ಬೆಂಗಳೂರು, ನವೆಂಬರ್ 17: ಬಿಎಂಟಿಸಿ (BMTC) ಹಾಗೂ ರಾಜ್ಯ ಸಾರಿಗೆ ಸಂಸ್ಥೆಯ (KSRTC) ಇತರ ವಿಭಾಗಗಳ ಬಸ್ಗಳು ನಡುರಸ್ತೆಯಲ್ಲಿಯೇ ಕೆಟ್ಟುನಿಂತು ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿರುವ ಮತ್ತು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ‘ಟಿವಿ9’ ಕೆಲವು ದಿನಗಳ ಹಿಂದಷ್ಟೇ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಇದೀಗ, 5500 ಹೊಸ ಬಸ್ ಖರೀದಿಗೆ ಮುಂದಾಗಿದೆ. ಇದರೊಂದಿಗೆ ಸಾರಿಗೆ ನಿಗಮಕ್ಕೆ ಹೊಸ ಬಸ್ಗಳು ಬರುವುದು ಖಾತರಿಯಾಗಿದೆ.
ನಾಲ್ಕೂ ನಿಗಮಗಳಿಗೆ 12 ಸಾವಿರಕ್ಕೂ ಹೆಚ್ಚು ಬಸ್ಗಳ ಅವಶ್ಯಕತೆ ಇದ್ದು 2024 ಆರಂಭದಲ್ಲಿ 5500 ಬಸ್ಗಳು ಬರಲಿವೆ. ಮುಂದಿನ ದಿನಗಳಲ್ಲಿ ಮಿಕ್ಕ 7000 ಬಸ್ ಖರೀದಿಗೆ ಸರ್ಕಾರ ಮುಂದಾಗಲಿದೆ. ಬಿಎಂಟಿಸಿಗೆ 1500 ಸಾವಿರ ಕೆಎಸ್ಆರ್ಟಿಸಿಗೆ 2 ಸಾವಿರ ವಾಯುವ್ಯ, ಕಲ್ಯಾಣ ಕರ್ನಾಟಕ ಸಾರಿಗೆಗೆ ತಲಾ ಒಂದು ಸಾವಿರ ಬಸ್ ಖರೀದಿ ಮಾಡಲಾಗುತ್ತಿದೆ.
ಬಿಎಂಟಿಸಿ ಬಸ್ಗಳೇ ಬೆಂಗಳೂರಿನ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿರುವ ವಿಚಾರ ಬೆಂಗಳೂರು ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಅಂಕಿ ಅಂಶದಿಂದ ತಿಳಿದುಬಂದಿದೆ. ಬಿಎಂಟಿಸಿ ಮಾತ್ರವಲ್ಲದೆ, ಸಾರಿಗೆ ಸಂಸ್ಥೆಯ ಇತರ ವಿಭಾಗಗಳ ಬಸ್ಗಳೂ ಇದೇ ರೀತಿ ಕೆಟ್ಟುನಿಂತಿದ್ದ ಬಗ್ಗೆಯೂ ‘ಟಿವಿ9’ ವರದಿ ಉಲ್ಲೇಖಿಸಿತ್ತು.
ಇದನ್ನೂ ಓದಿ: ಬಿಎಂಟಿಸಿಯಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್, ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಿಚ್ಚಿಟ್ಟ ರಹಸ್ಯವೇನು?
ಜನವರಿಯಲ್ಲಿ 152, ಫೆಬ್ರವರಿಯಲ್ಲಿ 158, ಮಾರ್ಚ್ನಲ್ಲಿ 160 ಬಸ್ಗಳು ಕೆಟ್ಟುಹೋಗಿವೆ. ಏಪ್ರಿಲ್ನಲ್ಲಿ 110, ಮೇನಲ್ಲಿ 112, ಜೂನ್ನಲ್ಲಿ 130, ಜುಲೈ 160, ಆಗಸ್ಟ್ 167, ಸೆಫ್ಟೆಂಬರ್159 ಹಾಗೂ ಅಕ್ಟೋಬರ್ 170 ಬಸ್ಗಳು ನಡುರಸ್ತೆಯಲ್ಲಿ ಕೆಟ್ಟುಹೋಗಿವೆ ಎಂಬುದನ್ನು ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಯಲು ಮಾಡಿತ್ತು. ಈ ಕುರಿತು ‘ಟಿವಿ9’ ವಿಸ್ತೃತ ವರದಿ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ