ಬಿಎಂಟಿಸಿ ಬಸ್​ ಚಾಲಕ ತ್ಯಾಗರಾಜ್ ಅಮಾನತು; ಕಾರಣ ನೀಡುವಂತೆ ಎಂಡಿಗೆ ಪತ್ರ ಬರೆದ ಎನ್.ವಿ.ಪ್ರಸಾದ್

| Updated By: ಆಯೇಷಾ ಬಾನು

Updated on: Feb 11, 2023 | 10:17 AM

BMTC: ಚಾಲಕ ತ್ಯಾಗರಾಜ್ ಅಮಾನತು ವಿಚಾರಕ್ಕೆ ಸಂಬಂಧಿಸಿ ಬಿಎಂಟಿಸಿ ಎಂಡಿ ಜಿ.ಸತ್ಯವತಿಗೆ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಪತ್ರ ಬರೆದಿದ್ದಾರೆ.

ಬಿಎಂಟಿಸಿ ಬಸ್​ ಚಾಲಕ ತ್ಯಾಗರಾಜ್ ಅಮಾನತು; ಕಾರಣ ನೀಡುವಂತೆ ಎಂಡಿಗೆ ಪತ್ರ ಬರೆದ ಎನ್.ವಿ.ಪ್ರಸಾದ್
ಬಿಎಂಟಿಸಿ ಬಸ್​​
Follow us on

ಬೆಂಗಳೂರು: ಬಿಎಂಟಿಸಿ ಬಸ್​ ಚಾಲಕ ತ್ಯಾಗರಾಜ್ ಅಮಾನತು ವಿಚಾರಕ್ಕೆ ಸಂಬಂಧಿಸಿ ಬಿಎಂಟಿಸಿ ಎಂಡಿ ಜಿ.ಸತ್ಯವತಿಗೆ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಪತ್ರ ಬರೆದಿದ್ದಾರೆ. ಅಮಾನತಿ ಕಾರಣ ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಎನ್.ವಿ.ಪ್ರಸಾದ್ ಎರಡು ಬಾರಿ ಪತ್ರ ಬರೆದಿದ್ದಾರೆ.

ಬಿಎಂಟಿಸಿ ಡ್ರೈವರ್ ಆಗಿರೋ ತ್ಯಾಗರಾಜ್, ಇಲಾಖೆಯಲ್ಲಿರೋ ಭ್ರಷ್ಟಾಚಾರದ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಾರಿಗೆ ‌ಇಲಾಖೆ ಸೆಕ್ರೆಟರಿ ಡಾ. ಎನ್.ವಿ ಪ್ರಸಾದ್ ಹಾಗೂ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ ಅವರಿಗೆ ಪತ್ರ ಬರೆದಿದ್ರು. ಇದರ ಬೆನ್ನಲ್ಲೆ ತ್ಯಾಗರಾಜ್​ರನ್ನು ಅಮಾನತು ಮಾಡಲಾಗಿದೆ. ಇನ್ನು ತ್ಯಾಗರಾಜ್​​ ಪತ್ರ ಬರೆದಿದ್ದ ಬಗ್ಗೆ ಟಿವಿ9 ಕೂಡ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಸದ್ಯ ಮೊನ್ನೆ ಸಾರಿಗೆ ಇಲಾಖೆ ಸೆಕ್ರೆಟರಿ ಡಾ. ಎನ್‌.ವಿ ಪ್ರಸಾದ್, ಬಿಎಂಟಿಸಿ ಎಂ.ಡಿ ಸತ್ಯವತಿಗೆ ನೋಟಿಸ್ ನೀಡಿದ್ದರು. ನೋಟಿಸ್‌ನಲ್ಲಿ ಚಾಲಕ ತ್ಯಾಗರಾಜ್ ಬರೆದಿರುವ ದೂರುಗಳ ಪತ್ರವನ್ನು ಪರಿಶೀಲಿಸುವಂತೆ ಸೂಚಿಸಿದ್ದರು. ಆದ್ರೆ ಈಗ ಅಮಾನತು ಮಾಡಿದ್ದಕ್ಕೆ ಕಾರಣ ತಿಳಿಸುವಂತೆ ಸೂಚಿಸಿದ್ದಾರೆ. ಒಂದೇ ವಾರದಲ್ಲಿ ಎರಡು ಬಾರಿ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: BMTCಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ಟಿವಿ9, ಚಾಲಕನ ಪತ್ರ ಪರಿಶೀಲಿಸುವಂತೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ

ಬಿಎಂಟಿಸಿ ಒಂಥರ ಭ್ರಷ್ಟರ ಸಂತೆ ಆಗಿದೆ. ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವಾಡ್ತಿದೆ. ಇನ್ನು ತಮ್ಮ ಸಹಿಯನ್ನೇ ನಕಲು ಮಾಡಿ ಕೋಟಿ ಕೋಟಿ ಕೊಳ್ಳೆ ಹೊಡೆದ ಅಧಿಕಾರಿಗಳಿಗೆ ಸತ್ಯವತಿ ಮೇಡಂ ಜಸ್ಟ್ ಟ್ರಾನ್ಸ್​​ಫರ್ ಮಾಡಿದ್ರು ಅಷ್ಟೇ. ಆದ್ರೆ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ ಡೈವರ್ ತ್ಯಾಗರಾಜ್‌ಗೆ ಮಾತ್ರ ಸಸ್ಪೆಂಡ್ ಶಿಕ್ಷೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:17 am, Sat, 11 February 23