ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್​​ ಸರಿಪಡಿಸಿದ ಏಜೆನ್ಸಿ

| Updated By: ಆಯೇಷಾ ಬಾನು

Updated on: Nov 23, 2022 | 2:44 PM

ಬಿಬಿಎಂಪಿ ಎಇಇ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಫೈಓವರ್​ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಏಜೆನ್ಸಿಗೆ ಸೂಚಿಸಿದ್ದು ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್​​ ಸರಿಪಡಿಸಿದ ಏಜೆನ್ಸಿ
ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್ ಹೊರ ಬರುತ್ತಿವೆ.
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳೆಲ್ಲಾ ಗುಂಡಿಮಯ(Pothole) ಆಗಿ ವಾಹನ ಸವಾರರು ಪ್ರಾಣ ಭಯದಲ್ಲೇ ಸಂಚಾರ ನಡೆಸುವಂತಹ ಸ್ಥಿತಿ ಇದೆ. ಅದು ಸಾಲ್ದು ಅಂತಾ ಈಗ ಪ್ಲೈಓವರ್​ಗಳು ಹೊಸ ಅವಾಂತರ ಸೃಷ್ಟಿಸಿವೆ. ಕೆ.ಆರ್​.ಮಾರ್ಕೆಟ್​​ ಫ್ಲೈಓವರ್​ನಲ್ಲಿ(KR Market Flyover) ಬೋಲ್ಟ್​ಗಳು ಹೊರಬಂದಿದ್ದು ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಈಗ ಈ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಬಿಎಂಪಿ(BBMP) ಎಇಇ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಫೈಓವರ್​ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಏಜೆನ್ಸಿಗೆ ಸೂಚಿಸಿದ್ದು ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

ನಗರದ ಕೇಂದ್ರ ಭಾಗದಲ್ಲಿರುವ ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಸುಮಾರು ನಾಲ್ಕು ಇಂಚು ತನಕ ಬೋಲ್ಟ್​ಗಳು ಮೇಲೆದ್ದಿದ್ದವು. ನಿರ್ವಹಣೆ ಸರಿ ಇಲ್ಲದ ಕಾರಣ ಬೋಲ್ಟ್​ಗಳು ಮೇಲೆ ಬಂದಿದ್ದು 8 ವಾಹನಗಳ ಚಕ್ರಗಳು ಪಂಕ್ಚರ್ ಆಗಿವೆ. ವಿಷಯ ತಿಳಿದ ಸ್ಥಳೀಯ ಪೋಲಿಸರು ನಿನ್ನೆ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದರು. ಬೃಹತ್ ವಾಹನದ ಸಂಚಾರದಿಂದ ಮೇಲ್ಸೇತುವೆ ಮೇಲೆ ಜಾಯಿಂಟ್​ಗಳ ಮಧ್ಯೆ ಬಿರುಕು ಮೂಡಿ ಪ್ಯಾನಲ್​ಗಳ ನಡುವಿನ ಬೋಲ್ಟ್​ಗಳು ಲೂಸ್ ಆಗಿದ್ದವು.

ಇದನ್ನೂ ಓದಿ: ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ

ಟಿವಿ9ನಲ್ಲಿ ಸುದ್ದಿ ಪ್ರಸಾರವಾಗ್ತಿದ್ದಂತೆ ಬಿಬಿಎಂಪಿ AEE ಚಂದ್ರಪ್ಪ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ಚಂದ್ರಪ್ಪ ನಾವು ಪ್ರತಿ ತಿಂಗಳು ಈ ಬೋಲ್ಟ್​ಗಳನ್ನ ಟೈಟ್ ಮಾಡ್ತೇವೆ. ಇದಕ್ಕೆಂದೇ ಮೇಂಟೇನೆನ್ಸ್ ಏಜೆನ್ಸಿ ಇದೆ ಅಂದ್ರು. ಸದ್ಯ AEE ಚಂದ್ರಪ್ಪ ಸೂಚನೆ ವೇರೆಗೆ ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

Published On - 12:24 pm, Wed, 23 November 22