌ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರಿ‌ ಪೊಲೀಸರ ಸೂಚನೆ ನೀಡಿದ್ದಾರೆ.

ಕೊನೆಗೂ ದರ ಕಡಿಮೆ ಮಾಡಿದ ಓಲಾ, ಊಬರ್​ ಕಂಪನಿ: ಇಂದಿನಿಂದ ಮಿನಿಮಮ್ ದರ ಪಡೆಯಲು ಹೈಕೋರ್ಟ್​ ಸೂಚನೆ

ಇಂದಿನಿಂದ ಮಿನಿಮಮ್ ದರ ಪಡೆಯಲು ಊಬರ್ (Uber) ಕಂಪನಿ ಮುಂದಾಗಿದ್ದು, 2 ಕಿ.ಮೀ. ದೂರಕ್ಕೆ ಕೇವಲ 30-35 ರೂ. ಮಾತ್ರ ಚಾರ್ಜ್ ಮಾಡಲು ನಿರ್ಧರಿಸಿದೆ. ದುಪ್ಪಟ್ಟು ದರ ವಸೂಲಿ ಬಗ್ಗೆ ಟಿವಿ9 ಮೊದಲು ಸುದ್ದಿ ಮಾಡಿತ್ತು. ನಿರಂತರ ವರದಿಯಿಂದ ಓಲಾ (Ola), ಊಬರ್ ಕಂಪನಿ ಕೊನೆಗೂ ದರ ಕಡಿಮೆ ಮಾಡಿದೆ. ನಿನ್ನೆ ಹೈಕೋರ್ಟ್ ನ್ಯಾಯಾಧೀಶರು 2021ರ ದರವನ್ನು ಮಾತ್ರ ಪಡೆದುಕೊಳ್ಳುವುದರ ಜೊತೆಗೆ 10% ಹೆಚ್ಚಿನ ದರ ಮತ್ತು ಜಿಎಸ್ಟಿ ಸೇರಿಸಿ ಪ್ರಯಾಣಿಕರಿಂದ ಹಣ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಮುಂದಿನ 15 ದಿನಗಳವರೆಗೆ ಮಿನಿಮಮ್ ದರವನ್ನು ಮಾತ್ರ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕು. ನಂತರ ಓಲಾ, ಊಬರ್ ಮತ್ತು ರ್ಯಾಪಿಡೋ ಕಂಪನಿ ಜೊತೆಗೆ ಆರ್​ಟಿಓ ಅಧಿಕಾರಿಗಳು, ಆಟೋ ಸಂಘಟನೆಗಳು ಹಾಗೂ ಪ್ರಯಾಣಿಕರ ಸಭೆ ಮಾಡಿ, ದರ ನಿಗದಿ ಮಾಡಲು ಹೈಕೋರ್ಟ್ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ವಾಣಿವಿಲಾಸ ರೋಡ್​ನಿಂದ ದೊಡ್ಡ ಗಣಪತಿ ದೇವಸ್ಥಾನಕ್ಕೆ 33.29 ಪೈಸೆ ಮಾತ್ರ. ಆದರೆ 1.7 ಕಿಮೀ ದೂರವಿರುವ ಮಾರ್ಗಕ್ಕೆ ಊಬರ್ ಕಂಪನಿ ನಿನ್ನೆ ಮೊನ್ನೆ 80 ರಿಂದ 100 ರೂ. ಚಾರ್ಜ್ ಮಾಡಿದೆ ಎನ್ನಲಾಗುತ್ತಿದೆ.

ಹೈಕೋರ್ಟ್ ಆದೇಶಕ್ಕೂ ಡೊಂಟ್ ಕೇರ್ ಎಂದ ಓಲಾ!

ಇನ್ನು ಮುಂದಿನ ಹದಿನೈದು ದಿನಗಳವರೆಗೆ ಮಿನಿಮಮ್ ದರವನ್ನು ಮಾತ್ರ ಚಾರ್ಜ್ ಮಾಡಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದು, ಹೈ ಕೋರ್ಟ್ ಆದೇಶಕ್ಕೂ ಓಲಾ ಕಂಪನಿ ಡೊಂಟ್ ಕೇರ್ ಎನ್ನುತ್ತಿದೆ. ಇಂದು ಬೆಳಿಗ್ಗಿನಿಂದಲೇ ಊಬರ್ ಕಂಪನಿ ದರವನ್ನು ಇಳಿಸಿ ಕೋರ್ಟ್ ಸೂಚನೆ ಪಾಲನೆ ಮಾಡಿದರೆ, ಇತ್ತ ಓಲಾ ಕಂಪನಿ ಮಾತ್ರ ಹಿಂದಿನಂತೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದೆ. ಹಾಗಾದರೆ ಹೈ ಕೋರ್ಟ್ ಆದೇಶಕ್ಕೆ ಓಲಾ ಕಂಪನಿ ಗೌರವ ನೀಡುತ್ತಿಲ್ಲ ಎನ್ನಲಾಗುತ್ತಿದೆ. ವಾಣಿ ವಿಲಾಸ ರೋಡ್​ನಿಂದ ದೊಡ್ಡ ಗಣಪತಿ ದೇವಸ್ಥಾನಕ್ಕೆ ಊಬರ್​​​ನಲ್ಲಿ 33 ರೂ. ಆದರೆ ಅದೇ ಮಾರ್ಗಕ್ಕೆ ಓಲಾ ಮಾತ್ರ ಬರೋಬ್ಬರಿ 59 ರೂ. ವಸೂಲಿ ಮಾಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:58 pm, Sat, 15 October 22

Loading...
Unable to load recommendations.
Follow Us