ಬೆಂಗಳೂರು, ಮಾ.03: ನಗರದ ಹಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ (Water problem) ಶುರುವಾಗಿದೆ. ಅದರಂತೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಪಿ ನಗರದ 8 ನೇ ಹಂತದ ವಡ್ಡರಪಾಳ್ಯದಲ್ಲಿ (Vaddarapalya) ನಿವಾಸಿಗಳಿಗೆ ಕುಡಿಯಲು ಕೂಡ ನೀರು ಇರಲಿಲ್ಲ. ಈ ಕುರಿತು ಅಂದು ಕುಡಿಯಲು ನೀರಿಲ್ಲ ಎಂದು ವರದಿ ಬಿತ್ತರಿಸಿದ ಟಿವಿ9, ಶಾಸಕರ ಗಮನಕ್ಕೆ ತಂದಿತ್ತು. ಇದೀಗ ಏರಿಯಾದ ಜನರಿಗೆ ಕುಡಿಯಲು ನೀರು ಸಿಕ್ಕಿದೆ. ಖುದ್ದಾಗಿ ಶಾಸಕ ಎಂ. ಕೃಷ್ಣಪ್ಪ(M Krishnappa)ನವರು ತಾವೇ ಸ್ಥಳಕ್ಕೆ ಬಂದು ಟ್ಯಾಂಕರ್ ಮೂಲಕ ನಿವಾಸಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಕಳೆದ ನಾಲ್ಕೈದು ತಿಂಗಳಿನಿಂದ ನಮಗೆ ಕುಡಿಯಲು ನೀರಿರಲಿಲ್ಲ, ನೀವು ಬಂದ ಮೇಲೆ ನಮಗೆ ಕುಡಿಯಲು ನೀರು ಬಂತು ಎಂದು ಇಲ್ಲಿನ ನಿವಾಸಿಗಳು ಟಿವಿ9ಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ. ವಡ್ಡರಪಾಳ್ಯ ಏರಿಯಾದಲ್ಲಿ ಎರಡು ಬೋರ್ವೆಲ್ಗಳಿತ್ತು. ಆದರೆ ಅದು ರಿಪೇರಿಗೆ ಬಂದಿತ್ತು. ಈ ಹಿನ್ನಲೆ ಅದನ್ನು ಸರಿಪಡಿಸಬೇಕಿತ್ತು. ಆದರೆ, ಸರಪಡಿಸಿರಲಿಲ್ಲ. ಇನ್ನು ಏರಿಯಾದ ಮುಂಭಾಗದಲ್ಲಿ ಹೊಸದಾಗಿ ಒಂದು ಆರ್ಓ ಪ್ಲಾಂಟ್ ಕೂಡ ಓಪನ್ ಮಾಡಲಾಗಿತ್ತು. ಅದರಲ್ಲೂ ನೀರು ಬರುತ್ತಿರಲಿಲ್ಲ. ಈ ಸಮಸ್ಯೆಯನ್ನು ಟಿವಿ9 ಸುದ್ದಿ ಮಾಡಿ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರ ಗಮನಕ್ಕೆ ತರಲಾಗಿತ್ತು.
ಇದನ್ನೂ ಓದಿ:ನೀರಿಗಾಗಿ ಹಾಹಾಕಾರ; ಕಂಗಾಲಾದ ಬಸವನಗುಡಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜನ
ಈ ಕುರಿತು ಮಾತನಾಡಿದ ಶಾಸಕ ಎಂ ಕೃಷ್ಣಪ್ಪ, ‘ ಅಲ್ಲಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡ್ತಿನಿ. ಮತ್ತು ಆ ಏರಿಯಾಗೆ ಒಂದು ಹೊಸ ಬೋರ್ವೇಲ್ ಹಾಕಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಈಗ ಆ ಏರಿಯಾಗೆ ಎರಡು ಸಾವಿರ ಲೀಟರ್ನ ಒಂದು ಬೃಹತ್ ಟ್ಯಾಂಕರ್ ಮೂಲಕ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಬಿಡಬ್ಲೂಎಸ್ಎಸ್ಬಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆಯಂತೆ.
ಇನ್ನು ಈ ವಾರ ಹೊಸ ಬೋರ್ವೇಲ್ ಹಾಕಲು ಅಧಿಕಾರಿಗಳು ಪಾಯಿಂಟ್ ಪರಿಶೀಲನೆ ಮಾಡಲಿದ್ದಾರೆ. ಹದಿನೈದು ದಿನಗಳು ಕಾವೇರಿ ನೀರನ್ನು ಏರಿಯಾಗೆ ಬಿಟ್ಟು ಟ್ರಯಲ್ ಮಾಡುತ್ತೇವೆ. ನಂತರ ಎಲ್ಲಾ ಮನೆಗಳಿಗೆ ಮೀಟರ್ ವ್ಯವಸ್ಥೆ ಮಾಡಿ ಶಾಶ್ವತವಾಗಿ ಕುಡಿಯಲು ಕಾವೇರಿ ನೀರು ಬಿಡುತ್ತೇವೆ. ಟಿವಿ9 ಈ ಏರಿಯಾದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿತ್ತು. ಈ ಹಿನ್ನಲೆ ಎರಡು ಬೋರ್ ವೆಲ್ ಮತ್ತು ಕೆಟ್ಟು ಹೋಗಿರುವ ಒಂದು ಆರ್ ಓ ಫ್ಲಾಂಟ್ ಸರಿಪಡಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ