ಬೆಂಗಳೂರಿ, (ಆಗಸ್ಟ್ 30): ಬೆಂಗಳೂರಿನಲ್ಲಿ ನಮ್ಮ ಮೆಟ್ರೋ (Namma Metro) ಕಾಮಗಾರಿ ಮತ್ತೊಂದು ಮೈಲುಗಲ್ಲು ತಲುಪಿದೆ. ವಮಿಕ ಯಂತ್ರ (tunneling machine vamika )ಬರೋಬ್ಬರಿ 721 ಮೀಟರ್ ಮೆಟ್ರೋ ಸುರಂಗ ಕೊರೆದು ವಮಿಕ ಬರೋಬ್ಬರಿ ನಾಲ್ಕು ತಿಂಗಳು ಅಂದರೆ 132 ದಿನದ ಬಳಿಕ ಯಶಸ್ವಿಯಾಗಿ ಹೊರ ಬಂದಿದೆ. ಏಪ್ರಿಲ್ 21ರಂದು ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಸುರಂಗ ಕೊರೆಯಲು ಆರಂಭಿಸಿದ್ದ ವಮಿಕ, ಇಂದು(ಆಗಸ್ಟ್ 30) ಬೆಂಗಳೂರಿನ ಲ್ಯಾಂಗ್ಫೋರ್ಡ್ ಟೌನ್ ನಿಲ್ದಾಣದಲ್ಲಿ ಹೊರಬಂದಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಮಾಹಿತಿ ನೀಡಿದೆ.
ಈ ಹಿಂದೆ ವಮಿಕ ಟಿಬಿಎಂ ಮೆಷಿನ್ ಸೌತ್ ರಾಂಪ್ ಮತ್ತು ಡೈರಿ ಸರ್ಕಲ್ ಸುರಂಗ ನಿಲ್ದಾಣಗಳ ನಡುವೆ 613.2 ಮೀ ಹಾಗೂ ಡೈರಿ ಸರ್ಕಲ್ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣದ ನಡುವೆ 743.4 ಮೀ ಸುರಂಗ ಕಾಮಗಾರಿ ಪೂರ್ಣಗೊಳಿಸಿತ್ತು. ಇದೀಗ ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಲ್ಯಾಂಗ್ಫೋರ್ಡ್ ಟೌನ್ ನಿಲ್ದಾಣದಲ್ಲಿ 721 ಮೀಟರ್ ಸುರಂಗ ಕೊರೆದಿದೆ. ಇದರೊಂದಿಗೆ ಹಂತ-2, ರೀಚ್-6ರ 20.991 ಕಿ.ಮೀ ಸುರಂಗ ಮಾರ್ಗದಲ್ಲಿ ಒಟ್ಟು 17,62ಕಿ.ಮೀ ಕಾಮಗಾರಿ ಪೂರ್ಣಗೊಂಡಂತಾಗಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ಮೂಲಕ ಮಾಹಿತಿ ತಿಳಿಸಿದೆ
ರೀಚ್-6ರ 20.991 ಕಿ.ಮೀ. ಪೈಕಿ 17.62 ಕಿ.ಮೀ. ಸುರಂಗ ಮಾರ್ಗ ಪೂರ್ಣಗೊಂಡಿದೆ. ಇದರೊಂದಿಗೆ ರೀಚ್-6ರ ಸುರಂಗ ಮಾರ್ಗದಲ್ಲಿ 9 ಟಿಬಿಎಂಗಳ ಕಾರ್ಯಾಚರಣೆ ನಡೆದಿದ್ದು, ಈ ಪೈಕಿ 6 ಟಿಬಿಎಂಗಳು ಸುರಂಗ ಕಾಮಗಾರಿ ಪೂರ್ಣಗೊಳಿಸಿವೆ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಹೇಳಿದೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:07 pm, Wed, 30 August 23