ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ ಸಾಧ್ಯತೆ? ನಾಳೆ ಅಧಿಕೃತ ತೀರ್ಮಾನ: ನ್ಯಾ. ಬಿ.ವೀರಪ್ಪ

ಟ್ರಾಫಿಕ್ ಫೈನ್ ರಿಯಾಯಿತಿಯನ್ನ ಮತ್ತೆ ಎರಡು ವಾರ ವಿಸ್ತರಣೆ ಮಾಡುವ ಸಾಧ್ಯತೆ. ಈ ಕುರಿತು ನಾಳೆ (ಫೆ.14) ಅಧಿಕೃತವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹೇಳಿದ್ದಾರೆ.

ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ ಸಾಧ್ಯತೆ? ನಾಳೆ ಅಧಿಕೃತ ತೀರ್ಮಾನ: ನ್ಯಾ. ಬಿ.ವೀರಪ್ಪ
ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ ಸಾಧ್ಯತೆ
Edited By:

Updated on: Feb 13, 2023 | 7:13 PM

ಬೆಂಗಳೂರು: ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ ಮಾಡುವ ಸಾಧ್ಯತೆಯಿದ್ದು, ನಾಳೆ (ಫೆ.14) ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ರಿಯಾಯಿತಿ ವಿಸ್ತರಿಸಲು ಜನಸಾಮಾನ್ಯರಿಂದ ಬೇಡಿಕೆ ಇದೆ. ಸಾರಿಗೆ ಇಲಾಖೆಯಿಂದಲೂ ಈ ಬಗ್ಗೆ ಪತ್ರ ಬಂದಿದೆ. ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಕೂಡಾ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ. ನಾಳೆ ಈ ಬಗ್ಗೆ ಅಧಿಕೃತವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ನು ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡಕ್ಕೆ 50% ಡಿಸ್ಕೌಂಟ್ ಘೋಷಣೆ ಮಾಡಿದ್ದೇ ತಡ ವಾಹನ ಸವಾರರು ಫೈನ್‌ ಪಾವತಿಸುವುದಕ್ಕೆ ಸವಾರರು ಮುಗಿಬಿದ್ದಿದ್ದರು. ಟ್ರಾಫಿಕ್‌ ಪೊಲೀಸರು ಕಂಡರೆ ಭಯಗೊಂಡು ಎಸ್ಕೇಪ್ ಆಗುತ್ತಿದ್ದ ಸವಾರರೆಲ್ಲಾ ಕಳೆದ 10 ದಿನದಿಂದ ಪೊಲೀಸರನ್ನೇ ಹುಡುಕಿಕೊಂಡು ಹೋಗಿ ಸರದಿ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದಾರೆ. ಬಹಳ ದಿನಗಳಿಂದ ಹಲವು ಕೇಸ್​ನೊಂದಿಗೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದವರು 50 ಪರ್ಸೆಂಟ್ ಆಫರ್​ ಅನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಇನ್ನು ಪೊಲೀಸ್ ಇಲಾಖೆ ಸಹ ರಿಯಾಯಿತಿ ನೀಡಿ ಸರ್ಕಾರದ ಬೊಕ್ಕಸ ತುಂಬಿಸಿದೆ. ಈ ಆಫರ್​ನಿಂದ 10 ದಿನಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 120 ಕೋಟಿ 76 ಲಕ್ಷ 40 ಸಾವಿರದ 161 ರೂ ಹರಿದುಬಂದಿತ್ತು. ಇನ್ನು ಮತ್ತೆ ಈ ಆಫರ್​ ವಿಸ್ತರಣೆಯಾದರೆ ಅದೇಷ್ಟು ದಂಡ ವಸೂಲಿಯಾಗಲಿದೆ ಕಾದು ನೋಡಬೇಕಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Mon, 13 February 23