ಬೆಂಗಳೂರು, ಜ.07: ಕಾಡುಗೋಡಿಯ ಓ ಫಾರಂ ಬಳಿ ಬೆಸ್ಕಾಂ (BESCOM) ವಿದ್ಯುತ್ ತಂತಿ ತುಳಿದು ತಾಯಿ ಮಗು ಪ್ರಾಣ ಕಳೆದುಕೊಂಡಿದ್ದ ಘಟನೆ ಬಳಿಕ ಸರ್ಕಾರವನ್ನು ಬಡಿದೆಬ್ಬಿಸಲು ಟಿವಿ9 (TV9 Kannada) ನಗರದಲ್ಲಿರುವ ಡೆಡ್ಲಿ ಸ್ಪಾಟ್ ಗಳ ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡಲು ಶುರು ಮಾಡಿತ್ತು. ಶುಕ್ರವಾರ ಬೆಸ್ಕಾಂ ಡೆಡ್ಲಿ ಸ್ಪಾಟ್ಗಳ ಬಗ್ಗೆ ಸುದ್ದಿ ಬಿತ್ತರಿಸುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕೇವಲ 24 ಗಂಟೆಗಳಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ. ವಿದ್ಯುತ್ ಸ್ಪರ್ಶದಿಂದ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸುವಲ್ಲಿ ಟಿವಿ9 ಯಶಸ್ವಿಯಾಗಿದೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ವಕ್ಷೇತ್ರದಲ್ಲಿದ್ದ ಮೂರು ಡೆಡ್ಲಿ ಟ್ರಾನ್ಸ್ಫಾರ್ಮರ್ಗಳ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು 24 ಗಂಟೆಗಳಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ. ಇಂದು ಕೂಡ ಬೆಸ್ಕಾಂ ಅಧಿಕಾರಿಗಳ ಡೆಡ್ಲಿ ಸ್ಪಾಟ್ಗಳ ತೆರವು ಕಾರ್ಯಾಚರಣೆ ಮುಂದುವರೆದಿದೆ. ಟಿವಿ9ಗೆ ಸ್ಥಳೀಯ ನಿವಾಸಿಗಳು ಧನ್ಯವಾದ ತಿಳಿಸಿದ್ದಾರೆ. ನಮಗೆ ಸಮಸ್ಯೆ ಅಂದರೆ ಬೆಸ್ಕಾಂ, ಬಿಬಿಎಂಪಿ ನೆನಪಿಗೆ ಬರೋದಿಲ್ಲ ಮೊದಲು ನೆನಪಿಗೆ ಬರೋದು ಟಿವಿ9. ಟಿವಿ9 ತಂಡ ಶುಕ್ರವಾರ ಇಲ್ಲಿಗೆ ಬಂತು ಶನಿವಾರ ಎಲ್ಲ ಸಮಸ್ಯೆ ಕ್ಲಿಯರ್ ಆಯ್ತು ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಿನಿ ಟ್ರಾನ್ಸ್ಫಾರ್ಮರ್ ಮೇಲೆ ವಿದ್ಯುತ್ ಸಿಮೆಂಟ್ ಪೋಲ್ ಬಿದ್ದಿತ್ತು. ಆ ಸಿಮೆಂಟ್ ಪೋಲ್ ಕೆಳಭಾಗದಲ್ಲಿ ಕ್ರ್ಯಾಕ್ ಬಿಟ್ಟಿತ್ತು. ಯಾವಾಗ ಬೇಕಾದರೂ ಪೋಲ್ ಕಟ್ ಆಗಿ ಪಕ್ಕದಲ್ಲಿರುವ ಟ್ರಾನ್ಸ್ಫಾರ್ಮರ್ ಮೇಲೆ ಬೀಳುವ ಸಾಧ್ಯತೆಯಿತ್ತು. ಒಂದು ವೇಳೆ ಏನಾದರೂ ಸಿಮೆಂಟ್ ಪೋಲ್ ಕಟ್ ಆಗಿ ಬಿದ್ದಿದ್ದರೆ. ಟ್ರಾನ್ಸ್ಫಾರ್ಮರ್ ಮೇಲಿರುವ 450 ವೋಲ್ಟ್ ಲೈನ್ನ ವೈರ್ ಕಟ್ ಆಗಿ ಕೆಳಗೆ ಬಿದ್ದು ಅಮಾಯಕರ ಪ್ರಾಣ ಹೋಗುತ್ತಿತ್ತು. ಈ ಟ್ರಾನ್ಸ್ಫಾರ್ಮರ್ ಕೆಳಗೆ ಪ್ರತಿದಿನ ಸಾವಿರಾರು ಜನರು ಓಡಾಡುತ್ತಾರೆ. ಸದ್ಯ ಈ ಸಮಸ್ಯೆಯನ್ನು ಸರಿಪಡಿಸಲಾಗುತ್ತಿದೆ.
ಇದನ್ನೂ ಓದಿ: ಕೆ.ಜೆ ಜಾರ್ಜ್ ಸ್ವಕ್ಷೇತ್ರದಲ್ಲೇ ಸಮಸ್ಯೆಗಳ ಸರಮಾಲೆ; ಅಮಾಯಕರ ಬಲಿಗಾಗಿ ಕಾದಿವೆ ಡೆಡ್ಲಿ ಟ್ರಾನ್ಸ್ಫರ್ಮರ್ಸ್
ವಿದ್ಯುತ್ ಕಂಬವೊಂದು ಫುಲ್ ನೆಲಕ್ಕೆ ವಾಲಿತ್ತು. ಯಾವಾಗ ಬೇಕಾದರೂ ನೆಲಕ್ಕೆ ಬೀಳುವಂತಿತ್ತು. ನೆಲಕ್ಕೆ ಬಿದಿದ್ದರೆ ಅಕ್ಕಪಕ್ಕದಲ್ಲಿ ಓಡಾಡುವ ವಾಹನ ಸವಾರರು, ಪಾದಚಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದರು. ಪಕ್ಕದಲ್ಲಿ ಮೂರು ಖಾಸಗಿ ಶಾಲೆಗಳು ಕೂಡ ಇದೆ. ಪ್ರತಿದಿನ ಈ ರೋಡ್ ಮೂಲಕ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗ್ತಾರೆ, ಮಕ್ಕಳು ಓಡಾಡುತ್ತಾರೆ. ಸ್ಥಳೀಯರು ಈ ಬಗ್ಗೆ ಬಿಬಿಎಂಪಿ ಮತ್ತು ಬೆಸ್ಕಾಂಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಟಿವಿ9 ವರದಿ ಬಳಿಕ ಇಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.
11 ಕೆವಿ ವಿದ್ಯುತ್ ಲೈನ್ ಹಾದು ಹೋಗಿದ್ದ ಟ್ರಾನ್ಸ್ಫಾರ್ಮರ್ ಕೆಳಗೆ ವಿದ್ಯುತ್ ತಂತಿಗಳು ಕಟ್ ಆಗಿ ಬಿದ್ದಿದ್ದವು. ಅಲ್ಲದೆ ಶಾರ್ಟ್ ಸರ್ಕ್ಯೂಟ್ ಆಗಿ ಕೆಲವು ವೈರ್ಗಳು ಸುಟ್ಟು ಹೋಗಿದ್ದವು. ಜನರು ಓಡಾಡುವ ರಸ್ತೆಯಲ್ಲಿ ಟ್ರಾನ್ಸ್ಫಾರ್ಮರ್ ಇಡಲಾಗಿತ್ತು. ಅಲ್ಲೇ ಪಕ್ಕದಲ್ಲಿ ಹೋಟೆಲ್ ಇದ್ದು ಪ್ರತಿದಿನ ನೂರಾರು ಜನರು ಟೀ ಕಾಫಿ ಕುಡಿಯಲು ಬರ್ತಿದ್ದರು. ಈ ರೋಡ್ ನಲ್ಲಿ ಖಾಸಗಿ ಶಾಲೆ ಕೂಡ ಇದೆ. ಸಣ್ಣ ಮಕ್ಕಳು ಈ ರೋಡ್ ಮೂಲಕ ಸ್ಕೂಲ್ ಗೆ ಹೋಗುತ್ತಾರೆ. ಸದ್ಯ ಟಿವಿ9ಯಿಂದ ಎಲ್ಲಾ ಸಮಸ್ಯೆ ಬಗೆಹರಿದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ