ಕೆ.ಜೆ ಜಾರ್ಜ್ ಸ್ವಕ್ಷೇತ್ರದಲ್ಲೇ ಸಮಸ್ಯೆಗಳ ಸರಮಾಲೆ; ಅಮಾಯಕರ ಬಲಿಗಾಗಿ ಕಾದಿವೆ ಡೆಡ್ಲಿ ಟ್ರಾನ್ಸ್ಫರ್ಮರ್ಸ್
ಟಿವಿ9 ರಾಜಧಾನಿಯಲ್ಲಿರುವ ಡೆಡ್ಲಿ ಸ್ಪಾಟ್ಗಳನ್ನು ಗ್ರೌಂಡ್ ರಿಪೋರ್ಟ್ ಮಾಡುವ ಮೂಲಕ ಬೆಸ್ಕಾಂ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸಕ್ಕೆ ಮುಂದಾಗಿದೆ. ಇಂದು ಕೂಡ ಟಿವಿ9 ನಗರದ ಮೂರು ಡೆಡ್ಲಿ ಸ್ಪಾಟ್ ಗಳ ಗ್ರೌಂಡ್ ರಿಪೋರ್ಟ್ ಮಾಡಿದೆ. ಅದರಲ್ಲೂ ಪವರ್ ಮಿನಿಸ್ಟರ್ ಕೆ.ಜೆ ಜಾರ್ಜ್ ಸ್ವಕ್ಷೇತ್ರದಲ್ಲಿರುವ ಡೆಡ್ಲಿ ಸ್ಪಾಟ್ಗಳ ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡಿದೆ.
ಬೆಂಗಳೂರು, ಜ.06: ಕಳೆದ ತಿಂಗಳಷ್ಟೇ ಕಾಡುಗೋಡಿಯ ಓ ಫಾರಂ ಬಳಿ ಬೆಸ್ಕಾಂ (BESCOM) ವಿದ್ಯುತ್ ತಂತಿ ತುಳಿದು ತಾಯಿ ಮಗು ಪ್ರಾಣ ಕಳೆದುಕೊಂಡಿದ್ರು. ಅಂದಿನಿಂದ ಟಿವಿ9 (TV9 Kannada) ನಗರದಲ್ಲಿರುವ ಡೆಡ್ಲಿ ಸ್ಪಾಟ್ ಗಳ ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡುವ ಮೂಲಕ ಬೆಸ್ಕಾಂ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡ್ತಿದೆ. ಸದ್ಯ ಈಗ ಇಂಧನ ಸಚಿವ ಕೆ.ಜೆ ಜಾರ್ಜ್ (KJ George) ಸ್ವಕ್ಷೇತ್ರದಲ್ಲೇ ಇರುವ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟಿದೆ. ಪವರ್ ಮಿನಿಸ್ಟರ್ ಸ್ವಕ್ಷೇತ್ರದಲ್ಲೇ ಅಮಾಯಕರ ಬಲಿಗಾಗಿ ಡೆಡ್ಲಿ ಟ್ರಾನ್ಸ್ಫರ್ಮರ್ ಕಾದು ಕುಳಿತಿದೆ.
ಇಂಧನ ಸಚಿವ ಕೆ.ಜೆ ಜಾರ್ಜ್ ಸ್ವಕ್ಷೇತ್ರದಲ್ಲೇ ಸಮಸ್ಯೆಗಳ ಸರಮಾಲೆ
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಳೆದ ತಿಂಗಳು ಬಾಳಿ ಬದುಕಬೇಕಿದ್ದ ಎರಡು ಅಮಾಯಕ ಜೀವಗಳು ಪ್ರಾಣ ಕಳೆದುಕೊಂಡಿದ್ದವು. ಅಂದಿನಿಂದ ಟಿವಿ9 ರಾಜಧಾನಿಯಲ್ಲಿರುವ ಡೆಡ್ಲಿ ಸ್ಪಾಟ್ಗಳನ್ನು ಗ್ರೌಂಡ್ ರಿಪೋರ್ಟ್ ಮಾಡುವ ಮೂಲಕ ಬೆಸ್ಕಾಂ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸಕ್ಕೆ ಮುಂದಾಗಿದೆ. ಇಂದು ಕೂಡ ಟಿವಿ9 ನಗರದ ಮೂರು ಡೆಡ್ಲಿ ಸ್ಪಾಟ್ ಗಳ ಗ್ರೌಂಡ್ ರಿಪೋರ್ಟ್ ಮಾಡಿದೆ. ಅದರಲ್ಲೂ ಪವರ್ ಮಿನಿಸ್ಟರ್ ಕೆ.ಜೆ ಜಾರ್ಜ್ ಸ್ವಕ್ಷೇತ್ರದಲ್ಲಿರುವ ಡೆಡ್ಲಿ ಸ್ಪಾಟ್ಗಳ ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡಿದೆ.
ಸರ್ವಜ್ಞ ವಿಧಾನಸಭಾ ಕ್ಷೇತ್ರದ ದೇವರಾಜ್ ಅರಸು ರೋಡ್ನಲ್ಲಿ 11 ಕೆವಿ ವಿದ್ಯುತ್ ಲೈನ್ ಹಾದು ಹೋಗುವ ಟ್ರಾನ್ಸ್ಫರ್ಮರ್ ಇದೆ. ಆ ಟ್ರಾನ್ಸ್ಫರ್ಮರ್ ಕೆಳಗೆ ವಿದ್ಯುತ್ ತಂತಿಗಳು ಕಟ್ ಆಗಿ ಬಿದ್ದಿದೆ. ಆ ಲೈನ್ ಈಗಾಗಲೇ ಶಾರ್ಟ್ ಸರ್ಕ್ಯೂಟ್ ಆಗಿ ಸುಟ್ಟು ಹೋಗಿದೆ. ಜನರು ಓಡಾಡುವ ರೋಡ್ ನಲ್ಲಿ ಟ್ರಾನ್ಸ್ಫರ್ಮರ್ ಇಡಲಾಗಿದೆ ಮತ್ತು ಈ ಟ್ರಾನ್ಸ್ಫರ್ಮರ್ ಮೈನ್ ರೋಡ್ ನಲ್ಲಿದೆ. ಪಕ್ಕದಲ್ಲೇ ಹೋಟೆಲ್ ಇದೆ. ಪ್ರತಿದಿನ ಹತ್ತಾರು ಜನರು ಟೀ-ಕಾಫಿ ಕುಡಿಯಲು ಬರ್ತಾರೆ. ಈ ರೋಡ್ನಲ್ಲಿ ಖಾಸಗಿ ಶಾಲೆ ಕೂಡ ಇದೆ. ಸಣ್ಣ ಮಕ್ಕಳು ಈ ರೋಡ್ ಮೂಲಕ ಸ್ಕೂಲ್ ಗೆ ಹೋಗುತ್ತಾರೆ. ಈ ಟ್ರಾನ್ಸ್ಫರ್ಮರ್ ನಲ್ಲಿರುವ ಪ್ಲಾಸ್ಟಿಕ್ ಬಾಕ್ಸ್ ಗೆ ಈಗಾಗಲೇ ಶಾರ್ಟ್ ಸರ್ಕ್ಯೂಟ್ ಆಗಿ ಬಾಕ್ಸ್ ಒಳಗಿರುವ ಎಲ್ಲಾ ವಸ್ತುಗಳು ಸುಟ್ಟು ಹೋಗಿದೆ. ಇಂತಹದೊಂದು ಸಮಸ್ಯೆ ಇದ್ದರೂ ಇದುವರೆಗೂ ಬೆಸ್ಕಾಂ ಸಿಬ್ಬಂದಿ ಇದನ್ನು ಸರಿಪಡಿಸುವ ಕಾರ್ಯ ಮಾಡಿಲ್ಲ.
ಇದನ್ನೂ ಓದಿ: ಟಿವಿ9 ‘ಹೇಗಿದೆ ನಮ್ ಶಾಲೆ’ ಅಭಿಯಾನದ ಇಂಪ್ಯಾಕ್ಟ್; ವರದಿ ಬಳಿಕ ಎಚ್ಚೆತ್ತ ಬೆಸ್ಕಾಂ ಸಿಬ್ಬಂದಿಯಿಂದ ಶಾಲೆಗೆ ಭೇಟಿ
ಟ್ಯಾನರಿ ರೋಡ್ನಲ್ಲಿ ಮಿನಿ ಟ್ರಾನ್ಸ್ಫರ್ಮರ್ ಮೇಲೆ ವಿದ್ಯುತ್ ಸಿಮೆಂಟ್, ವಿದ್ಯುತ್ ಪೋಲ್ ಬಿದ್ದಿದೆ. ಈಗಾಗಲೇ ಸಿಮೆಂಟ್ ವಿದ್ಯುತ್ ಪೋಲ್ ಟ್ರಾನ್ಸ್ಫರ್ಮರ್ ನ ಮೂರು ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಆ ಸಿಮೆಂಟ್ ಪೋಲ್ ಕೆಳಭಾಗದಲ್ಲಿ ಈಗಾಗಲೇ ಕ್ರ್ಯಾಕ್ ಬಿಟ್ಟಿದ್ದು ಯಾವಾಗ ಬೇಕಾದರೂ ಫುಲ್ ಕಟ್ ಆಗಿ ಪಕ್ಕದಲ್ಲಿರುವ ಟ್ರಾನ್ಸ್ಫರ್ಮರ್ ಮೇಲೆ ಬೀಳಬಹುದು. ಒಂದು ವೇಳೆ ಏನಾದರೂ ಸಿಮೆಂಟ್ ಪೋಲ್ ಕಟ್ ಆಗಿ ಬಿದ್ದರೆ ಟ್ರಾನ್ಸ್ಫರ್ಮರ್ ಮೇಲಿರುವ 450 ವೋಲ್ಟ್ ಲೈನ್ ನ ವೈರ್ ಕಟ್ ಆಗಬಹುದು. ಕಟ್ ಆಗಿ ಕೆಳಗೆ ಬಿದ್ರೆ ಅಮಾಯಕ ಪ್ರಾಣಗಳು ಹೋಗುವುದು ಖಂಡಿತ. ಈ ಟ್ರಾನ್ಸ್ಫರ್ಮರ್ ಕೆಳಗೆ ಪ್ರತಿದಿನ ಸಾವಿರಾರು ಜನರು ಓಡಾಡುತ್ತಾರೆ. ಇದು ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಮೈನ್ ರೋಡ್ನಲ್ಲಿದೆ.
ಪುಲಿಕೇಶಿನಗರದ ವೆಂಕಟೇಶಪುರದಲ್ಲಿ ವಿದ್ಯುತ್ ಕಂಬ ನೆಲಕ್ಕೆ ವಾಲಿದೆ. ಯಾವಾಗ ಬೇಕಾದರೂ ನೆಲಕ್ಕೆ ಬೀಳಬಹುದು. ಒಂದು ವೇಳೆ ನೆಲಕ್ಕೆ ಬಿದ್ರೆ ಅಕ್ಕಪಕ್ಕದಲ್ಲಿ ಓಡಾಡುವ ವಾಹನ ಸವಾರರು ಮತ್ತು ಪಾದಚಾರಿಗಳು ಪ್ರಾಣ ಕಳೆದುಕೊಳ್ಳುವುದು ಗ್ಯಾರೆಂಟಿ. ಪಕ್ಕದಲ್ಲಿ ಮೂರು ಖಾಸಗಿ ಶಾಲೆಗಳಿವೆ. ಪ್ರತಿದಿನ ಈ ರೋಡ್ ಮೂಲಕ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗ್ತಾರೆ. ಮಕ್ಕಳು ಓಡಾಡುತ್ತಾರೆ.. ಸ್ಥಳೀಯರು ಈ ಬಗ್ಗೆ ಬಿಬಿಎಂಪಿ ಮತ್ತು ಬೆಸ್ಕಾಂ ಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಬೆಸ್ಕಾಂ ಜನರಲ್ ಮ್ಯಾನೇಜರ್ ಶಾಂತಮಲ್ಲಪ್ಪ ಅವರನ್ನು ಕೇಳಿದ್ರೆ ಈಗಾಗಲೇ ಬೆಂಗಳೂರಿನ 30 ಸಾವಿರ ಡೆಡ್ಲಿ ಸ್ಪಾಟ್ ಗಳನ್ನು ಕ್ಲಿಯರ್ ಮಾಡಿದ್ದೀವಿ. ಇನ್ನುಳಿದ 40 ಸಾವಿರ ಡೆಡ್ಲಿ ಸ್ಪಾಟ್ ಗಳನ್ನು ಜನವರಿ ಅಂತ್ಯದೊಳಗೆ ಕ್ಲಿಯರ್ ಮಾಡ್ತಿವಿ ಎಂದು ಉತ್ತರಿಸಿದ್ದಾರೆ.
ಒಟ್ನಲ್ಲಿ ಪ್ರತಿವರ್ಷ ಬೆಸ್ಕಾಂ ನಿಂದ ನಗರದಲ್ಲಿ ಅಮಾಯಕ ಪ್ರಾಣಗಳು ಹೋಗ್ತಿದ್ರು ಕೂಡ ಬೆಸ್ಕಾಂ ಅಧಿಕಾರಿಗಳು ಇಷ್ಟೊಂದು ನಿರ್ಲಕ್ಷ್ಯ ತೋರಿಸುತ್ತಿರುವುದು ಮಾತ್ರ ಸರಿಯಲ್ಲ ಅನ್ನೊಂದು ಜನ ಸಾಮಾನ್ಯರ ಮಾತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ