ಟಿವಿ9 ‘ಹೇಗಿದೆ ನಮ್‌ ಶಾಲೆ’ ಅಭಿಯಾನದ ಇಂಪ್ಯಾಕ್ಟ್‌; ವರದಿ ಬಳಿಕ ಎಚ್ಚೆತ್ತ ಬೆಸ್ಕಾಂ ಸಿಬ್ಬಂದಿಯಿಂದ ಶಾಲೆಗೆ ಭೇಟಿ

ಗುಬ್ಬಿ(Gubbi) ತಾಲೂಕಿನ ಬ್ಯಾಡಗೆರೆ ಗ್ರಾಮದ ಸರ್ಕಾರಿ ಶಾಲೆ(Government School)ಯ ಆವರಣದಲ್ಲಿದ್ದ ವಿದ್ಯುತ್ ಕಂಬಕ್ಕೆ ಗ್ರೌಂಡ್ ವೈರ್‌ ಅಳವಡಿಸಿದ್ದು, ಇದರಿಂದ ಮಕ್ಕಳಿಗೆ ಅಪಾಯವಿರುವ ಕುರಿತು ಟಿವಿ9 ವರದಿ ಮಾಡಿತ್ತು. ಆ ಬಳಿಕ ಎಚ್ಚೆತ್ತ ಸಂಬಂಧಪಟ್ಟ ಅಧಿಕಾರಿಗಳು ಇದೀಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಿವಿ9 ‘ಹೇಗಿದೆ ನಮ್‌ ಶಾಲೆ’ ಅಭಿಯಾನದ ಇಂಪ್ಯಾಕ್ಟ್‌; ವರದಿ ಬಳಿಕ ಎಚ್ಚೆತ್ತ ಬೆಸ್ಕಾಂ ಸಿಬ್ಬಂದಿಯಿಂದ ಶಾಲೆಗೆ ಭೇಟಿ
ಬ್ಯಾಡಗೇರಿ ಸರ್ಕಾರಿ ಶಾಲೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 19, 2023 | 6:49 PM

ತುಮಕೂರು, ಡಿ.19: ಜಿಲ್ಲೆಯ ಗುಬ್ಬಿ(Gubbi) ತಾಲೂಕಿನ ಬ್ಯಾಡಗೆರೆ ಗ್ರಾಮದ ಸರ್ಕಾರಿ ಶಾಲೆ(Government School)ಯ ಆವರಣದಲ್ಲಿದ್ದ ವಿದ್ಯುತ್ ಕಂಬಕ್ಕೆ ಗ್ರೌಂಡ್ ವೈರ್‌ ಅಳವಡಿಸಿದ್ದು, ಇದರಿಂದ ಮಕ್ಕಳಿಗೆ ಅಪಾಯವಿರುವ ಕುರಿತು ಟಿವಿ9 ವರದಿ ಮಾಡಿತ್ತು. ಇದೀಗ ಟಿವಿ9 ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಬೆಸ್ಕಾಂ ಸಿಬ್ಬಂದಿ ಹಾಗೂ ಜಿ.ಹೊಸಹಳ್ಳಿ ಗ್ರಾಮ ಪಂಚಾಯತಿ PDO ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೈಯಲ್ಲಿ ಪ್ರಾಣ ಹಿಡಿದುಕೊಂಡು ಓಡಾಡುವ ಸರ್ಕಾರಿ ಶಾಲೆ ಮಕ್ಕಳು

ಶಾಲಾ ಕಾಂಪೌಂಡ್‌ಗೆ ಹೊಂದಿಕೊಂಡಂತೆ ವಿದ್ಯುತ್ ಕಂಬವಿದ್ದು, ಅದಕ್ಕೆ ಗ್ರೌಂಡ್ ವೈರ್ ಅಳವಡಿಸಲಾಗಿತ್ತು. ಸ್ವಲ್ಪ ಯಾಮಾರಿ ಕಂಬದ ಗ್ರೌಂಡ್‌ವೈರ್‌ನಿಂದ ವಿದ್ಯುತ್‌ ಹರಿದರೆ ಅನಾಹುತ ಆಗುವ ಸಂಭವವಿದ್ದು, ಭಯಭೀತಿಯಲ್ಲಿ ಸರ್ಕಾರಿ ಕಿರಿಯ ಶಾಲೆ ಮಕ್ಕಳು ಓಡಾಡುತ್ತಿದ್ದರು. ಜೊತೆಗೆ ಇಂದು ಅಥವಾ ನಾಳೆ ಬೀಳುವ ಹಂತದಲ್ಲಿ ಬೃಹತ್ ಅರಳಿ ಮರವೊಂದು ಇದ್ದು, ಇದಕ್ಕೆ ವಿದ್ಯುತ್‌ ಲೈನ್‌ ಹೊಂದಿಕೊಂಡಿತ್ತು. ಶಾಲೆ ಬಳಿ ಯಾವುದೇ ಸಂದರ್ಭದಲ್ಲಾದರೂ ಅನಾಹುತ ಸಂಭವಿಸುವ ಸಾಧ್ಯತೆಯಿರುವುದರಿಂದ ವಿದ್ಯಾರ್ಥಿಗಳು ಕೈಯಲ್ಲಿ ಪ್ರಾಣ ಹಿಡಿದುಕೊಂಡು ಓಡಾಡುತ್ತಿದ್ದರು.

ಇದನ್ನೂ ಓದಿ:ತುಮಕೂರಿನ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ದುಸ್ಥಿತಿ; ಜೀವ ಭಯದಲ್ಲೇ ಪಾಠ ಕೇಳುವ ಮಕ್ಕಳು

ಶಾಲೆಯ ಆವರಣದಲ್ಲಿರುವ ವಿದ್ಯುತ್ ಲೈನ್; ಗ್ರಾಮಸ್ಥರ ಆಕ್ರೋಶ

ಇಲ್ಲಿನ ಶಾಲೆ ಮಕ್ಕಳು ತೀವ್ರ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನಲೆ ಈ ಕುರಿತು ಮಾಹಿತಿ ನೀಡಿದರೂ ಗ್ರಾ.ಪಂ, ಬೆಸ್ಕಾಂ ಸಿಬ್ಬಂದಿ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದರು. ಆದರೆ, ಟಿವಿ9ನಲ್ಲಿ ವರದಿ ಪ್ರಸಾರವಾದ ಬಳಿಕ ಬೆಸ್ಕಾಂ ಸಿಬ್ಬಂದಿ, ಪಿಡಿಒ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ