AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಎಂಡಿ ಸತ್ಯವತಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೇಳಿದ್ದ BMTC ಚಾಲಕ ಅಮಾನತು

ಎಂಡಿ ಸಹಿ ಪೋರ್ಜರಿ ಮಾಡಿದವರಿಗೆ ಕೇವಲ ಟ್ರಾನ್ಸ್ಫರ್ ನೀಡಲಾಗಿದೆ. ಆದ್ರೆ ನ್ಯಾಯ ಕೇಳಿದವನಿಗೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

ಬಿಎಂಟಿಸಿ ಎಂಡಿ ಸತ್ಯವತಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೇಳಿದ್ದ BMTC ಚಾಲಕ ಅಮಾನತು
ತ್ಯಾಗರಾಜ್
TV9 Web
| Updated By: ಆಯೇಷಾ ಬಾನು|

Updated on:Feb 07, 2023 | 1:19 PM

Share

ಬೆಂಗಳೂರು: ಬಿಎಂಟಿಸಿ ಎಂಡಿ ಜಿ. ಸತ್ಯವತಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೇಳಿದ್ದ BMTC ಚಾಲಕ ತ್ಯಾಗರಾಜ್​ನನ್ನು ಅಮಾನತು ಮಾಡಲಾಗಿದೆ. ಎಂಡಿ ಸಹಿ ಪೋರ್ಜರಿ ಮಾಡಿದವರಿಗೆ ಕೇವಲ ಟ್ರಾನ್ಸ್ಫರ್ ನೀಡಲಾಗಿದೆ. ಆದ್ರೆ ನ್ಯಾಯ ಕೇಳಿದವನಿಗೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿಯಲ್ಲಿ ಸಾಲು ಸಾಲು ಅಕ್ರಮ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ದಾಖಲೆ ಸಮೇತ ಎಂಡಿ ಸತ್ಯವತಿಗೆ ಚಾಲಕ ತ್ಯಾಗರಾಜ್ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ದೂರುದಾರ ತ್ಯಾಗರಾಜ್​ಗೆ ಬಿಎಂಟಿಸಿ ನಿಗಮ ನೋಟಿಸ್​ ನೀಡಿತ್ತು. ಇದರಿಂದ ನೊಂದು ಚಾಲಕ ತ್ಯಾಗರಾಜ್ ರಾಜ್ಯಪಾಲ ಗೆಹ್ಲೋಟ್​, ಸಾರಿಗೆ ‌ಇಲಾಖೆ ಸೆಕ್ರೆಟರಿ ಪ್ರಸಾದ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷಾಗೆ ಪತ್ರ ಬರೆದು ನ್ಯಾಯ ಕೇಳಿದ್ದರು. ಆದ್ರೆ ಈಗ ತ್ಯಾಗರಾಜ್ ಸಸ್ಪೆಂಡ್ ಮಾಡಿ ಬಿಎಂಟಿಸಿ ಎಂಡಿ ಸತ್ಯವತಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಬಿಎಂಟಿಸಿಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಟಿವಿ9 ಧ್ವನಿ ಎತ್ತಿತ್ತು. ಟಿವಿ9ನಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ಬಿಎಂಟಿಸಿ ಎಂ.ಡಿ ಗೆ ಪತ್ರ ಬಂದಿತ್ತು. BMTC ಚಾಲಕ ತ್ಯಾಗರಾಜು ಇತಿಹಾಸದಲ್ಲೇ ಮೊದಲ ಬಾರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ರು. ಬಿಎಂಟಿಸಿ ಎಂಡಿ ಸತ್ಯವತಿಯನ್ನ ಅಮಾನತು ಮಾಡುವಂತೆ ರಾಜ್ಯಪಾಲರಿಗೆ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಚಾಲಕ ನೀಡಿದ್ದ ದೂರನ್ನು ಪರಿಶೀಲಿಸುವಂತೆ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿ‌.ಎಸ್ ಆದೇಶಿಸಿದ್ದರು. ಈಗ ಈ ವಿಷಯ ಪರಿಶೀಲನೆ ಮಾಡುವಂತೆ ಟ್ರಾನ್ಸ್ಪೋರ್ಟ್ ಅಂಡರ್ ಸೆಕ್ರೆಟರಿಯಿಂದ ಪತ್ರ ಬಂದಿದೆ.

ಇದನ್ನೂ ಓದಿ: ಬೆಂಗಳೂರು: ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ

ಬಿಎಂಟಿಸಿ ಎಂಡಿ ಸಹಿ ನಕಲು: 18 ಅಧಿಕಾರಿಗಳ ವರ್ಗ

ಬೃಹತ್​ ಬೆಂಗಳೂರು ಮಹಾನಗರ ಸಾರಿಗೆ (BMTC) ವ್ಯವಸ್ಥಾಪಕ ನಿರ್ದೇಶಕರ ಸಹಿಯನ್ನು ಅಧಿಕಾರಿಗಳು ನಕಲು ಮಾಡಿದ್ದ ಪ್ರಕರಣ ಬಯಲಾದ ಬೆನ್ನಲ್ಲೇ ಕೇಂದ್ರ ಕಚೇರಿಯಲ್ಲಿ ಮೇಜರ್ ಸರ್ಜರಿ ನಡೆದಿದೆ. ಸಹಿಯನ್ನು ನಕಲು ಮಾಡಿದ್ದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂ.ಡಿ ಸತ್ಯವತಿ ಆದೇಶ ಹೊರಡಿಸಿದ್ದಾರೆ.

ವರ್ಗಗೊಂಡ ಅಧಿಕಾರಿಗಳು

1. ಶ್ಯಾಮಲಾ ಮುದ್ದೋಡಿ, ವಿಭಾಗೀಯ ಸಂಚಾರಿ ಅಧಿಕಾರಿ ಸಂಚಾರಿ ವಾಣಿಜ್ಯ ಶಾಖೆ

2. ಪ್ರತಿಮಾ ಎಸ್ ವಿ ವಿಭಾಗೀಯ ಸಂಚಾರಿ ಅಧಿಕಾರಿ

3. ಅನಿತಾ ಟಿ ಸಹಾಯಕ ಸಂಚಾರ ಅಧೀಕ್ಷಕಿ ಸಂಚಾರಿ ವಾಣಿಜ್ಯ ಶಾಖೆ

4. ಮೋಹನ್ ಬಾಬು, ಸಹಾಯಕ ಸಂಚಾರಿ ಅಧೀಕ್ಷಕ

5. ಸತೀಶ್- ಸಂಚಾರಿ ನಿರೀಕ್ಷಕ ಸಂಚಾರಿ ವಾಣಿಜ್ಯ ಶಾಖೆ

6. ಗುಣಶೀಲ, ಸಹಾಯಕ ಸಂಚಾರಿ ನಿರೀಕ್ಷಕಿ, ಸಂಚಾರಿ ವಾಣಿಜ್ಯ ಶಾಖೆ

7. ಪವಿತ್ರ, ಸಹಾಯಕ ಸಂಚಾರಿ ನಿರೀಕ್ಷಕಿ ಸಂಚಾರ ಆಚರಣೆ ಶಾಖೆ

8. ಲಕ್ಷ್ಮಿನಾರಾಯಣ, ಸಹಾಯಕ ನಿಯಂತ್ರಕ.

9. ರಮೇಶ್, ಸಂಚಾರಿ ನಿಯಂತ್ರಕ

10. ಗಣಪಯ್ಯ ಸಹಾಯಕ ಲೆಕ್ಕಿಗ

11. ಸುದೇವಿ, ಸಹಾಯಕಿ

12. ಬಿ ಎಸ್ ಲತಾ, ಸಹಾಯಕಿ

13. ಪ್ರಸನ್ನ ಕುಮಾರ್ ಅಂಗಡಿ, ಕಿರಿಯ ಸಹಾಯಕ

14. ಪರಮೇಶ್ವರ್ ಕುಶಲಕರ್ಮಿ

15. ಮಂಜುಳ, ನಿರ್ವಾಹಕಿ

16. ಕಾರ್ತಿಕ ಜಿ, ಕಚೇರಿ ಸಹಾಯಕ

17. ಮುನಿರಾಜ್ ಎಸ್, ಕಚೇರಿ ಸಹಾಯಕ

18. ಚೇತನ ಸಂಚಾರಿ ನಿರೀಕ್ಷಕಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:40 pm, Tue, 7 February 23