ಬೆಂಗಳೂರು ನಗರದಲ್ಲಿ ಇಂದು ಕೂಡ ಟ್ರಾಫಿಕ್ ಜಾಮ್; ಕಾರಣವೇನು?

ಬೆಂಗಳೂರು ನಗರದಲ್ಲಿ ಇಂದು ಕೂಡ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮಂದಗತಿಯ ಸಂಚಾರದಿಂದ ವಾಹನ ಸವಾರರು ಪರದಾಟ ನಡೆಸಿದರು. ಇತ್ತ ಸಂಚಾರ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ ಇಂದು ಕೂಡ ಟ್ರಾಫಿಕ್ ಜಾಮ್; ಕಾರಣವೇನು?
ಸಾಂದರ್ಭಿಕ ಚಿತ್ರ)
Image Credit source: PTI/File
Edited By:

Updated on: Sep 28, 2023 | 9:46 PM

ಬೆಂಗಳೂರು, ಸೆ.28: ನಗರದಲ್ಲಿ ಇಂದು ಕೂಡ ಟ್ರಾಫಿಕ್ ಜಾಮ್ (Bengaluru Traffic) ಉಂಟಾಗಿದ್ದು, ಮಂದಗತಿಯ ಸಂಚಾರದಿಂದ ವಾಹನ ಸವಾರರು ಪರದಾಟ ನಡೆಸಿದರು. ಇತ್ತ ಸಂಚಾರ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.

ನಗರದ ಕಾರ್ಪೊರೇಷನ್ ಸುತ್ತಮುತ್ತ ಹಾಗೂ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ​ಜಾಮ್ ಉಂಟಾಗಿ ವಾಹನಗಳು ನಿಂತಲ್ಲೇ ನಿಂತಿದ್ದವು. ಅಲ್ಲದೆ ಭಾರೀ ಮಂದಗತಿಯಲ್ಲಿ ಸಾಗಿದವು. ವಾಹನ ದಟ್ಟಣೆ ಹಿನ್ನೆಲೆ ರಸ್ತೆಯಲ್ಲಿ ನಿಂತು ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಾಹನ ದಟ್ಟಣೆಗೆ ಕಾರಣವೇನು?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಇಂದು ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಇದಕ್ಕೆ ಕಾರಣವೇನೆಂದರೆ, ಕರ್ನಾಟಕ ಬಂದ್ ಹಾಗೂ ರಜಾ ದಿನಗಳು. ಹೌದು, ಬೆಂಗಳೂರು ಬಂದ್​ ನಂತರ ನಗರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಲು ಆರಂಭವಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​ ಜಾಮ್​ನಲ್ಲೇ ಕಾರಲ್ಲಿ ಕುಳಿತು ಪಿಜ್ಜಾಗೆ ಆರ್ಡರ್ ಮಾಡಿದ ಚಾಲಕ; ವಿಡಿಯೋ ವೈರಲ್

ಇಂದು ಈದ್ ಮಿಲಾದ್, ನಾಳೆ ಕರ್ನಾಟಕ ಬಂದ್, ಶನಿವಾರ ಮತ್ತು ಭಾನುವಾರ ವಾರಾಂತ್ಯ ಹಾಗೂ ಸೋಮವಾರದಂದು ಗಾಂಧಿ ಜಯಂತಿ ಇವೆ. ಈ ಎಲ್ಲಾ ದಿನಗಳು ರಜಾ ದಿನಗಳಾಗಿವೆ. ಹೀಗಾಗಿ ಒಂದುಷ್ಟು ಜನರು ನಿನ್ನೇ ನಗರ ಬಿಟ್ಟು ಊರು ಸೇರಿಕೊಂಡಿದ್ದು, ಇನ್ನೊಂದಷ್ಟು ಮಂದು ಇಂದು ನಗರದಿಂದ ಊರಿನತ್ತ ಮುಖ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ