ಕನಕಪುರ ಸರ್ಕಾರಿ ಶಾಲೆಯಲ್ಲಿದೆಂತ ಸ್ಥಿತಿ, ಮಕ್ಕಳ ಕೈಯಿಂದಲೇ ಶಾಲೆ ಆವರಣದಲ್ಲಿ ಬಿದ್ದ ಬಿಯರ್ ಬಾಟಲ್, ಮಲ ಸ್ವಚ್ಛ ಕಾರ್ಯ

ಜ್ಞಾನ ದೇಗುಲವೆಂದರೆ ಕೈ ಮುಗಿದು ಒಳಗೆ ಹೋಗುವ ಮನಸ್ಥಿತಿ ಇರಬೇಕು. ಆದರೆ ಮುನೇಶ್ವರ ದೊಡ್ಡಿ ಶಾಲೆ ಕುಡುಕರ ಅಡ್ಡೆಯಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಬಿಯರ್ ಬಾಟಲಿಗಳನ್ನು ಎತ್ತಿ ಶಾಲೆ ಆವರಣವನ್ನು ಸ್ವಚ್ಛಗೊಳಿಸುವ ಸ್ಥಿತಿ ಇದೆ.

Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಆಯೇಷಾ ಬಾನು

Updated on:Dec 13, 2023 | 12:10 PM

ರಾಮನಗರ, ಡಿ.12: ಒಂದು ಕಡೆ ಸರ್ಕಾರಿ ಶಾಲೆ (Government School) ಉಳಿಸಿ ಎಂಬ ಅಭಿಯಾನಗಳು ರಾಜ್ಯದೆಲ್ಲೆಡೆ ನಡೆಯುತ್ತಲೇ ಇವೆ. ಮತ್ತೊಂದೆಡೆ ಖಾಸಗಿ ಶಾಲೆಗಳು ಹೈಟೆಕ್ ಸೌಲಭ್ಯಗಳನ್ನು ನೀಡಿ ಪೋಷಕರನ್ನು ಸೆಳೆದು ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇಂತದರ ನಡುವೆ ರಾಮನಗರ (Ramanagara) ಜಿಲ್ಲೆ ಕನಕಪುರ ತಾಲೂಕಿನ ಮುನೇಶ್ವರ ದೊಡ್ಡಿ ಶಾಲೆ ಸರಿಯಾದ ಸೌಲಭ್ಯವಿಲ್ಲದೆ ಸೊರಗುತ್ತಿದೆ. ಅದರಲ್ಲೂ ಈ ಶಾಲೆಯಲ್ಲಿ ಮಕ್ಕಳೇ (Students) ಶಾಲೆಯನ್ನು ಸ್ವಚ್ಛಗೊಳಿಸಬೇಕು. ಪಾಠಕ್ಕೂ ಮುನ್ನ ಶಾಲೆ ಆವರಣದಲ್ಲಿ ಬಿದ್ದ ಬಿಯರ್ ಬಾಟಲಿಗಳನ್ನು ಎತ್ತಿ ಸ್ವಚ್ಛಗೊಳಿಸಬೇಕು. ಈ ವಿಚಾರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಜ್ಞಾನ ದೇಗುಲವೆಂದರೆ ಕೈ ಮುಗಿದು ಒಳಗೆ ಹೋಗುವ ಮನಸ್ಥಿತಿ ಇರಬೇಕು. ಆದರೆ ಮುನೇಶ್ವರ ದೊಡ್ಡಿ ಶಾಲೆ ಕುಡುಕರ ಅಡ್ಡೆಯಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಬಿಯರ್ ಬಾಟಲಿಗಳನ್ನು ಎತ್ತಿ ಶಾಲೆ ಆವರಣವನ್ನು ಸ್ವಚ್ಛಗೊಳಿಸುವ ಸ್ಥಿತಿ ಇದೆ.

ಇದನ್ನೂ ಓದಿ: ಬೀಡಾ ಅಂಗಡಿಯಲ್ಲಿ ಅಂಗನವಾಡಿ! ಇದು ಸೆಷನ್​​ನಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತುರ್ತು ಗಮನಕ್ಕೆ…

ತರಗತಿಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಮದ್ಯದ ಬಾಟಲ್, ಶೌಚ, ಕುಡುಕರು ಮಾಡಿದ ಗಲೀಜನೆಲ್ಲ ಬಾಜಿ ಸ್ವಚ್ಛಗೊಳಿಸಬೇಕು. ಶಾಲೆ ಗೇಟ್ ಹಾಕಿದ ಬಳಿಕ ರಾತ್ರಿ ವೇಳೆ ಶಾಲೆಗೆ ನುಗ್ಗುವ ಕುಡುಕರು ಶಾಲೆ ಆವರಣದಲ್ಲೇ ತಿಂದು, ಕುಡಿದು ಮಜಾ ಮಾಡಿ ಹೋಗುತ್ತಿದ್ದಾರೆ. ಕುಡುಕ ಕಿಡಗೇಡಿಗಳ ಕೃತ್ಯಕ್ಕೆ ಮಕ್ಕಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಪ್ರತಿ ದಿನ ಶಾಲೆ ಬಂದ ತಕ್ಷಣವೇ ಬರಿಗೈಯಲ್ಲಿ ಆವರಣ ಕ್ಲೀನ್ ಮಾಡ್ತಿದ್ದಾರೆ. ದಿನಕ್ಕೆ ಹತ್ತಾರು ಬಾಟಲಿಗಳು ಪತ್ತೆಯಾಗುತ್ತಿವೆ. ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.

2009-10‌ರಲ್ಲಿ ನಿರ್ಮಾಣಗೊಂಡಿರುವ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲೀಗ ವಿದ್ಯಾರ್ಥಿಗಳ ಕೊರತೆ ಉಂಟಾಗಿದೆ. ಪೆನ್ನು, ಪೆನ್ಸಿಲ್ ಹಿಡಿದು ಓದಾಬೇಕಾದ ವಿದ್ಯಾರ್ಥಿಗಳು ಶಾಲೆಗೆ ಬಂದ ತಕ್ಷಣವೇ ಮದ್ಯದ ಬಾಟಲಿ ಹಿಡಿದು ಶಾಲೆ ಸ್ವಚ್ಛಗೊಳಿಸುತ್ತಿದ್ದಾರೆ. ಇದೇ ಕಾರಣಕ್ಕೆ ಶಾಲೆಯ ಮಕ್ಕಳ ಸಂಖ್ಯೆಯೂ ಕುಸಿಯುತ್ತಿದೆ. 50‌ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 25ಕ್ಕೆ ಇಳಿದಿದೆ. ಸ್ವಚ್ಛ ವಾತಾವರಣ ನಿರ್ಮಾಣ ಮಾಡುವಂತೆ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಮನಗರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:57 am, Wed, 13 December 23

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್