ಬೆಂಗಳೂರು; ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಇಬ್ಬರ ದುರ್ಮರಣ

| Updated By: ಆಯೇಷಾ ಬಾನು

Updated on: Jul 25, 2021 | 12:28 PM

ರೈಲು ಬರುವುದು ಗಮನಿಸದೆ ಹಳಿ ದಾಟಲು ಯತ್ನಿಸಿದ್ದು ರೈಲಿಗೆ ಸಿಕ್ಕಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಬೈಯಪ್ಪನ ಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್ನಲ್ಲಿ ಘಟನೆ ನಡೆದಿದೆ.

ಬೆಂಗಳೂರು; ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಇಬ್ಬರ ದುರ್ಮರಣ
ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಇಬ್ಬರ ದುರ್ಮರಣ
Follow us on

ಬೆಂಗಳೂರು: ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಭದ್ರಪ್ಪ ಲೇಔಟ್ನಲ್ಲಿ ಸಂಭವಿಸಿದೆ. ಓರ್ವ ಪುರುಷ(30) ಮತ್ತು ಓರ್ವ ಮಹಿಳೆ(40) ಮೃತ ಪಟ್ಟಿದ್ದಾರೆ.

ರೈಲು ಬರುವುದು ಗಮನಿಸದೆ ಹಳಿ ದಾಟಲು ಯತ್ನಿಸಿದ್ದು ರೈಲಿಗೆ ಸಿಕ್ಕಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಬೈಯಪ್ಪನ ಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್ನಲ್ಲಿ ಘಟನೆ ನಡೆದಿದೆ. ಸದ್ಯ ಎರಡು ಮೃತದೇಹಗಳನ್ನು ಬೋರಿಂಗ್ ಆಸ್ಪತ್ರೆಗೆ ರವಾನಿಸಲಾಗಿದ್ದು ಪೊಲೀಸರು ಮೃತರ ಗುರುತು ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಕೈ ಸೇರಲಿದೆ ’ಸಂಧ್ಯಾ ಕಾಲ‘ದ ಸಂದೇಶ; ಹೈಕಮಾಂಡ್​ ಅಂತಿಮ ನಿರ್ಧಾರಕ್ಕೆ ಕ್ಷಣಗಣನೆ