AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಇಂಪ್ಯಾಕ್ಟ್: ವಡ್ಡರಪಾಳ್ಯ ನಿವಾಸಿಗಳಿಗೆ ಸಿಕ್ತು ಕುಡಿಯಲು ನೀರು

ಬೆಂಗಳೂರಿನ ಹಲವೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಹಿನ್ನಲೆ ಕೆಲವರು ಮನೆಗಳನ್ನು ತೊರೆಯುತ್ತಿದ್ದಾರೆ. ಈ ಮಧ್ಯೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಪಿ ನಗರದ 8 ನೇ ಹಂತದ ವಡ್ಡರಪಾಳ್ಯದಲ್ಲಿ ನಿವಾಸಿಗಳಿಗೆ ಕುಡಿಯಲು ಕೂಡ ನೀರು ಇರಲಿಲ್ಲ. ಈ ಕುರಿತು ಟಿವಿ9 ವರದಿ ಬಿತ್ತರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಜನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಟಿವಿ9 ಇಂಪ್ಯಾಕ್ಟ್: ವಡ್ಡರಪಾಳ್ಯ ನಿವಾಸಿಗಳಿಗೆ ಸಿಕ್ತು ಕುಡಿಯಲು ನೀರು
ವಡ್ಡರಪಾಳ್ಯದಲ್ಲಿ ನೀರಿನ ಸಮಸ್ಯೆ
ಕಿರಣ್​ ಸೂರ್ಯ
| Edited By: |

Updated on: Mar 03, 2024 | 2:47 PM

Share

ಬೆಂಗಳೂರು, ಮಾ.03: ನಗರದ ಹಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ (Water problem) ಶುರುವಾಗಿದೆ. ಅದರಂತೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಪಿ ನಗರದ 8 ನೇ ಹಂತದ ವಡ್ಡರಪಾಳ್ಯದಲ್ಲಿ (Vaddarapalya) ನಿವಾಸಿಗಳಿಗೆ ಕುಡಿಯಲು ಕೂಡ ನೀರು ಇರಲಿಲ್ಲ. ಈ ಕುರಿತು ಅಂದು ಕುಡಿಯಲು ನೀರಿಲ್ಲ ಎಂದು ವರದಿ ಬಿತ್ತರಿಸಿದ ಟಿವಿ9, ಶಾಸಕರ ಗಮನಕ್ಕೆ ತಂದಿತ್ತು. ಇದೀಗ ಏರಿಯಾದ ಜನರಿಗೆ ಕುಡಿಯಲು ನೀರು ಸಿಕ್ಕಿದೆ. ಖುದ್ದಾಗಿ ಶಾಸಕ ಎಂ. ಕೃಷ್ಣಪ್ಪ(M Krishnappa)ನವರು ತಾವೇ ಸ್ಥಳಕ್ಕೆ ಬಂದು ಟ್ಯಾಂಕರ್ ಮೂಲಕ ನಿವಾಸಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಟಿವಿ9ಗೆ ಕೈ ಮುಗಿದು ಧನ್ಯವಾದ ತಿಳಿಸಿದ ನಿವಾಸಿಗಳು

ಕಳೆದ ನಾಲ್ಕೈದು ತಿಂಗಳಿನಿಂದ ನಮಗೆ ಕುಡಿಯಲು ನೀರಿರಲಿಲ್ಲ, ನೀವು ಬಂದ ಮೇಲೆ ನಮಗೆ ಕುಡಿಯಲು ನೀರು ಬಂತು ಎಂದು ಇಲ್ಲಿನ ನಿವಾಸಿಗಳು ಟಿವಿ9ಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ. ವಡ್ಡರಪಾಳ್ಯ ಏರಿಯಾದಲ್ಲಿ ಎರಡು ಬೋರ್​ವೆಲ್​ಗಳಿತ್ತು. ಆದರೆ ಅದು ರಿಪೇರಿಗೆ ಬಂದಿತ್ತು. ಈ ಹಿನ್ನಲೆ ಅದನ್ನು ಸರಿಪಡಿಸಬೇಕಿತ್ತು. ಆದರೆ, ಸರಪಡಿಸಿರಲಿಲ್ಲ. ಇನ್ನು ಏರಿಯಾದ ಮುಂಭಾಗದಲ್ಲಿ ಹೊಸದಾಗಿ ಒಂದು ಆರ್​ಓ ಪ್ಲಾಂಟ್ ಕೂಡ ಓಪನ್ ಮಾಡಲಾಗಿತ್ತು. ಅದರಲ್ಲೂ ನೀರು ಬರುತ್ತಿರಲಿಲ್ಲ. ಈ ಸಮಸ್ಯೆಯನ್ನು ಟಿವಿ9 ಸುದ್ದಿ ಮಾಡಿ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರ ಗಮನಕ್ಕೆ ತರಲಾಗಿತ್ತು.

ಇದನ್ನೂ ಓದಿ:ನೀರಿಗಾಗಿ ಹಾಹಾಕಾರ; ಕಂಗಾಲಾದ ಬಸವನಗುಡಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜನ

ಆ ಏರಿಯಾಗೆ ಒಂದು ಹೊಸ ಬೋರ್​ವೇಲ್ ಹಾಕಿಸಿಕೊಡ್ತಿನಿ ಎಂದು ಭರವಸೆ ನೀಡಿದ ಶಾಸಕ

ಈ ಕುರಿತು ಮಾತನಾಡಿದ ಶಾಸಕ ಎಂ ಕೃಷ್ಣಪ್ಪ, ‘ ಅಲ್ಲಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡ್ತಿನಿ. ಮತ್ತು ಆ ಏರಿಯಾಗೆ ಒಂದು ಹೊಸ ಬೋರ್​ವೇಲ್ ಹಾಕಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಈಗ ಆ ಏರಿಯಾಗೆ ಎರಡು ಸಾವಿರ ಲೀಟರ್​ನ ಒಂದು ಬೃಹತ್ ಟ್ಯಾಂಕರ್ ಮೂಲಕ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಬಿಡಬ್ಲೂಎಸ್ಎಸ್ಬಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆಯಂತೆ.

ಹೊಸ ಬೋರ್​ವೇಲ್ ಹಾಕಲು ಪಾಯಿಂಟ್ ಪರಿಶೀಲನೆ ಮಾಡಲಿರುವ ಅಧಿಕಾರಿಗಳು

ಇನ್ನು ಈ ವಾರ ಹೊಸ ಬೋರ್​ವೇಲ್ ಹಾಕಲು ಅಧಿಕಾರಿಗಳು ಪಾಯಿಂಟ್ ಪರಿಶೀಲನೆ ಮಾಡಲಿದ್ದಾರೆ. ಹದಿನೈದು ದಿನಗಳು ಕಾವೇರಿ ನೀರನ್ನು ಏರಿಯಾಗೆ ಬಿಟ್ಟು ಟ್ರಯಲ್ ಮಾಡುತ್ತೇವೆ. ನಂತರ ಎಲ್ಲಾ ಮನೆಗಳಿಗೆ ಮೀಟರ್ ವ್ಯವಸ್ಥೆ ಮಾಡಿ ಶಾಶ್ವತವಾಗಿ ಕುಡಿಯಲು ಕಾವೇರಿ ನೀರು ಬಿಡುತ್ತೇವೆ. ಟಿವಿ9 ಈ ಏರಿಯಾದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿತ್ತು. ಈ ಹಿನ್ನಲೆ ಎರಡು ಬೋರ್ ವೆಲ್ ಮತ್ತು ಕೆಟ್ಟು ಹೋಗಿರುವ ಒಂದು ಆರ್ ಓ ಫ್ಲಾಂಟ್ ಸರಿಪಡಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Kiran Surya
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?