ಬೆಂಗಳೂರಿನ ಹೃದಯ ಭಾಗಬಿಟ್ಟು ಗಡಿ ಭಾಗದಲ್ಲೇ ಬಾಂಬ್ ಇಟ್ಟಿದ್ಯಾಕೆ? ಕೆಫೆ ಸ್ಫೋಟದ ಸಂಚಿನ ರಹಸ್ಯ ಬಯಲು!

ಬೆಂಗಳೂರು ನಗರದ ರಾಮೇಶ್ವರಂ ಕೆಫೆಯಲ್ಲಿ ಶಂಕಿತ ವ್ಯಕ್ತಿಯೊಬ್ಬ ಬಾಂಬ್ ಸ್ಫೋಟ ಮಾಡಿದ್ದನು. ಆರೋಪಿಯು ಪಕ್ಕಾ ಪ್ಲಾನ್ ಮಾಡಿಕೊಂಡೇ ಈ ಸ್ಫೋಟ ಮಾಡಿದ್ದಾನೆ. ಹಾಗಾದರೆ ಶಂಕಿತ ವ್ಯಕ್ತಿ ನಗರ ಬಿಟ್ಟು, ಬೆಂಗಳೂರಿನ ಹೃದಯ ಭಾಗಬಿಟ್ಟು, ಗಡಿ ಭಾಗದಲ್ಲೇ ಪ್ಲಾನ್ ಮಾಡಿದ್ದು ಯಾಕೆ? ಬಾಂಬ್ ಇಟ್ಟು ಒಂದೂವರೆ ಗಂಟೆ ಬಳಿಕ ಬಾಂಬ್ ಸ್ಪೋಟ ಆಗುವಂತೆ ಟೈಮ್ ಫಿಕ್ಸ್ ಮಾಡಿದ್ದು ಯಾಕೆ? ಇಲ್ಲಿದೆ ಮಾಹಿತಿ.

ಬೆಂಗಳೂರಿನ ಹೃದಯ ಭಾಗಬಿಟ್ಟು ಗಡಿ ಭಾಗದಲ್ಲೇ ಬಾಂಬ್ ಇಟ್ಟಿದ್ಯಾಕೆ? ಕೆಫೆ ಸ್ಫೋಟದ ಸಂಚಿನ ರಹಸ್ಯ ಬಯಲು!
ಬೆಂಗಳೂರಿನ ಹೃದಯ ಭಾಗಬಿಟ್ಟು ಗಡಿ ಭಾಗದಲ್ಲೇ ಬಾಂಬ್ ಇಟ್ಟಿದ್ಯಾಕೆ? ಕೆಫೆ ಸ್ಫೋಟದ ಸಂಚಿನ ರಹಸ್ಯ ಬಯಲು!
Follow us
| Updated By: Rakesh Nayak Manchi

Updated on: Mar 03, 2024 | 2:35 PM

ಬೆಂಗಳೂರು, ಮಾ.3: ನಗರದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಶಂಕಿತ ವ್ಯಕ್ತಿಯೊಬ್ಬ ಬಾಂಬ್ ಸ್ಫೋಟ (Bomb Blast) ಮಾಡಿದ್ದನು. ಆರೋಪಿಯು ಪಕ್ಕಾ ಪ್ಲಾನ್ ಮಾಡಿಕೊಂಡೇ ಈ ಸ್ಫೋಟ ಮಾಡಿದ್ದಾನೆ. ಹಾಗಾದರೆ ಶಂಕಿತ ವ್ಯಕ್ತಿ ನಗರ ಬಿಟ್ಟು, ಬೆಂಗಳೂರಿನ (Bengaluru) ಹೃದಯ ಭಾಗಬಿಟ್ಟು, ಗಡಿ ಭಾಗದಲ್ಲೇ ಪ್ಲಾನ್ ಮಾಡಿದ್ದು ಯಾಕೆ? ಬಾಂಬ್ ಇಟ್ಟು ಒಂದೂವರೆ ಗಂಟೆ ಬಳಿಕ ಬಾಂಬ್ ಸ್ಪೋಟ ಆಗುವಂತೆ ಟೈಮ್ ಫಿಕ್ಸ್ ಮಾಡಿದ್ದು ಯಾಕೆ? ಒಂದೂವರೆ ಗಂಟೆಯಲ್ಲಿ ಆತನ ಫ್ಲಾನ್ ಏನಾಗಿತ್ತು ಗೊತ್ತಾ? ಇಲ್ಲಿದೆ ಮಾಹಿತಿ.

ರಾಮೇಶ್ವರಂ ಕೆಫೆಯಿಂದ ಹೊಸೂರು ಬಾರ್ಡರ್​ಗೆ ಹೋಗಲು 59 ನಿಮಿಷಗಳು ಬೇಕು. ಒಂದು ವೇಳೆ ಟ್ರಾಫಿಕ್ ಇದ್ದರೂ 1 ಗಂಟೆ 15 ನಿಮಿಷದಲ್ಲಿ ರೀಚ್ ಆಗಬಹುದು. ಹೀಗಾಗಿ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಬಿಟ್ಟು ಹೊರಹೋಗಲು ಶಂಕಿತ ಬಾಂಬರ್ ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅದರಂತೆ ಒಂದೂವರೆ ಗಂಟೆ ಟೈಂ ಇಟ್ಟುಕೊಂಡು ಟೈಮರ್ ಫಿಕ್ಸ್ ಮಾಡಿರುವ ಸಾಧ್ಯತೆ ಇದೆ.

ಬ್ಲಾಸ್ಟ್ ಆದ ಬಳಿಕ ಪೊಲೀಸರ ಸ್ಥಳಕ್ಕೆ ಬರಲು ಕನಿಷ್ಟ 10 ನಿಮಿಷಗಳು ಬೇಕು. ಬಳಿಕ ಎಲ್ಲಾ ಕಡೆ ಅಲರ್ಟ್ ಮಾಡಲು ಅರ್ಧ ಗಂಟೆ ತೆಗೆದುಕೊಳ್ಳುತ್ತಾರೆ. ಪೊಲೀಸರು ನಗರದಾದ್ಯಂತ ಅಲರ್ಟ್ ಆಗುವಷ್ಟರಲ್ಲಿ ಗಡಿ ದಾಟುವ ಪ್ಲಾನ್ ಮಾಡಿರಬಹುದು. ಒಂದು ವೇಳೆ ಸಿಟಿ ಒಳಗೆ ಬ್ಲಾಸ್ಟ್ ಆಗಿದ್ದರೆ ಅಲ್ಲಿಂದ ಪರಾರಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಕಡೆ ಅಲರ್ಟ್ ಆಗಿ ಬಾರ್ಡರ್​ನಲ್ಲೂ ನಾಕಾಬಂದಿ ಹಾಕುವ ಸಾಧ್ಯತೆ ಇರುತ್ತದೆ. ಹೀಗಾಗಿ ಗಡಿ ದಾಟಿದ ಬಳಿಕ ನಾಕಾಬಂದಿ ಹಾಕಿದರೂ ನಾನು ಸಿಗಲ್ಲ ಅನ್ನೋ ಪ್ಲಾನ್ ಆಗಿರಬಹುದು.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ 2 ಬಾಂಬ್ ಒಂದೇ ಸಲ ಸ್ಫೋಟಿಸಲು ಆರೋಪಿ ಪ್ಲ್ಯಾನ್: FSL​ ​ವರದಿ ಬಹಿರಂಗ

ಶಂಕಿತ ಬಾಂಬರ್ ಪ್ರತಿ ಹೆಜ್ಜೆ ಹೆಜ್ಜೆಗೂ ಮಾಸ್ಟರ್ ಪ್ಲಾನ್ ಮಾಡಿರುವಂತಿದೆ. ಸದ್ಯ ರಾಮೇಶ್ವರಂ ಕೆಫೆಯಿಂದ ತಮಿಳುನಾಡು ಬಾರ್ಡರ್​ವರೆಗಿನ ಎಲ್ಲಾ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಶಂಕಿತ ಬಾಂಬರ್ ಕೆಫೆಯಿಂದ ವೈಟ್ ಫೀಲ್ಡ್​ಗೆ ಹೋಗಿರುವ ಬಗ್ಗೆ ಮಾಹಿತಿ ಇದೆ. ಬಳಿಕ ಅಲ್ಲಿಂದ ಚೆನ್ನಸಂದ್ರ ಮೂಲಕ ಸರ್ಜಾಪುರ, ಅತ್ತಿಬೆಲೆ ಮೂಲಕ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಎಲ್ಲಾ ಮಾರ್ಗಗಳಲ್ಲಿನ ಸಿಸಿಟಿವಿ ಕ್ಯಾಮರಾಗಳ ಪತ್ತೆಗೆ ಮುಂದಾದ ಪೊಲೀಸರು, ತಮಿಳುನಾಡು, ಕೇರಳಾ ಪೊಲೀಸರ ಜೊತೆಯೂ ಸಂಪರ್ಕದಲ್ಲಿದ್ದಾರೆ.

ಕೆಫೆಗೆ ತಮಿಳುನಾಡು ಬಾಂಬ್ ನಿಷ್ಕ್ರಿಯ ದಳ ಭೇಟಿ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಥಳಕ್ಕೆ ತಮಿಳುನಾಡು ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿದೆ. ಹಿಂದಿನ ಹಲವು ಬಾಂಬ್​ ಸ್ಫೋಟ, ಈಗಿನ ಸ್ಫೋಟದ ಸಾಮ್ಯತೆ ಹಿನ್ನೆಲೆ ಸ್ಫೋಟದ ತೀವ್ರತೆ ಕುರಿತು ಪರಿಶೀಲನೆ ನಡೆಸಿದೆ. ತಮಿಳುನಾಡಿನ ಕೊಯಮತ್ತೂರು ಕಾರ್​​ ಬಾಂಬ್ ಸ್ಫೋಟ ಪ್ರಕರಣವನ್ನು ಇದೇ ತಮಿಳುನಾಡು ಬಾಂಬ್ ನಿಷ್ಕ್ರಿಯ ದಳ ಬೇಧಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು