ವಿಮಾನ ನಿಲ್ದಾಣದಿಂದ ದುಬಾರಿ ದರ ವಿಧಿಸುತ್ತಿರುವ ಉಬರ್; ನೋಟಿಸ್ ನೀಡಲು ಸಾರಿಗೆ ಇಲಾಖೆ ಸೂಚನೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಉಬರ್ ಕ್ಯಾಬ್ ವಿಧಿಸಿದ ದುಬಾರಿ ದರದ ಸ್ಕ್ರೀನ್‌ಶಾಟ್ ಅನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೆಲವೇ ದಿನಗಳಲ್ಲಿ, ಉಬರ್ ಕಂಪನಿಗೆ ನೋಟಿಸ್ ನೀಡುವಂತೆ ಸಾರಿಗೆ ಆಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kempegowda International Airport) ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಉಬರ್ ಕ್ಯಾಬ್ (Uber Cab) ವಿಧಿಸಿದ ದುಬಾರಿ ದರದ ಸ್ಕ್ರೀನ್‌ಶಾಟ್ ಅನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೆಲವೇ ದಿನಗಳಲ್ಲಿ, ಉಬರ್ ಕಂಪನಿಗೆ ನೋಟಿಸ್ ನೀಡುವಂತೆ ಸಾರಿಗೆ ಆಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೇ 23 ರಂದು, ಟ್ವಿಟರ್ ಬಳಕೆದಾರರೊಬ್ಬರು ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕ್ಯಾಬ್ ಬುಕ್ ಮಾಡುವಾಗ ಉಬರ್ ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಿದ ದರದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದರು. ಉಬರ್ ಎಕ್ಸ್ ಎಲ್ಗೆ 4,000 ರೂ ಮತ್ತು ಉಬರ್ ಪ್ರೀಮಿಯಂಗೆ 2,584 ರೂ. ದರ ತೋರಿಸಿತ್ತು. ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ 50 ಕಿಮೀ ದೂರವಿದೆ ಎಂದೂ ಆ್ಯಪ್ ತೋರಿಸಿದೆ.
ಕ್ಯಾಬ್ ದರವು ನಾನು ವಿಮಾನ ಟಿಕೆಟ್‌ಗೆ ಪಾವತಿಸಿದ ದರದ ಸನಿಹದಲ್ಲಿದೆ ಎಂದೂ ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ರಸ್ತೆ ಸಾರಿಗೆ ಮತ್ತು ಸುರಕ್ಷತೆಯ ಆಯುಕ್ತ ಎಸ್‌ಎನ್ ಸಿದ್ದರಾಮಪ್ಪ ಅವರು ಕ್ಯಾಬ್ ಕಂಪನಿ ವಿರುದ್ಧ ನೋಟಿಸ್ ನೀಡುವಂತೆ ಪ್ರಾದೇಶಿಕ ರಸ್ತೆ ಸಾರಿಗೆ (ಆರ್‌ಟಿಒ) ಗೆ ಸೂಚಿಸಿದ್ದಾರೆ.
ದುಬಾರಿ ದರ ವಿಧಿಸುವ ಮೂಲಕ ನಿಯಮ ಉಲ್ಲಂಘಿಸಿರುವ ಕಂಪನಿಯ ವಿರುದ್ಧ ನೋಟಿಸ್ ನೀಡಲು ಆರ್‌ಟಿಒಗೆ ನಿರ್ದೇಶನ ನೀಡಿದ್ದೇನೆ ಎಂದು ಸಿದ್ದರಾಮಪ್ಪ ತಿಳಿಸಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: Bengaluru News: ವಿಮಾನ ಟಿಕೆಟ್ನಷ್ಟೇ ಇದೆ ಕ್ಯಾಬ್ ದರ; ಟ್ವಿಟರ್ನಲ್ಲಿ ಅಳಲು ತೋಡಿಕೊಂಡ ಪ್ರಯಾಣಿಕರು
ಬಳಕೆದಾರರಿಂದ ಹಲವಾರು ದೂರುಗಳು ಕೇಳಿಬಂದ ನಂತರ, ಇತ್ತೀಚೆಗೆ ಸಾರಿಗೆ ಇಲಾಖೆಯು ಮೊದಲ ನಾಲ್ಕು ಕಿಮೀಗೆ ಪ್ರೀಮಿಯಂ ಕ್ಯಾಬ್‌ಗಳಿಗೆ 75 ಮತ್ತು 150 ರೂ.ಗೆ ಕ್ಯಾಬ್ ದರವನ್ನು ನಿಗದಿಪಡಿಸಿದೆ.
ಏತನ್ಮಧ್ಯೆ, ರಾಜ್ಯ ಸರ್ಕಾರ ಮತ್ತು ಕ್ಯಾಬ್ ಅಗ್ರಿಗೇಟರ್‌ಗಳು ದರ ನಿಗದಿ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Wed, 31 May 23