ಚಿಕ್ಕಬಳ್ಳಾಪುರದಲ್ಲಿ ಪರಿಸರ ರಕ್ಷಣೆಗಾಗಿ ಕರ್ನಾಟಕ ಸರ್ಕಾರದಿಂದ 100 ಕೋಟಿ ಅನುದಾನ ನೀಡಲಾಗಿದೆ ಎಂಬುದು ಆಧಾರರಹಿತ – ಈಶ ಫೌಂಡೇಶನ್ ಸ್ಪಷ್ಟನೆ
Chikkaballapura Isha foundation: ಈಶ ಫೌಂಡೇಶನ್ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿಯೂ ಪ್ರಸ್ತುತ ಸರ್ಕಾರದಿಂದ ಅಥವಾ ಕರ್ನಾಟಕದ ಹಿಂದಿನ ಸರ್ಕಾರಗಳಿಂದ ಯಾವುದೇ ಭೂಮಿಯನ್ನು ಪಡೆದಿಲ್ಲ. ಚಿಕ್ಕಬಳ್ಳಾಪುರದ ಎಲ್ಲಾ ಜಮೀನುಗಳನ್ನು ಸೂಕ್ತ ಮಾರಾಟ ಪತ್ರಗಳ ಮೂಲಕ ಅದರ ಮಾಲೀಕರಿಂದ ಖರೀದಿಸಲಾಗಿದೆ -ಈಶ ಫೌಂಡೇಶನ್
ಮಣ್ಣು ಸಂರಕ್ಷಣೆಗೆ (Soil Conservation) ಒತ್ತು ಕೊಡಲು ಕರ್ನಾಟಕ ರಾಜ್ಯದ ನೂರು ಕೋಟಿ ಪರಿಸರ ಬಜೆಟ್ ಘೋಷಣೆಯ ಬಗ್ಗೆ ಹರಡಿರುವ ಸುಳ್ಳು ಮಾಹಿತಿಯನ್ನು ಈಶ ಫೌಂಡೇಶನ್ ಬಲವಾಗಿ ಖಂಡಿಸಿದೆ. ಈ ಸಂಬಂಧ ಈಶ ಫೌಂಡೇಶನ್ (Isha Foundation)ನ ಚಿಕ್ಕಬಳ್ಳಾಪುರದ (Chikkaballapura) ಭೂಮಿ ಹಾಗು ನಂದಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದ ಬಗ್ಗೆ ಹರಡಿರುವ ತಪ್ಪು ಮಾಹಿತಿಯ ಕುರಿತು ಸ್ಪಷ್ಟೀಕರಣ ನೀಡಿದೆ.
ಬೆಂಗಳೂರು: ಮಣ್ಣು ಸಂರಕ್ಷಣೆಗೆ ಒತ್ತು ಕೊಡಲು ಕರ್ನಾಟಕ ರಾಜ್ಯದ ನೂರು ಕೋಟಿ ಪರಿಸರ ಬಜೆಟ್ ಘೋಷಣೆಯ ಬಗ್ಗೆ ಹರಡಿರುವ ಸುಳ್ಳು ಮಾಹಿತಿಯನ್ನು ಈಶ ಫೌಂಡೇಶನ್ ಬಲವಾಗಿ ಖಂಡಿಸಿದೆ. ಈ ಸಂಬಂಧ ಈಶ ಫೌಂಡೇಶನ್ ನ ಚಿಕ್ಕಬಳ್ಳಾಪುರದ ಭೂಮಿ ಹಾಗು ನಂದಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದ ಬಗ್ಗೆ ಹರಡಿರುವ ತಪ್ಪು ಮಾಹಿತಿಯ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದೆ.
ಈಶ ಫೌಂಡೇಶನ್ ಮಾಧ್ಯಮ ಪ್ರಕಟಣೆ ಮಾಧ್ಯಮ ಪ್ರಕಟಣೆ ಪೂರ್ಣ ಪಾಠ ಇಲ್ಲಿದೆ: ಕರ್ನಾಟಕ ರಾಜ್ಯ ಪರಿಸರ ಬಜೆಟ್ ಮತ್ತು ಚಿಕ್ಕಬಳ್ಳಾಪುರದಲ್ಲಿ ಈಶ ಫೌಂಡೇಶನ್ ನ ಜಮೀನಿಗೆ ಸಂಬಂಧಿಸಿದ ವಿಷಯಗಳಲ್ಲಿ ಹರಡುತ್ತಿರುವ ಕೆಲವು ಸುಳ್ಳು ಮಾಹಿತಿಗಳಿಂದ ನಮಗೆ ತೀವ್ರ ನೋವಾಗಿದೆ. ಎಲ್ಲಾ ಮಾಧ್ಯಮಗಳಿಗೆ, ರಾಜಕಾರಣಿಗಳಿಗೆ ಮತ್ತು ಸಾರ್ವಜನಿಕರಿಗೆ ನಾವು ಈ ಕೆಳಗಿನ ಆರೋಪಗಳು ಮತ್ತು ತಪ್ಪು ಮಾಹಿತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ವಾಸ್ತವಿಕವಾಗಿ ಅಸತ್ಯವಾಗಿವೆ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ.
ಈಶ ಫೌಂಡೇಶನ್ ಅಥವಾ ಸದ್ಗುರು ಅವರು, ಈಗಿನ ಸರ್ಕಾರದಿಂದ ಅಥವಾ ಕರ್ನಾಟಕದ ಹಿಂದಿನ ಯಾವುದೇ ಸರ್ಕಾರಗಳಿಂದ ಯಾವುದೇ ಹಣವನ್ನು ಪಡೆದಿಲ್ಲ. ಈಶ ಫೌಂಡೇಶನ್ ಕರ್ನಾಟಕ ಸರ್ಕಾರದ ಜೊತೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಣಕಾಸಿನ ವಹಿವಾಟುಗಳಲ್ಲಿ ಭಾಗಿಯಾಗಿಲ್ಲ. ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಅರಣ್ಯ ಇಲಾಖೆಗೆ ಮಣ್ಣಿನ ಸಂರಕ್ಷಣೆಗೆ ಒತ್ತು ನೀಡಿ ರಾಜ್ಯ ಪರಿಸರ ಚಟುವಟಿಕೆಗಳಿಗೆ 100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಘೋಷಿಸಿದರು.
ಈಶ ಫೌಂಡೇಶನ್ ಚಿಕ್ಕಬಳ್ಳಾಪುರದಲ್ಲಿ ಅಥವಾ ಕರ್ನಾಟಕ ರಾಜ್ಯದ ಬೇರೆಲ್ಲಿಯೂ ಪ್ರಸ್ತುತ ಸರ್ಕಾರದಿಂದ ಅಥವಾ ಕರ್ನಾಟಕದ ಹಿಂದಿನ ಸರ್ಕಾರಗಳಿಂದ ಯಾವುದೇ ಭೂಮಿಯನ್ನು ಪಡೆದಿಲ್ಲ. ಚಿಕ್ಕಬಳ್ಳಾಪುರದ ಎಲ್ಲಾ ಜಮೀನುಗಳನ್ನು ಸೂಕ್ತ ಮಾರಾಟ ಪತ್ರಗಳ ಮೂಲಕ ಅದರ ಮಾಲಿಕರಿಂದ ಖರೀದಿಸಲಾಗಿದೆ. ದಾನಿಗಳ ಮತ್ತು ಸ್ವಯಂಸೇವಕರ ಸ್ವಯಂಪ್ರೇರಿತ ಕೊಡುಗೆಗಳ ಮೂಲಕ ಜಮೀನಿನ ಮಾಲೀಕರಿಂದ ಈಶ ಫೌಂಡೇಶನ್ ನೇರವಾಗಿ ಖರೀದಿಸಿದೆ. ಈಶ ಫೌಂಡೇಶನ್ ಕರ್ನಾಟಕ ಸರ್ಕಾರದಿಂದ ಯಾವುದೇ ಭೂಮಿಯನ್ನು ಪಡೆದಿಲ್ಲ.
ಈಶ ಯೋಗ ಕೇಂದ್ರದಲ್ಲಿರುವ ಆದಿಯೋಗಿಯು ನಂದಿ ಬೆಟ್ಟಗಳಿಂದ 31 ಕಿಮೀ ದೂರದಲ್ಲಿದೆ. ನಂದಿ ಬೆಟ್ಟ ಚಿಕ್ಕಬಳ್ಳಾಪುರದ ನಂದಿ ಹೋಬಳಿಯಲ್ಲಿದ್ದರೆ, ಆದಿಯೋಗಿಯು ಚಿಕ್ಕಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯಲ್ಲಿ ಇದೆ. ನಮ್ಮ ಜಮೀನುಗಳು ಅರಣ್ಯದಲ್ಲಿ ಇಲ್ಲ ಏಕೆಂದರೆ ಅವು ಕಂದಾಯ ಭೂಮಿಯನ್ನು ಪರಿಗಣಿಸಿ ಭೂ ಮಾಲೀಕರಿಂದ ಖರೀದಿಸಿ ಯಥಾವತ್ತಾಗಿ ಪರಿವರ್ತಿಸಲಾಗಿದೆ.
ಸ್ವಯಂಸೇವಕರು ಮತ್ತು ಈಶ ಅನುಯಾಯಿಗಳು ಈ ತಪ್ಪು ಮಾಹಿತಿಯು ಪ್ರಸಾರವಾಗುತ್ತಿರುವುದರಿಂದ ಬಹಳ ನೊಂದಿದ್ದಾರೆ; ಮತ್ತು ಯಾರೋ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ಹರಡುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರಿನಲ್ಲಿ ಜನಿಸಿದ ಸದ್ಗುರು ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜ್ಞಾನೋದಯವನ್ನು ಪಡೆದು ಅಂತರರಾಷ್ಟ್ರೀಯ ಆಧ್ಯಾತ್ಮಿಕ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ. ಸದ್ಗುರುಗಳ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಕಾವೇರಿ ಕೂಗು ಯೋಜನೆಯು ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸುವ ಅಭಿಯಾನವಾಗಿದೆ, ಇದು ಜಲಾನಯನ ಪ್ರದೇಶದ ರೈತರು ತಮ್ಮ ಸ್ವಂತ ಜಮೀನುಗಳಲ್ಲಿ 242 ಕೋಟಿ ಮರಗಳನ್ನು ನೆಡಲು ಅನುವು ಮಾಡಿಕೊಡುತ್ತದೆ. ಇದು ನದಿ ಜಲಾನಯನ ಪ್ರದೇಶದಲ್ಲಿ 9 ರಿಂದ 12 ಟ್ರಿಲಿಯನ್ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಮೂಲದಲ್ಲಿ ಕಾವೇರಿಯ ಹರಿವನ್ನು ಹೆಚ್ಚಿಸುತ್ತದೆ.
ಕರ್ನಾಟಕದಲ್ಲಿ ಕಾವೇರಿ ಕೂಗಿನ ನೇರ ಪರಿಣಾಮದ ಕುರಿತು ಇತ್ತೀಚಿನ ಮಾಹಿತಿ : 2020 ರಿಂದ, ಕರ್ನಾಟಕ ಸರ್ಕಾರವು 9 ಕಾವೇರಿ ನದಿ ಜಲಾನಯನ ಜಿಲ್ಲೆಗಳಲ್ಲಿ 41,000 ಕ್ಕೂ ಹೆಚ್ಚು ರೈತರಿಗೆ 22 ಮಿಲಿಯನ್ ಸಸಿಗಳನ್ನು ವಿತರಿಸಿದೆ. ಎಸ್.ಎಂ.ಇ.ಗಳು (Subject Matter Experts), ಮಾದರಿ ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತಾಂತ್ರಿಕ ಕಾರ್ಯಾಗಾರಗಳನ್ನು ನಡೆಸುವುದು ಸೇರಿದಂತೆ 1800 ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಮೂಡಿಸುವಲ್ಲಿ ಕಾವೇರಿ ಕೂಗು ತಂಡಕ್ಕೆ ಕರ್ನಾಟಕ ಸರ್ಕಾರದೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಕಾವೇರಿ ಕೂಗು ಅಭಿಯಾನ ರೈತ ಸಹಾಯವಾಣಿ ಮತ್ತು ವಾಟ್ಸಾಪ್ ಗುಂಪುಗಳ ಮೂಲಕ 51,500 ಕ್ಕೂ ಹೆಚ್ಚು ರೈತರಿಗೆ ಬೆಂಬಲ ನೀಡುತ್ತಿದೆ.
Published On - 12:40 pm, Tue, 7 February 23