ಬೆಂಗಳೂರು: ಶಾಂತಲಾ ಸರ್ಕಲ್ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ (ರೈಲ್ವೆ ನಿಲ್ದಾಣದ ಕಡೆಯ ರಸ್ತೆ)ಯಲ್ಲಿ (Railway Station Road) ನಾಳೆಯಿಂದ (ನ.19) ವೈಟ್ ಟಾಪಿಂಗ್ (White taping) ಕಾಮಗಾರಿ ಪ್ರಾರಂಭವಾಗಲಿದೆ. ಕಾಮಗಾರಿ 19.11.2022 ರಿಂದ ಪ್ರಾರಂಭವಾಗಿ 18.12.2022 ರವರೆಗೆ ನಡೆಯುವ ಹಿನ್ನೆಲೆ ಈ ರಸ್ತೆಯಲ್ಲಿ ಸಂಚಾರಕ್ಕೆ ನಿಷೇಧಿಸಲಾಗಿದೆ.
ಬೆಂಗಳೂರಿನ ಪ್ರಮುಖ ಸಿಗ್ನಲ್ಗಳಲ್ಲಿ ಟ್ರಾಫಿಕ್ಜಾಮ್
ಬೆಂಗಳೂರಿನ ರಿಚ್ಮಂಡ್ ಸಿಗ್ನಲ್, ಕಾರ್ಪೊರೇಷನ್ ಸರ್ಕಲ್ ಸಿಗ್ನಲ್, ಹಡ್ಸನ್ ಸಿಗ್ನಲ್, ಟೌನ್ಹಾಲ್ ಸಿಗ್ನಲ್ ಸೇರಿದಂತೆ ಮಹಾನಗರದ ಹಲವು ಸಿಗ್ನಲ್ಗಳಲ್ಲಿ ಟ್ರಾಫಿಕ್ಜಾಮ್ ಉಂಟಾಗಿದೆ. ಪೊಲೀಸರಿಂದ ಸಿಗ್ನಲ್ ಸಂಬಂಧಿಸಿ ಕೆಲ ಮಾರ್ಪಾಡು ಮಾಡಿದ ಹಿನ್ನೆಲೆ ಟ್ರಾಫಿಕ್ಜಾಮ್ ಉಂಟಾಗಿದೆ.
ಇನ್ನು ನಗರದಲ್ಲಿ ಕಳೆದ 2 ದಿನಗಳಿಂದ ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಟ್ರಾಫಿಕ್ಜಾಮ್ ನಿಯಂತ್ರಿಸಲಾಗದೆ ಪೊಲೀಸರು ಪರದಾಡುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ಪ್ರಮುಖ ಸಿಗ್ನಲ್ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Fri, 18 November 22