ವಿವೇಕನಗರ: ಪಾರ್ಟಿ ನೆಪದಲ್ಲಿ ಕಾಶ್ಮೀರದ ಇಬ್ಬರು ಯುವತಿಯರ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ ಯತ್ನ, ಇಬ್ಬರು ಅರೆಸ್ಟ್

| Updated By: ಆಯೇಷಾ ಬಾನು

Updated on: Feb 07, 2023 | 2:32 PM

ಫೆ.5ರಂದು ಪಾರ್ಟಿ ನೆಪದಲ್ಲಿ ಜಮ್ಮು-ಕಾಶ್ಮೀರ ಮೂಲದ ಪರಿಚಯಸ್ಥ ಇಬ್ಬರು ಯುವತಿಯರನ್ನು ಇಬ್ಬರು ಯುವಕರು ಮನೆಗೆ ಕರೆಸಿಕೊಂಡು ರಾತ್ರಿ 2.30ರವರೆಗೂ ಪಾರ್ಟಿ ಮಾಡಿ ಬಳಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ವಿವೇಕನಗರ: ಪಾರ್ಟಿ ನೆಪದಲ್ಲಿ ಕಾಶ್ಮೀರದ ಇಬ್ಬರು ಯುವತಿಯರ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ ಯತ್ನ, ಇಬ್ಬರು ಅರೆಸ್ಟ್
ಬಂಧನ
Follow us on

ಬೆಂಗಳೂರು: ಪಾರ್ಟಿ ನೆಪದಲ್ಲಿ ಕಾಶ್ಮೀರಿ ಯುವತಿಯರನ್ನು ಕರೆಸಿ ಅತ್ಯಾಚಾರಕ್ಕೆ ಯತ್ನಿಸಿದ ಹಿನ್ನೆಲೆ ಬೆಂಗಳೂರಿನ ವಿವೇಕನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಜಮ್ಮು-ಕಾಶ್ಮೀರ ಮೂಲದ ಯುವತಿಯರನ್ನು ಕರೆಸಿ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಯುವತಿಯರು ಹರ ಸಾಹಸದಿಂದ ಆರೋಪಿಗಳಿಂದ ತಪ್ಪಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಈ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಫೆ.5ರಂದು ಪಾರ್ಟಿ ನೆಪದಲ್ಲಿ ಜಮ್ಮು-ಕಾಶ್ಮೀರ ಮೂಲದ ಪರಿಚಯಸ್ಥ ಇಬ್ಬರು ಯುವತಿಯರನ್ನು ಇಬ್ಬರು ಯುವಕರು ಮನೆಗೆ ಕರೆಸಿಕೊಂಡಿದ್ದಾರೆ. ಅಂದು ರಾತ್ರಿ 2.30ರವರೆಗೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ನಶೆಯಲ್ಲಿದ್ದ ಓರ್ವ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಹಾಗೂ ಇದೇ ವೇಳೆ ಮತ್ತೋರ್ವ ಯುವಕ ಮತ್ತೊರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಯುವತಿ ತಪ್ಪಿಸಿಕೊಂಡು ಹೋಗಿ ಬಾತ್​ ರೂಮ್​​ನಲ್ಲಿ ಲಾಕ್ ಮಾಡಿಕೊಂಡು ಅಡಗಿಕೊಂಡಿದ್ದಾಳೆ. ಬಳಿಕ ಮರುದಿನ ಕೋರಮಂಗಲ ಠಾಣೆಗೆ ತೆರಳಿ ಯುವತಿ ಮಾಹಿತಿ ನೀಡಿ ದೂರು ದಾಖಲಿಸಿದ್ದಾಳೆ.

ಒಂದೇ ಕಾಲೇಜಿನಲ್ಲಿ ಜೊತೆಯಾಗಿ ವಿದ್ಯಾಭ್ಯಾಸ ಮುಗಿಸಿದ್ದ ಇವರೆಲ್ಲರೂ ಪರಿಚಯಸ್ಥರು. ಓದು ಮುಗಿಸಿ ಯುವತಿಯರು ಬೇರೆ ಬೇರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತಿದ್ದರು. ಫೆ.5ರಂದು ಎಲ್ಲರೂ ಒಟ್ಟಾಗಿ ಪಾರ್ಟಿ ಮಾಡಲು ಕುಳಿತಿದ್ದು ಘಟನೆ ನಡೆದಿದೆ. ಆರೋಪಿಗಳು ಹೊರರಾಜ್ಯದಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಎಂಡಿ ಸತ್ಯವತಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೇಳಿದ್ದ BMTC ಚಾಲಕ ಅಮಾನತು

ಅಕ್ರಮವಾಗಿ ಬೆಂಗಳೂರಿಗೆ 10 ಪಿಸ್ತೂಲ್ ತಂದಿದ್ದ ಆರೋಪಿ ಸೆರೆ

ಎಲೆಕ್ಷನ್ ಹೊತ್ತಲ್ಲೆ ಬೆಂಗಳೂರಿಗೆ ಪಿಸ್ತೂಲ್​ಗಳು ಎಂಟ್ರಿ ಕೊಟ್ಟಿವೆ. ಬಾಂಬೆ ಅಂಡರ್ ವರ್ಲ್ಡ್ ನಿಂದ ಬೆಂಗಳೂರು ಭೂಗತ ಜಗತ್ತಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಪಿಸ್ತೂಲ್​ಗಳನ್ನು  ಬೆಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈನ ರೋಷನ್ ಎಂಬಾತನಿಂದ ಪಿಸ್ತೂಲ್​ಗಳ ರವಾನೆ ಮಾಡಲಾಗುತ್ತಿತ್ತು. ಬಸ್ ಮೂಲಕ ಬೆಂಗಳೂರಿಗೆ ಪಿಸ್ತೂಲ್ ತಂದಿದ್ದ ಆರೋಪಿ ಸೆರೆ ಹಿಡಿಯಲಾಗಿದೆ. ಮೊದಲಿಗೆ 4 ಪಿಸ್ತೂಲ್​ಗಳನ್ನು ಅಂಡರ್​ವರ್ಲ್ಡ್​​​ಗೆ ನೀಡಲು ತಂದಿದ್ದ. ಆರೋಪಿಯನ್ನು ಬಂಧಿಸಿ ಮತ್ತೆ 6 ಪಿಸ್ತೂಲ್​ಗಳನ್ನು ಸಹ ಜಪ್ತಿ ಮಾಡಲಾಗಿದೆ. ಹಾಗೂ ಆರೋಪಿ ಬಳಿಯಿದ್ದ 20 ಜೀವಂತಗುಂಡು ವಶಕ್ಕೆ ಪಡೆಯಲಾಗಿದೆ. ಒಂದು ಪಿಸ್ತೂಲ್ ಗೆ 35 ಸಾವಿರ ಬೆಲೆ ಇದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:32 pm, Tue, 7 February 23