ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬನ್ನೇರುಘಟ್ಟದಲ್ಲಿ ಹೈಅಲರ್ಟ್, ಪ್ರವಾಸಿಗರ ಬ್ಯಾಗ್ ಪರಿಶೀಲನೆ
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದಿಂದ ಸಿಲಿಕಾನ್ ಸಿಟಿ ಜನರು ಭಯಗೊಂಡಿದ್ದಾರೆ. ಹೀಗಾಗಿ ನಗರದಲ್ಲಿ ಪೊಲೀಸ್ ಪಡೆ ಅಲರ್ಟ್ ಆಗಿದೆ. ನಗರದ ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೈ ಅಲರ್ಟ್ ಆಗಿದೆ. ರಾಜ್ಯ ಸೇರಿದಂತೆ ಹೊರದೇಶಗಳಿಂದ ಪ್ರತಿದಿನ ಸಾವಿರಾರು ಸಂಖ್ಯೆಯ ಪ್ರವಾಸಿಗರು ಭೇಟಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು, ಮಾರ್ಚ್ 3: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Bomb Blast Case) ತನಿಖೆ ತೀವ್ರಗೊಂಡಿದೆ. ಬಾಂಬ್ ಇಟ್ಟು ಹೋದ ಆರೋಪಿ, ಕಳೆದೆರಡು ದಿನದಿಂದ ತಲೆಮರೆಸಿಕೊಂಡಿದ್ದಾನೆ. ಸಿಸಿಬಿ ಹುಡುಕಾಟ ನಡೆಸುತ್ತಿದೆ. ಇದರ ಮಧ್ಯೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದಿಂದ ಸಿಲಿಕಾನ್ ಸಿಟಿ ಜನರು ಭಯಗೊಂಡಿದ್ದಾರೆ. ಹೀಗಾಗಿ ನಗರದಲ್ಲಿ ಪೊಲೀಸ್ ಪಡೆ ಅಲರ್ಟ್ ಆಗಿದೆ. ನಗರದ ಹೊರವಲಯದ ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನದಲ್ಲಿ ಹೈ ಅಲರ್ಟ್ ಆಗಿದೆ. ರಾಜ್ಯ ಸೇರಿದಂತೆ ಹೊರದೇಶಗಳಿಂದ ಪ್ರತಿದಿನ ಸಾವಿರಾರು ಸಂಖ್ಯೆಯ ಪ್ರವಾಸಿಗರು ಭೇಟಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.ಮೃಗಾಲಯ ಹಾಗೂ ಸಫಾರಿ ವೀಕ್ಷಣೆಗೆ ಬರುವ ಪ್ರವಾಸಿಗರ ಬ್ಯಾಗ್ಗಳನ್ನು ಮುಖ್ಯದ್ವಾರದ ಬಳಿಯೇ ತಪಾಸಣೆ ಮಾಡಲಾಗುತ್ತಿದೆ.
ನಿವೃತ್ತ ಯೋಧರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸುತ್ತಲೂ ಹದ್ದಿನ ಕಣ್ಣಿಡಲಾಗಿದೆ. ಪ್ರವಾಸಿಗರ ಭದ್ರತಾ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ. ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಬ್ಯಾಗ್ಗಳ ಮೇಲೆ ನಿಗಾ ಇಡಲಾಗಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಖಾಕಿ ಪಡೆ ಅಲರ್ಟ್, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಿಗಿಭದ್ರತೆ
ನಿನ್ನೆ ಮೆಜೆಸ್ಟಿಕ್‌ನ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿಯೂ ಖಾಕಿ ಪಡೆ ಅಲರ್ಟ್ ಆಗಿದ್ದು, ಪ್ರಯಾಣಿಕರ ಲಗೇಜ್ ಚೆಕ್ ಮಾಡಿ ನಿಲ್ದಾಣಕ್ಕೆ ಬಿಡುತ್ತಿದ್ದರು. ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.
ಶಂಕಿತ ಸಂಚಾರ ಮಾಡಿದ ಬಿಎಂಟಿಸಿ ಬಸ್‌ಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ. ಸಿಸಿಕ್ಯಾಮರಾ, ಬಸ್ ಕಂಡಕ್ಟರ್‌ಗಳನ್ನೂ ವಿಚಾರಣೆ ಮಾಡಲಾಗಿದೆ. ಸ್ಫೋಟ ಆದ ಸಂದರ್ಭದಲ್ಲಿ 26 ಬಸ್‌ಗಳು ಓಡಾಡಿವೆ. ಒಂದು ಬಸ್‌ನಲ್ಲಿ ಕ್ಯಾಪ್, ಮಾಸ್ಕ, ಗ್ಲೌಸ್ ಮತ್ತು ಗ್ಲಾಸ್ ಹಾಕಿ ಸಂಚಾರಮಾಡಿರುವುದು ಗೊತ್ತಾಗಿದೆ. ಇನ್ನೂ BMTCಯಲ್ಲಿನ ಸಿಸಿಟಿವಿ ದೃಶ್ಯ ನಾವು ಕೊಟ್ಟಿದ್ದೇವೆ ಅಂತಾ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಸಭೆ ಬಳಿಕ ಆರೋಪಿ ಬಗ್ಗೆ ಮಹತ್ವದ ಅಂಶ ಬಿಚ್ಚಿಟ್ಟ ಗೃಹ ಸಚಿವ
ಈಗಾಗ್ಲೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಆಗಿ ಎರಡು ದಿನ ಕಳೆದಿವೆ. ಈವರೆಗೂ ಶಂಕಿತ ಉಗ್ರನ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಆರೋಪಿ ಪತ್ತೆಯಾಗದಿದ್ದರೆ ಶಂಕಿತ ಉಗ್ರನ ರೇಖಾ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನೂ ಹೊಸಪೇಟೆಯಲ್ಲಿ ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಂಕಿತ ಉಗ್ರನ ಬಗ್ಗೆ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಶಂಕಿತ ಉಗ್ರನ ಬಂಧನವಾಗುತ್ತೆ ಅಂತಾ ಹೇಳಿದ್ದಾರೆ.
ಸ್ಫೋಟ ಆಗಿ ಪೊಲೀಸರು ಅಲರ್ಟ್ ಆಗುವ ಮುನ್ನವೇ ಶಂಕಿತ ಪರಾರಿಯಾಗಿದ್ದಾನೆ. ನಾಕಾಬಂಧಿ ಹಾಕುವ ಮೊದಲೇ ನೆರೆ ರಾಜ್ಯಕ್ಕೆ ಪರಾರಿಯಾಗಿರೋ ಶಂಕೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.