ಪ್ರಯಾಣಿಕರ ಗಮನಕ್ಕೆ: ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಈ ಎರಡು ದಿನ ರೈಲು ರದ್ದು

ಕಾರಟಗಿ ಮತ್ತು ಸಿದ್ದಾಪುರ ನಿಲ್ದಾಣಗಳಲ್ಲಿ ನಡೆಯುತ್ತಿರುವ ರೈಲ್ವೆ ಸಂಬಂಧಿತ ಕಾಮಗಾರಿಗಳಿಂದಾಗಿ ರೈಲುಗಳು ಭಾಗಶಃ ರದ್ದುಗೊಳ್ಳಲಿವೆ. ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ಸೇವೆ ನವೆಂಬರ್ 21 ರಿಂದ 30 ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದರೊಂದಿಗೆ ಇನ್ನೂ ಹಲವು ರೈಲುಗಳು ರದ್ದಾಗಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಯಾಣಿಕರ ಗಮನಕ್ಕೆ: ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಈ ಎರಡು ದಿನ ರೈಲು ರದ್ದು
ಭಾರತೀಯ ರೈಲ್ವೆ
Follow us
ವಿವೇಕ ಬಿರಾದಾರ
|

Updated on:Nov 22, 2023 | 6:52 AM

ಬೆಂಗಳೂರು/ಹುಬ್ಬಳ್ಳಿ ನ.20: ನೈಋತ್ಯ ರೈಲ್ವೆಯು (South Western Railway) ಬೆಂಗಳೂರು-ಹುಬ್ಬಳ್ಳಿ (Bengaluru-Hubballi) ಮಧ್ಯೆ ಪ್ರಯಾಣಿಸುವ ಎರಡು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ನವೆಂಬರ್​ 20 ಮತ್ತು 21 ರಂದು ಪ್ರಯಾಣಿಸಬೇಕಿದ್ದ ರೈಲು ಸಂಖ್ಯೆ 07340 ಮತ್ತು 07339 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ರದ್ದಾಗಿವೆ.  ಪ್ರಯಾಣಿಕರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರದ್ದುಮಾಡಿದೆ.  ರೈಲು ಸಂಖ್ಯೆ 06246, 06245 ಹೊಸಪೇಟೆ-ಹರಿಹರ ಪ್ಯಾಸೆಂಜರ್​​ ರೈಲುಗಳನ್ನು ಕಾರಣಾಂತರಗಳಿಂದ ನವೆಂಬರ್​ 17,18,19 ರದ್ದು ಮಾಡಲಾಗಿತ್ತು. ಇದೀಗ ರೈಲುಗಳು ಮೊದಲಿನ ವೇಳಾಪಟ್ಟಿಯಂತೆ ಮತ್ತೆ ಪ್ರಾರಂಭವಾಗಿವೆ.

ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬಾರ್ಮರ್ ಮಧ್ಯೆ ಹೆಚ್ಚು ರೈಲುಗಳನ್ನು ಓಡಿಸಲು ಇಲಾಖೆ ನಿರ್ಧರಿಸಿದೆ. ರೈಲು ಸಂಖ್ಯೆ 06521 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬಾರ್ಮರ್ ವಿಶೇಷ ಎಕ್ಸ್‌ಪ್ರೆಸ್, ನವೆಂಬರ್ 21 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಸಂಜೆ 4.30 ಕ್ಕೆ ಹೊರಡಲಿದೆ. ನವೆಂಬರ್ 23 ರಂದು ಮಧ್ಯಾಹ್ನ 1.45 ಕ್ಕೆ ಬಾರ್ಮರ್ ತಲುಪುತ್ತದೆ.

ರೈಲು ಸಂಖ್ಯೆ 06522 ಬಾರ್ಮರ್-ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 24 ರಂದು ಬೆಳಿಗ್ಗೆ 3.45 ಕ್ಕೆ ಬಾರ್ಮರ್‌ನಿಂದ ಹೊರಟು, ನವೆಂಬರ್ 25 ರಂದು ಬೆಳಿಗ್ಗೆ 11.30 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಲುಪಲಿದೆ. ಈ ರೈಲುಗಳು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ರಾಣಿಬೆನ್ನೂರು, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ವಾಪಿ, ಸೂರತ್‌, ವಡೋದರಾ, ಅಹಮದಾಬಾದ್, ಮಹೇಶನ, ಪಟಾನ್, ಭಿಲ್ಡಿ, ಧನೇರಾ, ರಾಣಿವಾರ, ಮರ್ವಾರ್ ಭಿನ್ಮಾಲ್, ಮೋದ್ರನ್, ಜಲೋರ್, ಮೊಕಲ್ಸರ್, ಸಂಧಾರಿ, ಬಲೋತ್ರಾ ಮತ್ತು ಬೈತು ಮಾರ್ಗವಾಗಿ ಪ್ರಯಾಣಿಸುತ್ತದೆ. ಈ ರೈಲುಗಳು ಎರಡು ಎಸಿ ಟು-ಟೈರ್ ಕೋಚ್‌ಗಳನ್ನು ಹೊಂದಿವೆ. 15 ಎಸಿ ತ್ರೀ-ಟೈರ್ ಎಕಾನಮಿ ಕೋಚ್‌ಗಳು ಮತ್ತು ಎರಡು ಲಗೇಜ್/ಜನರೇಟರ್/ಬ್ರೇಕ್ ವ್ಯಾನ್‌ಗಳನ್ನು ಹೊಂದಿವೆ.

ಇದನ್ನೂ ಓದಿ: ಮೈಸೂರು, ಬೆಂಗಳೂರು, ಚೆನ್ನೈ ರೈಲು ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದ ನೈಋತ್ಯ ರೈಲ್ವೆ; ಇಲ್ಲಿದೆ ವಿವರ

ಕಾರಟಗಿ ಮತ್ತು ಸಿದ್ದಾಪುರ ನಿಲ್ದಾಣಗಳಲ್ಲಿ ನಡೆಯುತ್ತಿರುವ ರೈಲ್ವೆ ಸಂಬಂಧಿತ ಕಾಮಗಾರಿಗಳಿಂದಾಗಿ ಈ ಕೆಳಗಿನ ರೈಲುಗಳು ಭಾಗಶಃ ರದ್ದುಗೊಳ್ಳಲಿವೆ. ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ಸೇವೆ ನವೆಂಬರ್ 21 ರಿಂದ 30 ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ನವೆಂಬರ್ 21 ರಿಂದ 30 ರವರೆಗೆ ರೈಲು ಸಂಖ್ಯೆ 17303 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಎಕ್ಸ್‌ಪ್ರೆಸ್ ಸೇವೆಯನ್ನು ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 07381 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಪ್ಯಾಸೆಂಜರ್ ವಿಶೇಷ ಪ್ರಯಾಣವು ನವೆಂಬರ್ 21 ರಿಂದ 30 ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

ರೈಲು ಸಂಖ್ಯೆ 16546 ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ಪ್ರಯಾಣವು ನವೆಂಬರ್ 22 ರಿಂದ ಡಿಸೆಂಬರ್ 1 ರವರೆಗೆ ಕಾರಟಗಿಯಿಂದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ. ರೈಲು ಸಂಖ್ಯೆ 17304 ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಪ್ರಯಾಣವು ನವೆಂಬರ್ 22 ರಿಂದ ಡಿಸೆಂಬರ್ 1 ರವರೆಗೆ ಕಾರಟಗಿ ನಿಲ್ದಾಣದಿಂದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ. ರೈಲು ಸಂಖ್ಯೆ 07382 ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ಪ್ರಯಾಣವು ನವೆಂಬರ್ 21 ರಿಂದ 30 ರವರೆಗೆ ಕಾರಟಗಿ ನಿಲ್ದಾಣದಿಂದ ಹೊರಡುವ ಬದಲು ಗಂಗಾವತಿಯಿಂದ ಹೊರಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Mon, 20 November 23

ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ