ನನ್ನ ಮತ್ತು ಅಶೋಕ ದೋಸ್ತಿ ದಶಕಗಳಷ್ಟು ಹಳೇದು ಮತ್ತು ಗಾಢ: ವಿ ಸೋಮಣ್ಣ, ಹಿರಿಯ ಬಿಜೆಪಿ ನಾಯಕ
ಮತ್ತೊಂದು ಕಡೆ ಹೇಳಿಕೆಯೊಂದನ್ನು ನೀಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಸೋಮಣ್ಣ ಪಕ್ಷದಲ್ಲೇ ಉಳಿಯವಂತೆ ಮನವರಿಕೆ ಮಾಡಲಾಗುವುದು ಎಂದಿದ್ದಾರೆ. ಅವರೊಂದಿಗೆ ಈಗಾಗಲೇ ಮಾತಾಡಿದ್ದು, ಅವರಿಗಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಇನ್ನೂ ಸಂದಿಗ್ಧತೆಯಲ್ಲಿದ್ದಾರೆ; ಬಿಜೆಪಿಯಲ್ಲಿರಬೇಕೋ, ತೊರೆಯಬೇಕೋ ಎನ್ನುವ ಗೊಂದಲ ಅವರನ್ನೂ ಈಗಲೂ ಕಾಡುತ್ತಿದೆ. ಡಿಸೆಂಬರ್ 6 ರೊಳಗೆ ನಿರ್ಧಾರ ಪ್ರಕಟಿಸುವೆ ಅಂತ ನವೆಂಬರ್ ನಲ್ಲಿ ಹೇಳಿದ್ದ ಅವರು ಡೋಲಾಯಮನ (dilemma) ಸ್ಥಿತಿಯಲ್ಲಿರುವುದು ಮಾತುಗಳಲ್ಲಿ ಸ್ಪಷ್ಟವಾಗುತ್ತದೆ. ಮಾಜಿ ಸಚಿವ ಇಂದು ಬೆಂಗಳೂರಲ್ಲಿ ಟಿವಿ9 ವರದಿಗಾನೊಂದಿಗೆ ಮಾತಾಡುವಾಗ ತಮ್ಮ ಮತ್ತು ವಿರೋಧ ಪಕ್ಷದ ನಾಯಕ ಅರ್ ಅಶೋಕ (R Ashoka) ನಡುವಿನ ಆತ್ಮೀಯ ಸಂಬಂಧವನ್ನು ಅಭಿಮಾನದಿಂದ ಹೇಳಿಕೊಂಡರು. ಅಶೋಕ ತನಗಿಂತ 10-13 ವರ್ಷಗಳಷ್ಟು ಚಿಕ್ಕವರಾಗಿದ್ದರೂ, ಸ್ನೇಹಿತರ ನಡುವೆ ಇರುವಂಥ ಸಲುಗೆ ಇದೆ, ಮೊದಲು ಅಶೋಕ ಮತ್ತು ತಾನು ಬೇರೆ ಬೇರೆ ಪಕ್ಷಗಳಲ್ಲಿದದ್ದಿದ್ದು ಎಂದು ಸೋಮಣ್ಣ ಹೇಳಿದರು. ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಾತಾಡಿದ ಸೋಮಣ್ಣ ಸಂಕ್ರಾಂತಿ ಹಬ್ಬದ ಬಳಿಕ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಲಿರುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ